Lucky Plants: ವೃತ್ತಿ-ವ್ಯವಹಾರದಲ್ಲಿ ಪ್ರಗತಿಗಾಗಿ ನಿಮ್ಮ ಮನೆಯಲ್ಲೂ ಇರಲಿ ಈ ಸಸ್ಯಗಳು

Thu, 27 Jul 2023-4:52 pm,

ವಾಸ್ತು ಶಾಸ್ತ್ರದಲ್ಲಿ, ಮನೆಯಲ್ಲಿ ಮನಿ ಪ್ಲಾಂಟ್ ತರುವುದರಿಂದ ಸಂಪತ್ತು ವೃಡ್ಡಿಯಾಗುತ್ತದೆ. ಇದರೊಂದಿಗೆ ವೃತ್ತಿ-ವ್ಯವಹಾರದಲ್ಲಿಯೂ ಏಳ್ಗೆ ಕಂಡು ಬರಲಿದೆ ಎಂದು ಹೇಳಲಾಗುತ್ತದೆ. 

ವಾಸ್ತುವಿನಲ್ಲಿ ಕ್ರಾಸ್ಸುಲಾ ಸಸ್ಯವನ್ನು ಹಣವನ್ನು ಆಕರ್ಷಿಸುವ ಸಸ್ಯ ಎಂದು ನಂಬಲಾಗಿದೆ. ಈ ಸಸ್ಯವನ್ನು ಮನೆಗೆ ತರುವುದರಿಂದ ಆರ್ಥಿಕ ಬಿಕ್ಕಟ್ಟುಗಳು ದೂರವಾಗುತ್ತವೆ. 

ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿ ದೇವನಿಗೆ ಸಂಬಂಧಿಸಿದ ಸಸ್ಯ ಎಂದು ಹೇಳಲಾಗುವ ಶಮಿ ವೃಕ್ಷವನ್ನು ಮನೆಗೆ ತರುವುದರಿಂದ ಶನಿ ದೋಷದಿಂದ ಪರಿಹಾರ ದೊರೆಯುವುದರ ಜೊತೆಗೆ, ವೃತ್ತಿ-ವ್ಯವಹಾರದಲ್ಲಿಯೂ ಪ್ರಗತಿ ಕಂಡು ಬರುತ್ತದೆ ಎಂದು ನಂಬಲಾಗಿದೆ. 

ಹಿಂದೂ ಧರ್ಮದಲ್ಲಿ ಪೂಜನೀಯ ಸಸ್ಯದ ಸ್ಥಾನಮಾನ ಪಡೆದಿರುವ ತುಳಸಿ ಸಸ್ಯ ಮನೆಯಲ್ಲಿದ್ದರೆ ಅಂತಹ ಮನೆಯಲ್ಲಿ ಧನಾತ್ಮಕ ಶಕ್ತಿಗಳ ಪ್ರವೇಶವಾಗಿ, ಜೀವನದಲ್ಲಿ, ಉದ್ಯೋಗದಲ್ಲಿ ಪ್ರಗತಿ ಕಂಡು ಬರುತ್ತದೆ. 

ಬಿದಿರು ಸಸ್ಯವನ್ನು ಅದೃಷ್ಟದ ಸಸ್ಯ ಎಂದು ನಂಬಲಾಗಿದೆ.  ಬಿದಿರು ಸಸ್ಯವನ್ನು ಮನೆಗೆ ತರುವುದರಿಂದ ಅದೃಷ್ಟದ ಬಾಗಿಲುಗಳು ತೆರೆಯುತ್ತವೆ. ಇದರಿಂದ ವೃತ್ತಿ ಬದುಕಿನಲ್ಲಿ ಉತ್ತುಂಗದ ಶಿಖರವನ್ನು ಏರಬಹುದು ಎಂದು ಹೇಳಲಾಗುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link