Lost your ATM debit card?: ಬ್ಲಾಕ್ ಮಾಡುವುದು, ಬದಲಿ ಕಾರ್ಡ್ ಪಡೆಯುವುದು ಹೇಗೆಂದು ತಿಳಿಯಿರಿ..?

Tue, 31 Aug 2021-4:13 pm,

ಒಂದು ವೇಳೆ ಗ್ರಾಹಕರು ತಮ್ಮ ಡೆಬಿಟ್ ಕಾರ್ಡ್ ಕಳೆದುಕೊಂಡರೆ ಬ್ಯಾಂಕಿನ ಟೋಲ್-ಫ್ರೀ ಸಂಖ್ಯೆ 1800 11 2211 ಅಥವಾ 1800 425 3800 ಗೆ ಕರೆ ಮಾಡಬೇಕು. ಬಳಿಕ ಕಾರ್ಡ್ ನಿರ್ಬಂಧಿಸಲು ಕೇಳಲಾಗುವ ಹಂತಗಳನ್ನು ಅನುಸರಿಸಬೇಕು. ಗ್ರಾಹಕರು ತಮ್ಮ ನೋಂದಾಯಿತ ಫೋನ್ ಸಂಖ್ಯೆಯಿಂದ ತಮ್ಮ ಸಕ್ರಿಯ ಡೆಬಿಟ್ ಕಾರ್ಡ್ ಮಾತ್ರ ನಿರ್ಬಂಧಿಸಬಹುದು. ಬಹುಮುಖ್ಯವಾಗಿ ಕಾರ್ಡ್ ಸಂಖ್ಯೆಯನ್ನು ಗ್ರಾಹಕರು ನೆನಪಿನಲ್ಲಿಟ್ಟುಕೊಳ್ಳಬೇಕು.

Here's how you can block your Debit Card and reissue a new one via our toll-free IVR system. Just call 1800 112 211 or 1800 425 3800.#SBI #StateBankOfIndia #IVR #DebitCard pic.twitter.com/htUwqbfGct

— State Bank of India (@TheOfficialSBI) July 20, 2021

ಬ್ಯಾಂಕಿನ ಟೋಲ್-ಫ್ರೀ ಸಂಖ್ಯೆಗೆ ಕರೆ ಮಾಡಿದ ನಂತರ ಕಾರ್ಡ್ ನಿರ್ಬಂಧಿಸಲು ಗ್ರಾಹಕರು O ಒತ್ತಬೇಕು. ನೋಂದಾಯಿತ ಫೋನ್ ಸಂಖ್ಯೆ ಮತ್ತು ಕಾರ್ಡ್ ಸಂಖ್ಯೆಯನ್ನು ಬಳಸಿಕೊಂಡು ಕಾರ್ಡ್ ನಿರ್ಬಂಧಿಸಲು 1 ಅನ್ನು ಒತ್ತಬೇಕು. ನೋಂದಾಯಿತ ಫೋನ್ ಸಂಖ್ಯೆ ಮತ್ತು ಖಾತೆ ಸಂಖ್ಯೆಯನ್ನು ಬಳಸಿಕೊಂಡು ಕಾರ್ಡ್ ನಿರ್ಬಂಧಿಸಲು 2 ಅನ್ನು ಒತ್ತಬೇಕು.

ಕಳೆದುಹೋದ ಕಾರ್ಡ್ ನಿರ್ಬಂಧಿಸಿದ ನಂತರ ಇದರ ಬಗ್ಗೆ ನಿಮಗೆ ದೃಢೀಕರಣ ಸಂದೇಶ ಬರುತ್ತದೆ. ಬಳಿಕ 1 ಅನ್ನು ಒತ್ತಿ ನಿಮ್ಮ ಜನ್ಮ ದಿನಾಂಕ ನಮೂದಿಸುವ ಮೂಲಕ ಬದಲಿ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಬಹುದು. ನಂತರ ಹೊಸ ಕಾರ್ಡ್‌ಗಾಗಿ ಆದೇಶವನ್ನು ದೃಢೀಕರಿಸಲು 1 ಅನ್ನು ಒತ್ತಿ ಅಥವಾ ರದ್ದುಗೊಳಿಸಲು ಬಯಸಿದರೆ 2 ಒತ್ತಬೇಕು. ಈ ಪ್ರಕ್ರಿಯೆ ಮುಗಿದ ಬಳಿಕ ಗ್ರಾಹಕರ ನೋಂದಾಯಿತ ವಿಳಾಸಕ್ಕೆ ಹೊಸ ಕಾರ್ಡ್ ಕಳುಹಿಸಲಾಗುತ್ತದೆ ಮತ್ತು ಇದಕ್ಕೆ ನಿಮ್ಮ ಖಾತೆಯಿಂದಲೇ ಶುಲ್ಕ ವಿಧಿಸಲಾಗುತ್ತದೆ.

ಗ್ರಾಹಕರು ತಮ್ಮ ಕಾರ್ಡ್ ಅನ್ನು SMS ಮೂಲಕವೂ ನಿರ್ಬಂಧಿಸಬಹುದು. ಗ್ರಾಹಕರು ಕಾರ್ಡ್‌ನ ಕೊನೆಯ 4 ಅಂಕಿಗಳೊಂದಿಗೆ ‘Block’ ಸಂದೇಶವನ್ನು ಟೈಪ್ ಮಾಡಿ 567676 ಸಂಖ್ಯೆಗೆ ಕಳುಹಿಸಬೇಕು. ಇದರ ನಂತರ ಗ್ರಾಹಕರು ಕಾರ್ಡ್ ಬ್ಲಾಕ್ ಅನ್ನು ದೃಢೀಕರಿಸಲು ಬ್ಯಾಂಕಿನಿಂದ ಟಿಕೆಟ್ ನಂಬರ್, ದಿನಾಂಕ ಮತ್ತು ನಿರ್ಬಂಧಿಸುವ ಸಮಯವುಳ್ಳ ಸಂದೇಶವನ್ನು ಪಡೆಯುತ್ತಾರೆ.  

ನಿಮ್ಮ ಕಳೆದುಹೋದ ಡೆಬಿಟ್ ಕಾರ್ಡ್ ಅನ್ನು ನೀವು SBI YONO ಆಪ್ ಮೂಲಕ ಅಥವಾ SBI ನ ಅಧಿಕೃತ ವೆಬ್‌ಸೈಟ್ onlinesbi.com ಗೆ ಭೇಟಿ ನೀಡುವ ಮೂಲಕವೂ ನಿರ್ಬಂಧಿಸಬಹುದು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link