Low Blood Pressure: ಲೋ ಬಿಪಿ ಸಮಸ್ಯೆ ನಿರ್ಲಕ್ಷಿಸಿದರೆ ಜೀವಕ್ಕೆ ಅಪಾಯ..!
ಲೋ ಬಿಪಿ ಲಕ್ಷಣಗಳು ತ್ವರಿತವಾಗಿ ಕಂಡುಬರುವುದಿಲ್ಲ. ಆದರೆ ಅದನ್ನು ನಿರ್ಲಕ್ಷಿಸುವುದರಿಂದ ಪ್ರಾಣಕ್ಕೇ ಅಪಾಯವಾಗಬಹುದು. ಕಡಿಮೆ ರಕ್ತದೊತ್ತಡದ ಲಕ್ಷಣಗಳೇನು? ಇದನ್ನು ಸುಲಭವಾಗಿ ಹೇಗೆ ಪರಿಹರಿಸಬಹುದು ತಿಳಿದುಕೊಳ್ಳುವುದು ಮುಖ್ಯ. ದೇಹದಲ್ಲಿ ನೀರಿನ ಕೊರತೆ, ಹೆಚ್ಚು ಒತ್ತಡ ಮತ್ತು ದೀರ್ಘಕಾಲದವರೆಗೆ ಹಸಿವು ತಡೆದುಕೊಳ್ಳುವ ಸಾಮರ್ಥ್ಯ ಇವು ಲೋ ಬಿಪಿಯ ಲಕ್ಷಣಗಳವಾಗಿವೆ.
ಲೋ ಬಿಪಿಯ ಯಾವುದೇ ಲಕ್ಷಣಗಳು ಆರಂಭದಲ್ಲಿ ಗೋಚರಿಸುವುದಿಲ್ಲ. ಆದರೆ ಸ್ವಲ್ಪ ಸಮಯದ ನಂತರ ಕೆಲವು ಸಂಕೇತಗಳನ್ನು ದೇಹ ನೀಡಲಾರಂಭಿಸುತ್ತದೆ. ಉದಾಹರಣೆಗೆ ತಲೆತಿರುಗುವಿಕೆ, ದೃಷ್ಟಿ ಮಂದವಾಗುವುದು, ಮೂರ್ಛೆ ಹೋಗುವುದು, ಕೈಕಾಲು ತಣ್ಣಗಾಗುವುದು ಮತ್ತು ಆಯಾಸದ ಭಾವನೆ ಇವೆಲ್ಲವೂ ಲೋ ಬಿಪಿಯ ಲಕ್ಷಣಗಳಾಗಿವೆ.
ಬಿಪಿ ಯಾವಾಗಲೂ ಕಡಿಮೆಯಿದ್ದರೆ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಚೆನ್ನಾಗಿ ನೀರು ಕುಡಿಯಬೇಕು. ದೇಹವನ್ನು ಹೈಡ್ರೇಟ್ ಆಗಿ ಇಟ್ಟುಕೊಳ್ಳಬೇಕು. ಇದಕ್ಕಾಗಿ ನೀವು ದಿನಕ್ಕೆ ಕನಿಷ್ಠ 8 ಲೋಟ ನೀರು ಕುಡಿಯಬೇಕು.
ಬಿಪಿ ಕಡಿಮೆಯಾದರೆ ಉಪ್ಪನ್ನು ಸೇವಿಸಬೇಕು. ಬಿಪಿಯನ್ನು ಸರಿದೂಗಿಸಲು ಆಹಾರದಲ್ಲಿ ಉಪ್ಪಿನ ಪ್ರಮಾಣವನ್ನು ಹೆಚ್ಚಿಸಬೇಕು. ಹೀಗೆ ಮಾಡುವುದರಿಂದ ಬಿಪಿ ಸರಿಯಾಗಿರುತ್ತದೆ. ಲೋ ಬಿಪಿ ಸಮಸ್ಯೆ ಇರುವವರು ಆಹಾರದಲ್ಲಿ ಕೆಫೀನ್ ಹೊಂದಿರುವ ವಸ್ತುಗಳನ್ನು ಸೇರಿಸಿಕೊಳ್ಳಬೇಕು. ಹೀಗೆ ಮಾಡುವುದರಿಂದ ಬಿಪಿ ನಿಯಂತ್ರಣದಲ್ಲಿರುತ್ತದೆ.
ಹಣ್ಣುಗಳನ್ನು ತಿನ್ನುವುದು ಬಿಪಿಯನ್ನು ನಿಯಂತ್ರಣದಲ್ಲಿಡುತ್ತದೆ. ಆದ್ದರಿಂದ ಬಿಪಿಯನ್ನು ನಿಯಂತ್ರಣದಲ್ಲಿಡಲು ಬಯಸಿದರೆ ನೀವು ಋತುಮಾನದ ಹಣ್ಣುಗಳನ್ನು ಸೇವಿಸಲು ಪ್ರಾರಂಭಿಸಬೇಕು.