Love Hormone: ಶರೀರದಲ್ಲಿ ನೈಸರ್ಗಿಕವಾಗಿ ಲವ್ ಹಾರ್ಮೋನನ್ನು ಹೆಚ್ಚಿಸುತ್ತವೆ ಈ ಹಣ್ಣುಗಳು!
)
ಖರ್ಬುಜಾ- ಖರ್ಬುಜಾದಲ್ಲಿ ಹಲವು ರೀತಿಯ ಆಂಟಿ ಆಕ್ಸಿಡೆಂಟ್ ಗಳಿರುತ್ತವೆ. ಅವು ನಮ್ಮ ಶರೀರಕ್ಕೆ ಹಲವು ರೀತಿಯಲ್ಲಿ ಲಾಭ ನೀಡುತ್ತವೆ. ಟೆಸ್ಟೊಸ್ಟೇರಾನ್ ಹಾಗೂ ಈಸ್ಟ್ರೊಜನ್ ಹಾರ್ಮೋನುಗಳ ಸ್ರವಿಕೆಯಲ್ಲಿ ಇದು ಮಹತ್ವದ ಪಾತ್ರ ನಿರ್ವಹಿಸುತ್ತದೆ.
)
ಅವಕಾಡೊ- ಅವಕಾಡೊ ಒಂದು ಸೂಪರ್ ಫುಡ್ ಆಗಿದೆ. ಇದರಲ್ಲಿ ಗುಡ್ ಕೊಲೆಸ್ಟ್ರಾಲ್ ಜೊತೆಗೆ ಟೆಸ್ಟೊಸ್ಟೇರಾನ್ ಹಾರ್ಮೋನು ಸ್ರವಿಕೆ ಹೆಚ್ಚಿಸುವ ಹಲವು ರಸಾಯನಗಳಿವೆ.
)
ಫ್ಯಾಟಿ ಫಿಶ್- ಸೇಲ್ಮನ್, ಟೂನಾ ಇತ್ಯಾದಿ ಫ್ಯಾಟಿ ಫಿಶ್ ಗಳು ಹಾರ್ಮೋನಲ್ ಆರೋಗ್ಯಕ್ಕೆ ತುಂಬಾ ಲಾಭಕಾರಿಯಾಗಿವೆ. ಈ ಫ್ಯಾಟಿ ಫಿಶ್ ಗಳು ನಮ್ಮ ಶರೀರದಲ್ಲಿ ಲವ್ ಹಾರ್ಮೋನುಗಳನ್ನು ಬೂಸ್ಟ್ ಮಾಡುತ್ತವೆ.
ಕೋಕೋಆ- ಡಾರ್ಕ್ ಚಾಕ್ಲೇಟ್, ಕಾಫಿ ಇತ್ಯಾದಿಗಳಲ್ಲಿ ಕೋಕೋಆ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತದೆ. ಇವುಗಳಲ್ಲಿ ಹೆಚ್ಚಿನ ಪ್ರಮಾಣದ ಮೇಗ್ನೇಸಿಯಮ್ ಮತ್ತು ಫ್ಲೇವೇನಾಯ್ಡ್ ಗಳಿರುತ್ತವೆ ಇವು ಟೆಸ್ಟೊಸ್ಟೇರಾನ್ ಹಾಗೂ ಈಸ್ಟ್ರೊಜನ್ ಸ್ರವಿಕೆಯನ್ನು ಹೆಚ್ಚಿಸುತ್ತವೆ.
ಬೆರ್ರಿ ಹಣ್ಣುಗಳು- ಚೆರ್ರಿ, ಸ್ಟ್ರಾಬೇರಿ, ರಾಸ್ಪಬೆರ್ರಿ, ನೇರಳೆ ಹಣ್ಣು ಇತ್ಯಾದಿಗಳಲ್ಲಿ ಫ್ಲೇವಯಾಯ್ಡ್ ಹಾಗೂ ಹಲವು ರೀತಿಯ ಆಂಟಿ ಆಕ್ಸಿಡೆಂಟ್ ಗಳು ಹೇರಳ ಪ್ರಮಾಣದಲ್ಲಿವೆ. ಇವು ಈಸ್ಟ್ರೊಜನ್ ಸ್ರವಿಕೆಯನ್ನು ಮಾಡುವ ಕೋಶಗಳನ್ನು ಹಾನಿಯಿಂದ ರಕ್ಷಿಸುತ್ತವೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)