ಈ ಡೇಟ್‌ನಲ್ಲಿ ಜನಿಸಿದವರು ಸಾಕ್ಷಾತ್‌ ಮಹಾಲಕ್ಷ್ಮೀಯ ಮತ್ತೊಂದು ಸ್ವರೂಪವಿದ್ದಂತೆ: ಹೆಣ್ಣಾಗಿದ್ದರಂತೂ... ಹುಟ್ಟಿದ ಮನೆಗೂ, ಕಾಲಿಟ್ಟ ಮನೆಗೂ ಶುಕ್ರದೆಸೆ ಹೊತ್ತ ಸೌಭಾಗ್ಯದೇವತೆಯಾಗಿ ಬಾಳುವರು

Thu, 24 Oct 2024-6:32 pm,

ಒಂದು ವರ್ಷದಲ್ಲಿ 12 ತಿಂಗಳುಗಳಿವೆ. ಪ್ರತಿ ತಿಂಗಳಲ್ಲಿ ವಿಭಿನ್ನ ದಿನಗಳಿರುತ್ತವೆ. ಸಂಖ್ಯಾಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯ ಸ್ವಭಾವ, ವೃತ್ತಿ, ದೈಹಿಕ ರೂಪ, ಶಿಕ್ಷಣ, ಆರ್ಥಿಕ ಸ್ಥಿತಿ ಇತ್ಯಾದಿಗಳ ಬಗ್ಗೆ ಹುಟ್ಟಿದ ದಿನಾಂಕದಿಂದ ತಿಳಿಯಬಹುದು. ಜೊತೆಗೆ ವ್ಯಕ್ತಿಯ ಭವಿಷ್ಯಕ್ಕೆ ಸೂಕ್ತವೆನಿಸುವ ಶುಭ ಬಣ್ಣ, ದಿನಾಂಕ ಮತ್ತು ದಿನವನ್ನು ಸಹ ಹೇಳುತ್ತದೆ.

ಸಂಖ್ಯಾಶಾಸ್ತ್ರದಲ್ಲಿ, ಜನರ ಸ್ವಭಾವ, ವ್ಯಕ್ತಿತ್ವ ಮತ್ತು ಭವಿಷ್ಯವನ್ನು ತಿಳಿಯಲು ಜನ್ಮ ದಿನಾಂಕವು ಬಹಳ ಮುಖ್ಯ. ಸಂಖ್ಯಾಶಾಸ್ತ್ರದ ಪ್ರಕಾರ, 12 ರಂದು ಜನಿಸಿದವರು ಸಾಕಷ್ಟು ಪ್ರಗತಿ ಹೊಂದುತ್ತಾರೆ. ಈ ದಿನಾಂಕದಲ್ಲಿ ಜನಿಸಿದವರಿಗೆ ಅಧಿಪತಿ ಎಂದರೆ ಶುಕ್ರದೇವ.

 

ಈ ಜನರು ತುಂಬಾ ಅದೃಷ್ಟ ಮತ್ತು ಪ್ರತಿಭಾವಂತರಾಗಿರುತ್ತಾರೆ. ಅಷ್ಟೇ ಅಲ್ಲದೆ, ತುಂಬಾ ಸುಂದರವಾದ ಮತ್ತು ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಜೊತೆಗೆ ಇವರಿಗೆ ಶುಕ್ರನ ಕೃಪೆಯಿಂದ ಸಂಪತ್ತಿಗೆ ಕೊರತೆಯೇ ಇರುವುದಿಲ್ಲ.

 

ವೃತ್ತಿ: 12 ರಂದು ಜನಿಸಿದವರು ಪೊಲೀಸ್ ಅಥವಾ ಸೇನೆಯಲ್ಲಿ ಉತ್ತಮ ವೃತ್ತಿಜೀವನವನ್ನು ಮಾಡಬಹುದು. ಇದಲ್ಲದೆ, ವೈದ್ಯ ವೃತ್ತಿ, ಸಲಹೆಗಾರರಾಗಿ, ಕಲೆ ಮತ್ತು ಫ್ಯಾಷನ್‌ ಲೋಕದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ.

 

ದೈಹಿಕ ನೋಟ: ಇವರ ಕಣ್ಣುಗಳು ಬಾದಾಮಿ ಆಕಾರದಲ್ಲಿರುತ್ತವೆ. ಇವರು ಆಕರ್ಷಕ ನೋಟವನ್ನು ಹೊಂದಿರುವುದಲ್ಲದೆ, ಕಣ್ಣದೃಷ್ಟಿ ಬಹಳ ಚುರುಕಾಗಿರುತ್ತದೆ.

 

ಮನೋಧರ್ಮ: 12 ರಂದು ಜನಿಸಿದವರು ಸರಳ ಮತ್ತು ಸೌಮ್ಯ ಸ್ವಭಾವದವರು. ಜೊತೆಗೆ ಜವಾಬ್ದಾರಿಯುತ ಮತ್ತು ಬುದ್ಧಿವಂತರು. ಅವರು ಇತರರ ಮೇಲೆ ಪ್ರಭಾವ ಬೀರುವ ಸಾಮರ್ಥ್ಯವನ್ನು ಹೊಂದಿರುತ್ತಾರೆ

 

ಮನೋಧರ್ಮ: 12 ರಂದು ಜನಿಸಿದವರು ಸರಳ ಮತ್ತು ಸೌಮ್ಯ ಸ್ವಭಾವದವರು. ಜೊತೆಗೆ ಜವಾಬ್ದಾರಿಯುತ ಮತ್ತು ಬುದ್ಧಿವಂತರು. ಅವರು ಇತರರ ಮೇಲೆ ಪ್ರಭಾವ ಬೀರುವ ಸಾಮರ್ಥ್ಯವನ್ನು ಹೊಂದಿರುತ್ತಾರೆ

 

ಶಿಕ್ಷಣ: ಅಧ್ಯಯನದಲ್ಲಿ 12ರಂದು ಜನಿಸಿದವರು ಮೇಧಾವಿಗಳು. ಅವರು ಸಮರ್ಥವಾಗಿ ಬರೆಯುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಈ ಜನರು ತಮ್ಮ ಜೀವನದಲ್ಲಿ ತಮ್ಮ ಗುರಿಗಳನ್ನು ಸಾಧಿಸಲು ಶ್ರಮಿಸುವುದಲ್ಲದೆ, ಅದರಲ್ಲಿ ಯಶಸ್ಸನ್ನು ಸಾಧಿಸುತ್ತಾರೆ.

 

ಈ ಸಂಖ್ಯೆಯ ಜನರು ತುಂಬಾ ಪ್ರೀತಿ ಮಾಡುವವರು. ಆದರೆ ಇವರು ಸುಲಭವಾಗಿ ಯಾರನ್ನೂ ಪ್ರೀತಿಸುವುದಿಲ್ಲ, ಪ್ರೀತಿಸಿದರೆ ಅವರನ್ನು ಬಿಡುವುದಿಲ್ಲ ಎಂಬ ಸ್ವಭಾವವುಳ್ಳವರು.

 

ಈ ಸಂಖ್ಯೆಯ ಜನರ ಅದೃಷ್ಟವು ಹಣದ ವಿಷಯದಲ್ಲಿ ತುಂಬಾ ವೇಗವಾಗಿರುತ್ತದೆ. ಇವರ ಜೀವನದಲ್ಲಿ ಹಣದ ಕೊರತೆ ಇರುವುದಿಲ್ಲ. ಜೀವನವು ಸಾಕಷ್ಟು ಆರಾಮದಾಯಕವಾಗಿ ಸಾಗುತ್ತದೆ.

 

ಶುಭ ದಿನ ಮತ್ತು ದಿನಾಂಕ: 12ರಂದು ಜನಿಸಿದ ಜನರಿಗೆ ಮಂಗಳವಾರ, ಗುರುವಾರ ಮತ್ತು ಶುಕ್ರವಾರ ಶುಭ ದಿನಗಳು. 3, 12, 21 ಮತ್ತು 30 ಶುಭ ದಿನಾಂಕಗಳು. ಈ ದಿನ ಅಥವಾ ದಿನಾಂಕದಂದು ಯಾವುದೇ ಕೆಲಸವನ್ನು ಪ್ರಾರಂಭಿಸುವುದು ಶುಭ.

 

ಮಂಗಳಕರ ಬಣ್ಣಗಳು ಮತ್ತು ರತ್ನಗಳು: 12ನೇ ತಾರೀಖಿನಂದು ಜನಿಸಿದವರಿಗೆ ನೀಲಿ, ಕಡು ಹಸಿರು ಮತ್ತು ಕೆಂಪು ಬಣ್ಣಗಳು ಮಂಗಳಕರ.

 

ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿ/ವಿಷಯ/ಲೆಕ್ಕಾಚಾರಗಳ ಸತ್ಯಾಸತ್ಯತೆ ಅಥವಾ ವಿಶ್ವಾಸಾರ್ಹತೆ ಖಾತರಿಯಿಲ್ಲ. ಈ ಮಾಹಿತಿಯನ್ನು ಮಾಹಿತಿ/ಜ್ಯೋತಿಷ್ಯರು/ ಪಂಚಾಂಗ/ಉಪದೇಶ/ಧಾರ್ಮಿಕ ನಂಬಿಕೆಗಳು/ಗ್ರಂಥಗಳ ವಿವಿಧ ಮಾಧ್ಯಮಗಳಿಂದ ಸಂಕಲಿಸಲಾಗಿದೆ. ಜೀ ಕನ್ನಡ ನ್ಯೂಸ್‌ ಇದರ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link