LPG Booking Offer: Paytm ಮೂಲಕ LPG ಬುಕ್ ಮಾಡಿ 700 ರೂ.ಕ್ಯಾಶ್ ಬ್ಯಾಕ್ ಪಡೆಯಲು ಕೇವಲ ಮೂರೇ ದಿನ ಬಾಕಿ ಉಳಿದಿದೆ
1. ಏನಿದು Paytmನ ಆಫರ್: ಒಂದು ವೇಳೆ ನೀವೂ ಕೂಡ ಈ ಕೊಡುಗೆಯ ಲಾಭವನ್ನು ಪಡೆಯಲು ಬಯಸುತ್ತಿದ್ದರೆ, ಮೊದಲು ನಿಮ್ಮ ಬಳಿ Paytm ಆಪ್ ಇರಬೇಕು. Paytm ಆಪ್ ನಿಂದ ಒಂದು ವೇಳೆ ನೀವು ಮೊದಲ ಬಾರಿಗೆ ಸಿಲಿಂಡರ್ ಬುಕ್ ಮಾಡಿದರೆ, ಈ ಆಫರ್ ಅಡಿ ನೀವು 700 ಕ್ಯಾಶ್ ಬ್ಯಾಕ್ ಪಡೆಯಬಹುದು. ಒಂದೊಮ್ಮೆ ನೀವು ಆಪ್ ಮೂಲಕ ಹಣವನ್ನು ಪಾವತಿಸಿದರೆ, ಸ್ಕ್ರೀನ್ ಮೇಲೆ ನಿಮಗೊಂದು ಸ್ಕ್ರ್ಯಾಚ್ ಕಾರ್ಡ್ ಕಾಣಿಸಿಕೊಳ್ಳಲಿದೆ. ಈ ಸ್ಕ್ರ್ಯಾಚ್ ಕಾರ್ಡ್ ಅನ್ನು ಸ್ಕ್ರ್ಯಾಚ್ ಮಾಡಿ ನೀವು ಕೊಡುಗೆಯನ್ನು ನೋಡಬಹುದು. ಒಂದು ವೇಳೆ ನೀವು ಸ್ಕ್ರ್ಯಾಚ್ ಕಾರ್ಡ್ ಅನ್ನು ಸ್ಕ್ರ್ಯಾಚ್ ಮಾಡದೆ ಹೋದಲ್ಲಿ. ನಂತರ ನೀವು ಅದನ್ನು paytm ಆಪ್ ನ ಕ್ಯಾಶ್ ಬ್ಯಾಕ್ ಹಾಗೂ ಆಫರ್ಸ್ ಸೆಕ್ಷನ್ ಗೆ ಭೇಟಿ ನೀಡಿ ಪುನಃ ಸ್ಕ್ರ್ಯಾಚ್ ಮಾಡಬಹುದು.
2. ಮಾರ್ಚ್ 31ರವರೆಗೆ ಮಾತ್ರ ಈ ಕೊಡುಗೆ: ಸಾಮಾನ್ಯವಾಗಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಿದ ಬಳಿಕ ನಿಮಗೆ 24 ಗಂಟೆಯೊಳಗೆ ಕ್ಯಾಶ್ ಬ್ಯಾಕ್ ಸ್ಕ್ರ್ಯಾಚ್ ಕಾರ್ಡ್ ಸಿಗುತ್ತದೆ. ಈ ಸ್ಕ್ರ್ಯಾಚ್ ಕಾರ್ಡ್ ಅನ್ನು 7 ದಿನಗಳ ಒಳಗೆ ಬಳಕೆ ಮಾಡಬೇಕು. ಇಲ್ಲಿ ಒಂದು ವೇಳೆ ನೀವು ಸ್ಕ್ರ್ಯಾಚ್ ಕಾರ್ಡ್ ಅನ್ನು ಸ್ಕ್ರ್ಯಾಚ್ ಮಾಡಲು ಮರೆತರೆ, Cashback and Offers ಸೆಕ್ಷನ್ ಗೆ ಭೇಟಿ ನೀಡಿ ಅದನ್ನು ಪುನಃ ಬಳಕೆ ಮಾಡಬಹುದು. ಈ ಕೊಡುಗೆ ಮಾರ್ಚ್ 31,2021ರವರೆಗೆ ಮಾತ್ರ ಲಭ್ಯವಿರಲಿದೆ. ಅಂದರೆ, ಈ ಕೊಡುಗೆಯ ಲಾಭ ಪಡೆಯಲು ನಿಮ್ಮ ಬಳಿ ಕೇವಲ ಮೂರೇ ದಿನಗಳು ಬಾಕಿ ಉಳಿದಿವೆ.
3. Pay ನಿಂದ LPG ಸಿಲಿಂಡರ್ ಬುಕ್ ಮಾಡುವುದು ಹೇಗೆ: - ಒಂದು ವೇಳೆ ನೀವೂ ಕೂಡ ಈ ಕೊಡುಗೆಯ ಲಾಭ ಪಡೆಯಲು ಬಯಸುತ್ತಿದ್ದರೆ, ನಿಮ್ಮ ಫೋನ್ ನಲ್ಲಿ Paytm App ಇರಬೇಕು. - ಬಳಿಕ ಮೊದಲು ನೀವು ನಿಮ್ಮ Paytm ಆಪ್ ತೆರೆಯಿರಿ. - ನಂತರ 'Recharge and Pay Bills' ಸೆಕ್ಷನ್ ಗೆ ಭೇಟಿ ನೀಡಿ. - ಅಲ್ಲಿ ನಿಮಗೆ 'Book a Cylinder'ಆಪ್ಶನ್ ಕಾಣಿಸಿಕೊಳ್ಳಲಿದೆ. - ಇಲ್ಲಿ ನೀವು ನಿಮ್ಮ LPG ಸಿಲಿಂಡರ್ ಪೂರೈಕದಾರ ಕಂಪನಿಯನ್ನು ಆಯ್ಕೆ ಮಾಡಿ. - ಇದರ ಬಳಿಕ ನಿಮ್ಮ ಅಧಿಕೃತ ಮೊಬೈಲ್ ಸಂಖ್ಯೆ ಅಥವಾ LPG ID ನಮೂದಿಸಿ. - ಈಗ ನಿಮಗೆ ಪೇಮೆಂಟ್ ಮಾಡುವ ಆಪ್ಶನ್ ಕಾಣಿಸಿಕೊಳ್ಳಲಿದೆ. - ಹಣ ಪಾವತಿಸುವ ಮೊದಲು ಆಫರ್ ಗೆ ಭೇಟಿ ನೀಡಿ. ಅಲ್ಲಿ ನಿಮಗೆ - 'FIRSTLPG' ಪ್ರೊಮೊ ಕೋಡ್ ಕಾಣಿಸಿಕೊಳ್ಳಲಿದೆ ಅದನ್ನು ನಮೂದಿಸಿ ಹಣ ಪಾವತಿ ಮಾಡಿ.