ರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿದ್ದ ಈ ಸುಂದ್ರಿ ಈಗ ಮೋಸ್ಟ್ ವಾಂಟೆಡ್ ನಟಿ..! ಈಕೆಗಾಗಿ ಸಾಲುಗಟ್ಟಿ ನಿಲ್ತಾರೆ ಡೈರೆಕ್ಟರ್ಸ್..
ಸಿನಿಮಾ ತಾರೆಯರು ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟಿವ್ ಆಗಿರುವುದು ಗೊತ್ತೇ ಇದೆ. ಕಾಲಕಾಲಕ್ಕೆ ತಮ್ಮ ಫೋಟೋಸ್ ಇಲ್ಲವೇ ಇಂಟ್ರಸ್ಟಿಂಗ್ ಅಪ್‌ಡೆಟ್ ಪೋಸ್ಟ್ ಮೂಲಕ ತಮ್ಮ ಅಭಿಮಾನಿಗಳ ಗಮನಸೆಳೆಯುತ್ತಿರುತ್ತಾರೆ.. ಇತ್ತೀಚಿನ ಟಾಲಿವುಡ್ ಕ್ರೇಜಿ ಹೀರೋಯಿನ್ ಫೋಟೋವೊಂದು ಎಲ್ಲರ ಗಮನ ಸೆಳೆಯುತ್ತಿದೆ.
ಹೌದು.. ಈಕೆ ಬೇರೆ ಯಾರೂ ಅಲ್ಲ ಕ್ರೇಜಿ ಹೀರೋಯಿನ್ ಮೀನಾಕ್ಷಿ ಚೌಧರಿ. ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಈ ಚೆಲುವೆ ಹಿಟ್ 2 ಚಿತ್ರದ ಮೂಲಕ ಮುನ್ನೆಲೆಗೆ ಬಂದರು.
ʼಹಿಟ್ 2ʼ ಸಿನಿಮಾ ಸೂಪರ್ ಹಿಟ್ ಆಗುತ್ತಿದ್ದಂತೆ ತೆಲುಗಿನಲ್ಲಿ ಮೀನಾಕ್ಷಿಗೆ ಸರಣಿ ಆಫರ್ ಗಳು ಬಂದವು. ಮಹೇಶ್ ಬಾಬು ಅಭಿನಯದ ಗುಂಟೂರ್ ಕರಂ ಚಿತ್ರದ ಮೂಲಕ ರಂಜಿಸಿದ್ದ ಮೀನಾಕ್ಷಿ "ಲಕ್ಕಿ ಭಾಸ್ಕರ್" ಮೂಲಕ ಸೌತ್ ಸಿನಿ ಪ್ರೇಕ್ಷಕರಿಗೆ ಹತ್ತಿರವಾದರು..
ಸೋಷಿಯಲ್ ಮೀಡಿಯಾದಲ್ಲೂ ತುಂಬಾ ಆ್ಯಕ್ಟಿವ್ ಇರುವ ಚೆಲುವೆ ಹಾಕುವ ಫೋಸ್ಟ್‌ಗಳು ಅತೀ ಕಡಿಮೆ ಸಮಯದಲ್ಲಿ ಹೆಚ್ಚು ವೀಕ್ಷಣೆ ಪಡೆದುಕೊಳ್ಳುತ್ತವೆ..
ಮೀನಾಕ್ಷಿ ಚೌಧರಿ ಫೆಮಿನಾ ಮಿಸ್ ಇಂಡಿಯಾ 2018, ಮಿಸ್ ಗ್ರ್ಯಾಂಡ್ ಇಂಟರ್ನ್ಯಾಷನಲ್ ಫಸ್ಟ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.
ಅಲ್ಲದೆ, ಈ ಅಪರೂಪದ ಚೆಲುವೆ ರಾಜ್ಯ ಮಟ್ಟದ ಟೆನಿಸ್ ಆಟಗಾರ್ತಿಯೂ ಹೌದು. ಕಾಲೇಜು ದಿನಗಳಲ್ಲಿ ಹೆಚ್ಚಾಗಿ ಕ್ರೀಡೆಯಲ್ಲಿ ಭಾಗವಹಿಸುತ್ತಿದ್ದರು.