ವಿಷ್ಣುವಿನ ಪ್ರಿಯ ರಾಶಿಗಳಿವು... ಆಪತ್ತು ಕಳೆದು ಸುಖವನ್ನಷ್ಟೇ ನೀಡಿ ಸಿರಿ ಸಂಪತ್ತು ಧಾರೆ ಎರೆಯುವನು!

Fri, 21 Jun 2024-6:39 am,

ವಿಷ್ಣುವಿನ ನೆಚ್ಚಿನ ರಾಶಿಗಳು: ವಿಷ್ಣು ದೇವರಿಗೆ ಇಷ್ಟ ರಾಶಿಗಳು ಎಂದಿಗೂ ಜೀವನದಲ್ಲಿ ಕಷ್ಟದಲ್ಲಿ ಮುಳುಗುವುದಿಲ್ಲ. ಹಣದ ಕೊರತೆಯನ್ನ ಎದುರಿಸುವುದಿಲ್ಲ.

ವೃಷಭ ರಾಶಿ: ವಿಷ್ಣುವಿನ ಅತ್ಯಂತ ರಾಶಿಯಾಗಿದೆ. ಆದ್ದರಿಂದಲೇ ಈ ರಾಶಿಗೆ ವಿಶೇಷ ಮಹತ್ವವಿದೆ. ಈ ರಾಶಿಯ ಜನರು ಏನೇ ಮಾಡಿದರೂ ಅದರಲ್ಲಿ ಯಶಸ್ಸನ್ನು ಪಡೆಯುತ್ತಾರೆ. ವೈವಾಹಿಕ ಜೀವನದಲ್ಲಿನ ಸಮಸ್ಯೆಗಳು ಬಂದರೆ ಸುಲಭವಾಗಿ ಪರಿಹಾರವಾಗುತ್ತದೆ. ವಿಷ್ಣುವಿನ ಕೃಪೆಯಿಂದ ಸಂತೋಷದ ಜೀವನವನ್ನು ನಡೆಸುತ್ತಾರೆ.

ತುಲಾ ರಾಶಿ: ವಿಷ್ಣುವಿನ ಆಶೀರ್ವಾದ ಸದಾ ಕಾಲ ತುಲಾ ರಾಶಿಯವರ ಮೇಲಿರುತ್ತದೆ. ಅಪಾರ ಆರ್ಥಿಕ ಲಾಭವನ್ನೂ ಪಡೆಯುವಿರಿ. ಎಲ್ಲ ಕೆಲಸಗಳನ್ನು ಸುಲಭವಾಗಿ ಪೂರ್ಣಗೊಳಿಸುವಿರಿ. ಏನೇ ತೊಂದರೆಗಳು ಬಂದರೂ ಸಹ ಬಹಳ ಸುಲಭವಾಗಿ ದೂರವಾಗುತ್ತವೆ.

ಸಿಂಹ ರಾಶಿ: ವಿಷ್ಣು ದೇವರಿಗೂ ಸಿಂಹ ರಾಶಿಯೆಂದರೆ ತುಂಬಾ ಇಷ್ಟ. ಅನೇಕ ಲಾಭಗಳನ್ನು ಪಡೆಯುತ್ತೀರಿ. ನೀವು ಮಾಡಿದ ಕಠಿಣ ಪರಿಶ್ರಮಕ್ಕೆ ಸೂಕ್ತವಾದ ಫಲಿತಾಂಶ ಪಡೆಯುತ್ತೀರಿ. ಇದರೊಂದಿಗೆ ಸಮಾಜದಲ್ಲಿ ಗೌರವವೂ ದುಪ್ಪಟ್ಟಾಗುತ್ತದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಯಶಸ್ಸನ್ನು ಪಡೆಯುತ್ತಾರೆ.

ಕಟಕ ರಾಶಿ: ಈ ರಾಶಿಯ ಜನರು ಯಾವಾಗಲೂ ವಿಷ್ಣುವಿನ ಅನುಗ್ರಹವನ್ನು ಪಡೆಯುತ್ತಾರೆ. ಪ್ರತಿ ಕೆಲಸದಲ್ಲಿ ಯಶಸ್ವಿಯಾಗುತ್ತಾರೆ. ಆರ್ಥಿಕ ಪರಿಸ್ಥಿತಿಯಲ್ಲಿ ತೊಂದರೆ ಅನುಭವಿಸುವುದಿಲ್ಲ. ಜೀವನದಲ್ಲಿ ಏನೇ ಕಷ್ಟ ಬಂದರೂ ಎದುರಿಸಿ ನಿಲ್ಲುತ್ತಾರೆ. 

ಸೂಚನೆ: ಪ್ರಿಯ ಓದುಗರೇ ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ವಿಚಾರಗಳನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ತಜ್ಞರ ಸಲಹೆಯನ್ನು ಪಡೆಯಿರಿ. Zee Kannada News ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link