ಈ ದಿನಾಂಕದಲ್ಲಿ ಜನಿಸಿದವರು ಹೆತ್ತವರ ಪಾಲಿಗೆ ಅದೃಷ್ಟ ದೇವತೆ!ಇವರ ಜನನದಿಂದ ತೆರೆದುಕೊಳ್ಳುತ್ತದೆ ಸಿರಿತನದ ಬಾಗಿಲು !ಕೋಟಿಗಳಲ್ಲಿಯೇ ನಡೆಯುವುದು ಇವರ ವ್ಯವಹಾರ

Wed, 23 Oct 2024-10:55 am,

ಜ್ಯೋತಿಷ್ಯದಂತೆಯೇ, ಸಂಖ್ಯಾಶಾಸ್ತ್ರದ ಪ್ರಕಾರ,ಪ್ರತಿ ಸಂಖ್ಯೆಗೆ ಒಂದು ಅಧಿಪತಿ ಗ್ರಹ ಇರುತ್ತದೆ. ಈ ಆಧಾರದಲ್ಲಿ ಯಾವ ದಿನಾಂಕದಂದು ಹುಟ್ಟಿದವರ ಭವಿಷ್ಯ, ಸ್ವಭಾವ  ಹೇಗಿರುತ್ತದೆ ಎಂದು ಹೇಳಲಾಗುತ್ತದೆ.   

ಮೂಲಾಂಕ 1 ಹೊಂದಿರುವವರ ಅಧಿಪತಿ ಗ್ರಹ ಸೂರ್ಯ.ಈ ಕಾರಣಕ್ಕಾಗಿ, ಸೂರ್ಯನ ಪ್ರಭಾವವು ರಾಡಿಕ್ಸ್ 1 ಅಥವಾ ಮೂಲಾಂಕ ಒಂದರ ಜನರ ಮೇಲೆ ಸ್ಪಷ್ಟವಾಗಿ ಗೋಚರಿಸುತ್ತದೆ.ಯಾವುದೇ ತಿಂಗಳ 1, 10, 19 ಅಥವಾ 28 ರಂದು ಜನಿಸಿದವರ ಮೂಲಾಂಕ 1 ಆಗಿರುತ್ತದೆ.   

ಮೂಲಾಂಕ 1 ಹೊಂದಿರುವ ಜನರು, ನಾಯಕತ್ವದ ಅದ್ಭುತ ಗುಣವನ್ನು ಹೊಂದಿರುತ್ತಾರೆ. ಈ  ಮೂಲಾಂಕದ ಜನರು ಸ್ವತಂತ್ರ ಮನೋಭಾವದವರು ಮತ್ತು ತಮ್ಮದೇ ಆದ ನಿಯಮಗಳ ಮೇಲೆ ಬದುಕಲು ಇಷ್ಟಪಡುತ್ತಾರೆ. 

ಮೂಲಾಂಕ 1ರ ಜನರು, ತೀಕ್ಷ್ಣ ಮನಸ್ಸಿನವರಾಗಿದ್ದು,ಅತ್ಯಂತ ಆತ್ಮವಿಶ್ವಾಸದಿಂದ ಕೂಡಿರುತ್ತಾರೆ.ಜೀವನದ ಸವಾಲುಗಳಿಗೆ ಹೆದರುವುದಿಲ್ಲ.ಯಾವಾಗಲೂ ಅವುಗಳನ್ನು ದೃಢವಾಗಿ ಎದುರಿಸುತ್ತಾರೆ.   

ಮೂಲಾಂಕ 1 ಹೊಂದಿರುವವರಿಗೆ  ತಾವು ಸಾಧಿಸುವ ಗುರಿಯ ಬಗ್ಗೆ ಸ್ಪಷ್ಟತೆ ಇರುತ್ತದೆ. ಅವರು ಬಹಳ ಮಹತ್ವಾಕಾಂಕ್ಷೆಯುಳ್ಳವರು.ಯಾವಾಗಲೂ ದೊಡ್ಡ ಮಟ್ಟದ ಕನಸು ಕಾಣುತ್ತಾರೆ.ಇವರಿಗೆ ಬೇಜಾರಾಗುವುದು ಬೇಗ.

ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link