Love Hormone: ಈ 5 ಆಹಾರ-ಪಾನೀಯಗಳ ಸೇವನೆಯಿಂದ ಹೆಚ್ಚಾಗುತ್ತದೆ ಲವ್ ಹಾರ್ಮೋನ್
1. ಡಾರ್ಕ್ ಚಾಕ್ಲೆಟ್ - ಈ ಆಹಾರ ಪದಾರ್ಥದ ಹೆಸರು ಕೇಳುತ್ತಿದ್ದಂತೆಯೇ ಬಾಯಿಯಲ್ಲಿ ನೀರೂರುತ್ತದೆ. ಆದರೆ, ಇದನ್ನೂ ಸೇವಿಸುವುದರಿಂದ ಮೂಡ್ ತುಂಬಾ ಉತ್ತಮವಾಗಿರುತ್ತದೆ ಎಂಬ ಸಂಗತಿ ನಿಮಗೆ ತಿಳಿದಿದೆಯೇ? ಹೌದು, ಇದರಿನ ಮೂಡ್ ಉತ್ತಮವಾಗಿ ಮನಸ್ಸಿನಲ್ಲಿ ಲವ್ ಮಾಡುವ ಭಾವನೆ ಹೆಚ್ಚಾಗುತ್ತದೆ.
2. ಬ್ರೋಕೊಲಿ - ಹಸಿರು ತರಕಾರಿಗಳಲ್ಲಿ ಬ್ರೋಕೊಲಿಯನ್ನು ಆರೋಗ್ಯಕ್ಕೆ ಅತ್ಯಂತ ಲಾಭಕಾರಿ ಎಂದು ಪರಿಗಣಿಸಲಾಗುತ್ತದೆ. ಇದು ಹಲವು ವಿಟಮಿನ್ ಗಳ ಆಗರವಾಗಿದೆ. ಇದನ್ನು ಸೇವಿಸುವುದರಿಂದ ಶರೀರಕ್ಕೆ ಸಾಕಷ್ಟು ಶಕ್ತಿ ಸಿಗುತ್ತದೆ ಮತ್ತು ಆಕ್ಸಿಟೋಶಿನ್ ಹಾರ್ಮೋನ್ ಕೂಡ ಹೆಚ್ಚು ಸ್ರವಿಕೆಯಾಗುತ್ತದೆ.
3. ಕಾಫಿ: ಕಾಫಿ ಟೇಬಲ್ ಮೇಲೆ ಒಟ್ಟಿಗೆ ಕುಳಿತುಕೊಳ್ಳುವುದರಿಂದಲೂ ಕೂಡ ಮೂಡ್ ಬದಲಾಗುತ್ತದೆ ಎನ್ನಲಾಗುತ್ತದೆ. ಇದೆ ಕಾರಣದಿಂದ ಲವ್ ಬರ್ಡ್ಸ್ ಯಾವಾಗಲು ಕಾಫಿ ಶಾಪ್ ನಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಪನೀಯದಲ್ಲಿರುವ ಕ್ಯಾಫಿನ್ ಆಕ್ಸಿಟೋಸಿನ್ ನಮ್ಮ ದೇಹದೊಳಗೆ ನ್ಯೂರಾನ್ಸ್ ಅನ್ನು ಎಕ್ಸೈಟ್ ಮಾಡುತ್ತದೆ ಮತ್ತು ಇದರಿಂದ ನಮ್ಮ ಭಾವನೆಗಳಿಗೆ ಉತ್ತೇಜನ ಸಿಗುತ್ತದೆ ಹಾಗೂ ಜೋಡಿಗಳು ತಮ್ಮ ಮನದಾಳದ ಮಾತುಗಳನ್ನಾಡಲು ಆರಂಭಿಸುತ್ತಾರೆ ಎನ್ನಲಾಗಿದೆ.
4. ಚಿಯಾ ಬೀಜಗಳು - ಈ ಬೀಜಗಳ ಸೇವನೆಯಿಂದ ಭಾವನೆಗಳಿಗೆ ಉತ್ತೇಜನ ಸಿಗುತ್ತದೆ ಹಾಗೂ ನೀವು ನಿಮ್ಮ ಸಂಗಾತಿಯ ಜೋತೆಗೆ ಬಹಿರಂಗವಾಗಿ ಮಾತನಾಡಲು ಆರಭಿಸುವಿರಿ ಎನ್ನಲಾಗುತ್ತದೆ. ಹಲವು ವಿಧಗಳಲ್ಲಿ ಅವುಗಳನ್ನು ನೀವು ಸೇವಿಸಬಹುದು. ನೀರಿನಲ್ಲಿ ನೆನೆಹಾಕಿಯೂ ಕೂಡ ನೀವು ಚೀಯಾ ಬೀಜಗಳನ್ನು ಸೇವಿಸಬಹುದು.
5. ಕಿತ್ತಳೆ ಹಣ್ಣಿನ ರಸ - ಈ ಹಣ್ಣಿನಲ್ಲಿ ಹೇರಳ ಪ್ರಮಾಣದಲ್ಲಿ ವಿಟಮಿನ್ ಸಿ ಕಂಡುಬರುತ್ತದೆ ಹಾಗೂ ಈ ಹಣ್ಣಿನ ಆಂಟಿಆಕ್ಸಿಡೆಂಟ್ ಗುಣಧರ್ಮಗಳು ನಮ್ಮ ಶರೀರದಲ್ಲಿ ಸಕಾರಾತ್ಮಕ ಪ್ರಭಾವ ಬೀರುತ್ತದೆ. ಇದರಿಂದ ಮೈಂಡ್ ಫುಲ್ ಆದ ಭಾವನೆ ಉಂಟಾಗುತ್ತದೆ ಹಾಗೂ ಪ್ರೀತಿ ಮಾಡುವ ಭಾವನೆ ಹೆಚ್ಚಾಗುತ್ತದೆ.