Soaked Walnut : ನಿತ್ಯ ನೀರಿನಲ್ಲಿ ನೆನೆಸಿಟ್ಟ ಎರಡು ಆಕ್ರೋಟ್ ಸೇವಿಸಿ; ಪ್ರಯೋಜನ ತಿಳಿದರೆ ದಂಗಾಗುವಿರಿ
ವಾಲ್ ನಟ್ ನಲ್ಲಿ ಪ್ರೋಟೀನ್, ಹೆಲ್ದಿ ಫ್ಯಾಟ್, ಕಾರ್ಬೋಹೈಡ್ರೇಟ್ ಮತ್ತು ಫೈಬರ್ ಸಮೃದ್ಧವಾಗಿದೆ. ಆದರೆ ವಾಲ್ ನಟ್ಸ್ ಅನ್ನು ಕಚ್ಚಾ ತಿನ್ನುವ ಬದಲು ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಮರುದಿನ ಖಾಲಿ ಹೊಟ್ಟೆಯಲ್ಲಿ ತಿನ್ನುತ್ತಿದ್ದರೆ ಅದು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಪ್ರತಿದಿನ ನೆನೆಸಿದ ಕೇವಲ 2 ಆಕ್ರೋಟ್ ತಿಂದರೆ, ಅದು ಅನೇಕ ರೋಗಗಳಿಂದ ನಿಮ್ಮನ್ನು ಕಾಪಾಡುತ್ತದೆ.
ಕರೋನಾ ಹಿನ್ನೆಲೆಯಲ್ಲಿ ಈಗ ಬಹುತೇಕ ಮಂದಿ ವರ್ಕ್ ಫ್ರಮ್ ಹೋಂ ಮಾಡುತ್ತಿರುತ್ತಾರೆ. ಇದರಿಂದ ದೈಹಿಕ ಚಟುವಟಿಕೆಯೆ ಇಲ್ಲದಂತಾಗಿದೆ. ಆಹಾರ ಸೇವಿಸಿದ ನಂತರ ದೀರ್ಘಕಾಲ ಕುಳಿತುಕೊಳ್ಳುವುದರಿಂದ, ಮಲಬದ್ಧತೆಯ ಸಮಸ್ಯೆ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ, ಫೈಬರ್ ತುಂಬಿದ ನೆನೆಸಿದ ಆಕ್ರೋಟ್ ಸೇವನೆ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ.
ನೆನೆಸಿದ ವಾಲ್ ನಟ್ ತಿನ್ನುವುದರಿಂದ ದೇಹ ತೂಕ ಇಳಿಸಿಕೊಳ್ಳಲು ಸಹ ಸಹಾಯ ಮಾಡುತ್ತದೆ. ಇದಕ್ಕೆ ಕಾರಣವೆಂದರೆ ಆಕ್ರೋಟ್ ನಲ್ಲಿ ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಐರನ್, ಕಾಪರ್, ಝಿಂಕ್ ನ ಅಂಶವು ಗಮನಾರ್ಹ ಪ್ರಮಾಣದಲ್ಲಿ ಕಂಡುಬರುತ್ತವೆ. ಇದು ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ದೇಹದಿಂದ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ನೆನೆಸಿದ ಆಕ್ರೋಟ್ ಸೇವನೆಯಿಂದ ಟೈಪ್ 2 ಡಯಾಬಿಟಿಸ್ ನಿಂದಲೂ ಮುಕ್ತಿ ಸಿಗಬಹುದು. ಆಕ್ರೋಟ್ ಬ್ಲಡ್ ಶುಗರ್ ಲೆವೆಲ್ ಅನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
ನೆನೆಸಿದ ವಾಲ್ ನಟ್ ನಲ್ಲಿ ಅಲ್ಪಾ ಲಿನೊಲೆನಿಕ್ ಆಸಿಡ್ ಇರುತ್ತದೆ. ಇದು ಮೂಳೆಗಳನ್ನು ಬಲಿಷ್ಟಗೊಳಿಸುತ್ತದೆ. ಅಲ್ಲದೆ, ಮೂಳೆ ಮುರಿತಕ್ಕೊಳಗಾಗಿದ್ದರೆ ಮತ್ತೆ ಜೋಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಾಲ್ ನಟ್ ನಲ್ಲಿರುವ ಒಮೆಗಾ 3, ಫ್ಯಾಟಿ ಆಸಿಡ್ ಮೂಳೆಯ ಊತವನ್ನು ಹೋಗಲಾಡಿಸಲು ಸಹಯ ಮಾಡುತ್ತದೆ.