Lucky Girls Zodiac: ಈ ರಾಶಿಚಕ್ರದ ಹುಡುಗಿಯರು ಪತಿಗೆ ಅದೃಷ್ಟ ಲಕ್ಷ್ಮಿಯರು

Fri, 27 Oct 2023-6:50 am,

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಯ ಹೆಣ್ಣು ಮಕ್ಕಳನ್ನು ಗಂಡನ ಮನೆಗೆ ಅದೃಷ್ಟ ಲಕ್ಷ್ಮಿಯರು ಎಂದು ಹೇಳಲಾಗುತ್ತದೆ. 

ಹೌದು, ಈ ರಾಶಿಯ ಹುಡುಗಿಯರನ್ನು ಮದುವೆಯಾದರೆ, ಪತಿಯ ಅದೃಷ್ಟವೇ ಬದಲಾಗುತ್ತದೆ ಎಂದು ಹೇಳಲಾಗುತ್ತದೆ. ಈ ರಾಶಿಯ ಹೆಣ್ಣು ಮಕ್ಕಳನ್ನು ವಿವಾಹವಾಗಿ ಅವರು ಗಂಡನ ಮನೆಗೆ ಪದಾರ್ಪಣೆ ಮಾಡುತ್ತಿದ್ದಂತೆ  ಗಂಡನ ಅದೃಷ್ಟವನ್ನು ಬೆಳಗಿಸಬಹುದು ಎಂದು ನಂಬಲಾಗಿದೆ. ಆ ರಾಶಿಗಳು ಯಾವುವು ಎಂದು ನೋಡುವುದಾದರೆ... 

ಜ್ಯೋತಿಷ್ಯ ಶಾಸ್ತ್ರದಲ್ಲಿ ಮೇಷ ರಾಶಿಯ ಹುಡುಗಿಯರನ್ನು ಪತಿಯ ಪಾಲಿಗೆ ಅದೃಷ್ಟ ಲಕ್ಷ್ಮಿ ಎಂದು ಬಣ್ಣಿಸಲಾಗುತ್ತದೆ. ಮಂಗಳನಿಂದ ಪ್ರಭಾವಿತರಾದ ಈ ಹುಡುಗಿಯರು ತುಂಬಾ ಧೈರ್ಯಶಾಲಿಗಳಾಗಿದ್ದು ಪ್ರತಿ ಹೆಜ್ಜೆಯಲ್ಲೂ ಗಂಡನಿಗೆ ಜೊತೆಯಾಗಿ ನಿಲ್ಲುತ್ತಾರೆ. 

ವೃಷಭ ರಾಶಿಯ ಹೆಣ್ಣು ಮಕ್ಕಳು ಅವರ ಗಂಡನಿಗೆ ಅದೃಷ್ಟ ದೇವತೆಯಾಗಿರುತ್ತಾರೆ. ತುಂಬಾ ಬುದ್ದಿವಂತರಾದ ಈ ಹೆಣ್ಣುಮಕ್ಕಳು ತಮ್ಮ ಗಂಡನಿಗೆ ಮಾತ್ರವಲ್ಲ,  ಅವರೊಂದಿಗೆ ಸಂಬಂಧ ಹೊಂದಿರುವ ಅವರ ಇಡೀ ಕುಟುಂಬಕ್ಕೆ  ಅದೃಷ್ಟವಂತರು ಎನ್ನಲಾಗುತ್ತದೆ. 

ಸೌಮ್ಯ ಸ್ವಭಾವದವರಾದ ಕರ್ಕಾಟಕ ರಾಶಿಯ ಹೆಣ್ಣು ಮಕ್ಕಳನ್ನು ಮದುವೆಯಾದರೆ ಆ ಕ್ಷಣದಿಂದಲೇ ಪತಿಯ ಅದೃಷ್ಟ ಖುಲಾಯಿಸುತ್ತದೆ. ಕುಟುಂಬದಲ್ಲಿ ಮಾತ್ರವಲ್ಲ ಸಮಾಜದಲ್ಲಿಯೂ ಆತನ ಗೌರವ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. 

ಸದಾ ಉತ್ಸಾಹದ ಚಿಲುಮೆಯಂತೆ ಕಾಣಿಸಿಕೊಳ್ಳುವ ಮಕರ ರಾಶಿಯ ಹೆಣ್ಣು ಮಕ್ಕಳು ಯಾವುದೇ ಸಂದರ್ಭದಲ್ಲಿ ಸೋಲನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಈ ರಾಶಿಯ ಹುಡುಗಿಯರು ತಮ್ಮ ಪತಿಯ ಬಗ್ಗೆ ಹೆಚ್ಚು ಯೋಚಿಸುತ್ತಾರೆ. ಅವರ ಪ್ರಗತಿಯಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತಾರೆ ಎಂದು ಹೇಳಲಾಗುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link