LPG Tatkal Seva : ಬುಕ್ ಮಾಡಿದ ಅರ್ಧ ಗಂಟೆಯಲ್ಲೇ ಮನೆ ತಲುಪಲಿದೆ ಗ್ಯಾಸ್ ಸಿಲಿಂಡರ್

Wed, 13 Jan 2021-12:52 pm,

Business Standardನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಪ್ರತಿ ರಾಜ್ಯ ಮತ್ತು  ಕೇಂದ್ರಾಡಳಿತ ಪ್ರದೇಶವು ಈ ಎಲ್‌ಪಿಜಿ ಸೇವೆಯನ್ನು ಆರಂಭಿಸಲು ಯಾವುದಾದರೂ  ನಗರ ಅಥವಾ ಜಿಲ್ಲೆಯನ್ನು ಆರಿಸಿಕೊಳ್ಳಬೇಕಾಗುತ್ತದೆ.  ಈ ಯೋಜನೆಯಡಿಯಲ್ಲಿ  ಗ್ರಾಹಕರು  ಬುಕಿಂಗ್ ಮಾಡಿದ 30 ರಿಂದ 45 ನಿಮಿಷಗಳಲ್ಲಿ  ಸಿಲಿಂಡರ್ ಸಿಗುವ ವ್ಯವಸ್ಥೆ ಮಾಡಲಾಗುತ್ತದೆ. ಈ ಯೋಜನೆಯು  ಕೇಂದ್ರ ಸರ್ಕಾರದ  'ease of living'ನ ಒಂದು ಭಾಗವಾಗಿದೆ.

.ಈ ಸೇವೆಯನ್ನು ಆದಷ್ಟು ಬೇಗ ಆರಂಭಿಸುವ ಯೋಜನೆಯನ್ನು  ಹೊಂದಿದೆ ಎಂದು IOC ತಿಳಿಸಿದೆ. ಫೆಬ್ರವರಿ 1 ರಿಂದ ಈ ಸೇವೆಯನ್ನು ಪ್ರಾರಂಭಿಸುವ ಎಲ್ಲಾ  ಪ್ರಯತ್ನಗಳೂ ನಡೆಯುತ್ತಿವೆ. ಇಂಡಿಯನ್ ಆಯಿಲ್ ತನ್ನ ಗ್ರಾಹಕರಿಗೆ ಇಂಡೇನ್ ಎಂಬ  ಹೆಸರಿನಲ್ಲಿ ಸಿಲಿಂಡರ್‌ಗಳನ್ನು ಮಾರಾಟ ಮಾಡುತ್ತದೆ. ದೇಶದಲ್ಲಿ 28 ಕೋಟಿ ಎಲ್‌ಪಿಜಿ ಗ್ರಾಹಕರಿದ್ದು, ಇದರಲ್ಲಿ 14 ಕೋಟಿ ಐಒಸಿ ಗ್ರಾಹಕರಿದ್ದಾರೆ.    

ಐಒಸಿ ಅಧಿಕಾರಿಯ ಪ್ರಕಾರ, ಈ Tatkal LPG ಸೇವೆ ಅಥವಾ 'ಸಿಂಗಲ್ ಡೇ ಡೆಲಿವರಿ ಸೇವೆ'ಯನ್ನು ಬಳಸುವ ಗ್ರಾಹಕರು ಇದಕ್ಕಾಗಿ ಸಣ್ಣ ಮೊತ್ತದ  ಬೆಲೆಯನ್ನು ಪಾವತಿಸಬೇಕಾಗುತ್ತದೆ.  ಈ ಶುಲ್ಕ ಎಷ್ಟು ಎಂಬುದು ಇನ್ನೂ ನಿಗದಿಯಾಗಿಲ್ಲ.  

ಸಿಲಿಂಡರ್ ಇದ್ದಕ್ಕಿದ್ದಂತೆ ಖಾಲಿಯಾದಾಗ SBC ಅಥವಾ ಸಿಂಗಲ್ ಬಾಟಲ್ ಸಿಲಿಂಡರ್ ಗ್ರಾಹಕರು ಅಂದರೆ ಕೇವಲ ಒಂದು ಎಲ್‌ಪಿಜಿ ಸಿಲಿಂಡರ್ ಹೊಂದಿರುವವರಿಗೆ ಅನಾನುಕೂಲವಾಗುತ್ತದೆ.  ಇನ್ನು DBC ಅಥವಾ ಎರಡು ಸಿಲಿಂಡರ್‌ಗಳನ್ನು ಹೊಂದಿರುವವರನ್ನು  ಡಬಲ್ ಬಾಟಲ್ ಗ್ರಾಹಕರು ಎಂದು ಕರೆಯಲಾಗುತ್ತದೆ. ಒಂದು ಸಿಲಿಂಡರ್ ಮುಗಿದ ನಂತರ ಇನ್ನೊಂದನ್ನು ಬಳಸುವ ಅವಕಾಶ ಇವರಿಗಿರುತ್ತದೆ.  ಪ್ರಧಾನ್ ಮಂತ್ರಿ ಉಜ್ವಾಲಾ ಯೋಜನೆ  ಕುರಿತ CAG ವರದಿಯ ಪ್ರಕಾರ, ಎಲ್‌ಪಿಜಿ  ಸಿಲಿಂಡರ್‌ಗಳ ವಿತರಣೆಯಲ್ಲಿನ ವಿಳಂಬವು   ಒಂದು ದೊಡ್ಡ ಸವಾಲಾಗಿದೆ.

ಎಲ್‌ಪಿಜಿ ಡೀಲರ್ ಪ್ರಕಾರ, 2010 ರಲ್ಲಿ, ಅಂದಿನ ತೈಲ ಸಚಿವ ಮುರಳಿ ಡಿಯೋರಾ ಅವರು Preferred Time LPG Delivery Scheme'ಎಂಬ ಯೋಜನೆಯನ್ನು ಪ್ರಾರಂಭಿಸಿದ್ದರು.  ಈ ಯೋಜನೆಯಡಿ ಗ್ರಾಹಕರು ಬೆಳಿಗ್ಗೆ 7 ರಿಂದ ರಾತ್ರಿ 9 ರವರೆಗೆ ಸಿಲಿಂಡರ್‌ಗೆ ಬೇಡಿಕೆ ಇಡಬಹುದಾಗಿತ್ತು. ಆದರೆ ಯೋಜನೆಯನ್ನು ಜಾರಿಗೆ ತರಲು ಮಾತ್ರ ಸಾಧ್ಯವಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link