ಕೇವಲ ಅದೃಷ್ಟಶಾಲಿ ಹೆಣ್ಣಿಗಷ್ಟೇ ದೇಹದ ಈ ಭಾಗದಲ್ಲಿ ಮಚ್ಚೆಯಿರುತ್ತೆ... ಇವರಷ್ಟು ಭಾಗ್ಯವಂತರು ಭೂಮಿಯಲ್ಲಿ ಬೇರಾರು ಇರಲ್ಲ! ಗಂಡನ ಪಾಲಿಗೆ ಶುಕ್ರದೆಸೆಯಾಗಿ ಬಾಳುವರು
ಪ್ರತಿಯೊಬ್ಬ ವ್ಯಕ್ತಿಯ ದೇಹದ ಮೇಲೂ ಮಚ್ಚೆ ಇದ್ದೇ ಇರುತ್ತದೆ. ಇದು ಸ್ವಾಭಾವಿಕ. ಆದರೆ ಆ ಮಚ್ಚೆಗಳೇ ಅವನ ಜೀವನದಲ್ಲಿ ಬಹಳಷ್ಟು ಪ್ರಮುಖ ಪಾತ್ರ ವಹಿಸುತ್ತದೆ ಎಂದರೆ ನಂಬುತ್ತೀರಾ?
ಮಚ್ಚೆಗಳು ಇರುವ ಸ್ಥಳದಿಂದ ಆ ವ್ಯಕ್ತಿಯ ಭವಿಷ್ಯವನ್ನು ಅಳೆಯಲಾಗುತ್ತದೆ ಎಂದು ಹಿರಿಯರು ಹೇಳುವುದನ್ನು ಕೇಳಿರಬಹುದು. ಉದಾಹರಣೆಗೆ, ದೇಹದ ಮೇಲಿರುವ ಮಚ್ಚೆ ಮಲಗುವ ಚಾಪೆ ತಾಗಿದರೆ ಒಳ್ಳೆಯದಲ್ಲ, ಅಂತಹವರ ಬದುಕು ಕಷ್ಟದಿಂದ ಕೂಡಿರುತ್ತದೆ ಎಂದು ಹೇಳಲಾಗುತ್ತದೆ. ಅಂತೆಯೇ ಮಚ್ಚೆ ವಿಷಯದಲ್ಲಿ ಸಾಮುದ್ರಿಕ ಶಾಸ್ತ್ರ ಮಹತ್ವದ ಅಂಶಗಳನ್ನು ಹೇಳಿವೆ. ಅವುಗಳ ಬಗ್ಗೆ ಇಲ್ಲಿ ತಿಳಿಯೋಣ.
ವ್ಯಕ್ತಿಯ ಕೆನ್ನೆಯ ಮೇಲೆ ಮಚ್ಚೆ ಇದ್ದರೆ ಅದನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅಂತಹ ಜನರು ತುಂಬಾ ಅದೃಷ್ಟವಂತರಾಗಿರುತ್ತಾರೆ. ಜೊತೆಗೆ ಅಂತಹ ಜನರು ತಮ್ಮ ಸಂಗಾತಿಗೆ ತುಂಬಾ ನಿಷ್ಠರಾಗಿರುತ್ತಾರೆ.
ಹಣೆಯ ಬಲಭಾಗದಲ್ಲಿ ಮಚ್ಚೆ ಇರುವ ಹೆಣ್ಣು ತುಂಬಾ ಅದೃಷ್ಟವಂತೆಯಾಗಿರುತ್ತಾಳೆ. ಇಂತಹವರಿಗೆ ಸಂಪತ್ತು ಹೆಚ್ಚುತ್ತಲೇ ಇರುತ್ತದೆ. ಯಾವತ್ತಿಗೂ ಹಣದ ಕೊರತೆ ಬರಲ್ಲ.
ಎದೆಯ ಮಧ್ಯದಲ್ಲಿ ಮಚ್ಚೆ ಇರುವವರನ್ನು ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ. ಈ ಜನರ ಮೇಲೆ ಲಕ್ಷ್ಮಿ ದೇವಿಯ ಆಶೀರ್ವಾದ ಇರುತ್ತದೆ. ಸಮಾಜದಲ್ಲಿ ತಮ್ಮದೇ ಆದ ಗುರುತನ್ನು ಸೃಷ್ಟಿಸುತ್ತಾರೆ.
ಬಲ ಅಂಗೈಯಲ್ಲಿ ಮಚ್ಚೆ ಹೊಂದಿರುವ ಜನರು ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತಾರೆ. ಹೆಸರು ಮತ್ತು ಖ್ಯಾತಿಯನ್ನು ಗಳಿಸುವಲ್ಲಿ ಇವರೇ ಮೊದಲಿಗರು. ಸಂಪತ್ತಿನ ವಿಷಯದಲ್ಲಿ ತುಂಬಾ ಅದೃಷ್ಟವಂತರಾಗಿರುತ್ತಾರೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)