ಮಾಜಿ ಕೇಂದ್ರ ಸಚಿವರ ಪುತ್ರಿ, ಮದುವೆಯಾದ ಮೂರೇ ತಿಂಗಳಿಗೆ ಪತಿಯ ಈ ಚಟ`ದಿಂದ ಬೇಸತ್ತ ನಟಿ! ಏಕೆ ಗೊತ್ತಾ?

Wed, 02 Oct 2024-9:49 am,

ಕೆಲವೇ ದಿನಗಳ ಹಿಂದಷ್ಟೇ ತಮ್ಮ ವಿವಾಹದ ಬಗ್ಗೆ ಭಾರೀ ಚರ್ಚೆಯಲ್ಲಿದ್ದ ಖ್ಯಾತ ನಟಿ ಇದೀಗ ಮತ್ತೆ ಟ್ರೋಲ್‌ಗೆ ಒಳಗಾಗಿದ್ದಾರೆ. 

ಮಾಜಿ ಕೇಂದ್ರ ಸಚಿವ ಶತ್ರುಘ್ನ ಸಿನ್ಹಾ ಪುತ್ರಿ ಖ್ಯಾತ ನಟಿ ಸೋನಾಕ್ಷಿ ಸಿನ್ಹಾ ಮೂರು ತಿಂಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 

ಮನೆಯವರ ವಿರೋಧದ ನಡುವೆಯೂ ತನಗಿಂತಲೂ 2 ವರ್ಷ ಕಿರಿಯವನಾದ ನಟ  ಜಹೀರ್ ಇಕ್ಬಾಲ್ ಅವರೊಂದಿಗೆ ಸೋನಾಕ್ಷಿ ಸಿನ್ಹಾ ಮದುವೆಯಾಗಿದ್ದಾರೆ. 

ಸುಮಾರು ಏಳು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ ಅನ್ಯ ಧರ್ಮದವರಾದರೂ ಮೂರು ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು. ಇಬ್ಬರೂ ಬೇರೆ ಬೇರೆ ಧರ್ಮಕ್ಕೆ ಸೇರಿದವರಾಗಿದ್ದರಿಂದ ಮದುವೆ ವಿವಾದಕ್ಕೆ ಕಾರಣವಾಗಿತ್ತು.

ಈ ಜೋಡಿ 7 ವರ್ಷ ಪ್ರೀತಿಸಿ ಮದುವೆಯಾಗಿದ್ದರೂ, ಮದುವೆಯಾಗಿ ಮೂರೇ ತಿಂಗಳಿಗೆ ಸೋನಾಕ್ಷಿ ಸಿನ್ಹಾ ಪತಿಯ ವರ್ತನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. 

ವಾಸ್ತವವಾಗಿ, ಇತ್ತೀಚೆಗಷ್ಟೇ ಸೋನಾಕ್ಷಿ ಸಿನ್ಹಾ- ಜಹೀರ್ ಇಕ್ಬಾಲ್ ಇಬ್ಬರೂ ಸಂದರ್ಶನವೊಂದರಲ್ಲಿ ಪರಸ್ಪರರ ನಡುವಿನ  ಒಳ್ಳೆಯ ಮತ್ತು ಕೆಟ್ಟ ಅಭ್ಯಾಸಗಳ ಮಾತನಾಡುತ್ತಾ ಈ ವಿಷಯ ತಿಳಿಸಿದ್ದಾರೆ. 

ಇದೇ ಸಂದರ್ಶನದಲ್ಲಿ ಸೋನಾಕ್ಷಿ ಪತಿ ಪತ್ನಿಯನ್ನು ಹೊಗಳುತ್ತಾ ಆಕೆ ಸಮಯಕ್ಕೆ ತುಂಬಾ ಬೆಲೆ ಕೊಡುತ್ತಾಳೆ ಈ ಗುಣ ತುಂಬಾ ಇಷ್ಟ. ಆದರೆ, ಆಕೆ ತುಂಬಾ ಸರಳ ಮತ್ತು ವಿನಯವಾಗಿ ವರ್ತಿಸುವುದು ತನಗಿಷ್ಟವಿಲ್ಲ ಎಂದಿದ್ದಾರೆ. 

ಇನ್ನೂ ಪತಿಯಲ್ಲಿ ಇಷ್ಟವಾಗುವ ಗುಣಗಳ ಬಗ್ಗೆಯೂ ಮಾತನಾಡಿರುವ ನಟಿ ಸೋನಾಕ್ಷಿ ಸಿನ್ಹಾ ಜಹೀರ್ ಇಕ್ಬಾಲ್ ಅವರ ಉದಾರತೆ ಮತ್ತು ಎಲ್ಲರಿಗೂ ದಯೆ ತೋರುವ ಗುಣ ತನಗೆ ತುಂಬಾ ಇಷ್ಟ ಎಂದು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಸೋನಾಕ್ಷಿ ತಮ್ಮ ಪತಿಯ "ಶಿಳ್ಳೆ ಹೊಡೆಯುವ ಹಾಗೂ ಇದ್ದಕ್ಕಿದ್ದಂತೆ ಕೂಗುವ" ಅಭ್ಯಾಸದಿಂದ ಬೇಸತ್ತಿರುವುದಾಗಿ ತಿಳಿಸಿದ್ದಾರೆ. 

ನನಗೆ ಶಾಂತಿಯಿಂದ ಇರಬೇಕು. ಆದರೆ, ಜಹೀರ್ ಅವರ ಶಿಳ್ಳೆ ಹೊಡೆಯುವ ಅಭ್ಯಾಸ ನನಗೆ ತುಂಬಾ ಕೋಪ ತರಿಸುತ್ತೆ. ಇದರಿಂದಾಗಿ ಇಬ್ಬರ ನಡುವೆ ಆಗಾಗ ಜಗಳವಾಗುವುದು ಉಂಟು ಎಂದು ನಟಿ ತಮ್ಮ ವೈವಾಹಿಕ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಈ ವಿಚಾರವಾಗಿ ನಟಿ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್‌ಗೂ ಒಳಗಾಗಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link