ಬಾಲ್ಕನಿಯಲ್ಲಿ ಈ ಮನಿ ಪ್ಲಾಂಟ್‌ಗಳನ್ನು ಇಟ್ಟರೆ, ಸುರಿಯಲಿದೆ ಹಣದ ಮಳೆ!
ಮನಿ ಪ್ಲಾಂಟ್: ವಾಸ್ತು ಶಾಸ್ತ್ರ ಮತ್ತು ಫೆಂಗ್ ಶೂಯಿಯಲ್ಲಿ ಮನಿ ಪ್ಲಾಂಟ್ ತುಂಬಾ ಮಂಗಳಕರವಾಗಿದೆ ಎಂದು ಹೇಳಲಾಗುತ್ತದೆ. ಮನಿ ಪ್ಲಾಂಟ್ ಅನ್ನು ಹಣ-ಸಮೃದ್ಧಿ ಸಸ್ಯ ಎಂದು ಪರಿಗಣಿಸಲಾಗಿದೆ. ಮನೆಯ ಬಾಲ್ಕನಿಯಲ್ಲಿ ಮನಿ ಪ್ಲಾಂಟ್ ನೆಡುವುದರಿಂದ ಹೆಚ್ಚಿನ ಪ್ರಯೋಜನಗಳು ಲಭ್ಯವಾಗಲಿವೆ ಎಂದು ಹೇಳಲಾಗುತ್ತದೆ. ಮನಿ ಪ್ಲಾಂಟ್ ನೆಡಲು ಸರಿಯಾದ ದಿಕ್ಕು ಉತ್ತರ ದಿಕ್ಕು, ಆದರೆ, ಎಂದಿಗೂ ಸಹ ಅಪ್ಪಿತಪ್ಪಿಯೂ ದಕ್ಷಿಣ ದಿಕ್ಕಿನಲ್ಲಿ ಅದನ್ನು ನೆಡಬೇಡಿ. ಅದರ ಬಳ್ಳಿ ಯಾವಾಗಲೂ ಕೆಳಗಿನಿಂದ ಮೇಲಕ್ಕೆ ಹೋಗಬೇಕು.
ತುಳಸಿ ಗಿಡ: ತುಳಸಿ ಗಿಡವನ್ನು ಹಿಂದೂ ಧರ್ಮದಲ್ಲಿ ಪೂಜ್ಯ ಸಸ್ಯವೆಂದು ಪರಿಗಣಿಸಲಾಗಿದೆ. ಇದರೊಂದಿಗೆ, ತುಳಸಿ ಸಸ್ಯವು ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲ್ಪಟ್ಟಿರುವುದರಿಂದ ಯಾವ ಮನೆಯಲ್ಲಿ ತುಳಸಿಯನ್ನು ಭಕ್ತಿಯಿಂದ, ನಿಷ್ಠೆಯಿಂದ ಪೂಜಿಸುತ್ತಾರೋ ಅಂತಹ ಮನೆಯಲ್ಲಿ ಎಂದಿಗೂ ಕೂಡ ಬಡತನ ಎಂಬುದೇ ಇರುವುದಿಲ್ಲ ಎನ್ನಲಾಗುತ್ತದೆ. ತುಳಸಿಯ ಹಸಿರು ಸಸ್ಯವನ್ನು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ನೆಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ.
ನೌಬಾಜಿಯಾ ಸಸ್ಯ: ವಾಸ್ತು ಶಾಸ್ತ್ರ ಮತ್ತು ಫೆಂಗ್ ಶೂಯಿಯಲ್ಲಿ ಬಾಲ್ಕನಿಯಲ್ಲಿ ನೌಬಾಜಿಯಾ ಗಿಡವನ್ನು ನೆಡುವುದು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಇದು ನೋಡಲು ತುಂಬಾ ಸುಂದರವಾಗಿದೆ ಮತ್ತು ಹಣ ಬರಲು ಹೊಸ ಮಾರ್ಗಗಳನ್ನು ಸೃಷ್ಟಿಸುತ್ತದೆ. ಯಾವ ಮನೆಯಲ್ಲಿ ಈ ಸಸ್ಯವನ್ನು ನೆಡಲಾಗಿದೆಯೋ ಅಂತಹ ಮನೆಯಲ್ಲಿ ಸರ್ವತೋಮುಖ ಅಭಿವೃದ್ಧಿ ಆಗುತ್ತದೆ ಎಂದು ಹೇಳಲಾಗುತ್ತದೆ.
ಅರೆಕಾ ಪಾಮ್ ಟ್ರೀ: ಅರೆಕಾ ಪಾಮ್ ಟ್ರೀ ಅಂದರೆ ತಾಳೆ ಮರವನ್ನು ವಾಸ್ತು ಶಾಸ್ತ್ರದಲ್ಲಿ ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಇದು ನೋಡಲು ಸುಂದರವಾಗಿರುತ್ತದೆ ಮತ್ತು ಮನೆಯಲ್ಲಿ ಸಂತೋಷ, ಹಣ ಮತ್ತು ಅದೃಷ್ಟವನ್ನು ತರುತ್ತದೆ. ಇದಲ್ಲದೇ ಮನೆಯವರ ಆರೋಗ್ಯವೂ ಉತ್ತಮವಾಗಿರುತ್ತದೆ. ಇದು ಮನೆಯಲ್ಲಿ ನಕಾರಾತ್ಮಕತೆಯನ್ನು ತೊಡೆದುಹಾಕುವ ಮೂಲಕ ಧನಾತ್ಮಕತೆಯನ್ನು ತರುತ್ತದೆ.
ಕ್ರಾಸ್ಸುಲಾ ಸಸ್ಯವು ಮನೆಯಲ್ಲಿ ಮ್ಯಾಗ್ನೆಟ್ನಂತೆ ಹಣವನ್ನು ಆಕರ್ಷಿಸುತ್ತದೆ. ಬಾಲ್ಕನಿಯಲ್ಲಿ ಕ್ರಾಸ್ಸುಲಾ ಸಸ್ಯವನ್ನು ನೆಡುವುದರಿಂದ, ಆರ್ಥಿಕ ನಷ್ಟ ಕಡಿಮೆ ಆಗಿ ಮನೆಯಲ್ಲಿ ಹಣದ ಒಳಹರಿವು ವೇಗವಾಗಿ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ, ನೀವು ಶ್ರೀಮಂತರಾಗಲು ಬಯಸಿದರೆ ಮನೆಯಲ್ಲಿ ಕ್ರಾಸ್ಸುಲಾ ಗಿಡವನ್ನು ನೆಡುವುದು ತುಂಬಾ ಒಳ್ಳೆಯದು.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.