Lucky Plants: ಮನೆಯಲ್ಲಿ ಧನಾತ್ಮಕ ಶಕ್ತಿಯೊಂದಿಗೆ ಹಣ ಆಕರ್ಷಿಸುವ ಸಸ್ಯಗಳಿವು
ವಾಸ್ತು ಶಾಸ್ತ್ರದ ಪ್ರಕಾರ, ಕೆಲವು ಸಸ್ಯಗಳು ಮನೆಯಲ್ಲಿದ್ದರೆ ಅವು ಧನಾತ್ಮಕ ಶಕ್ತಿಯ ಜೊತೆಗೆ ಹಣವನ್ನು ಆಕರ್ಷಿಸುತ್ತವೆ ಎಂದು ನಂಬಲಾಗಿದೆ. ಅಂತಹ ಸಸ್ಯಗಳು ಯಾವುವು ಎಂದು ತಿಳಿಯೋಣ...
ಬಿದಿರು ಸಸ್ಯವನ್ನು ಅದೃಷ್ಟ ಸಸ್ಯ ಎಂದು ನಂಬಲಾಗಿದೆ. ಈ ಸಸ್ಯ ಮನೆಯಲ್ಲಿದ್ದರೆ ಅದು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಆಕರ್ಷಿಸುವುದರ ಜೊತೆಗೆ ಮನೆಯವರ ಅದೃಷ್ಟವನ್ನೂ ಬೆಳಗಲಿದೆ ಎಂದು ನಂಬಲಾಗಿದೆ.
ವಾಸ್ತು ಶಾಸ್ತ್ರದ ಪ್ರಕಾರ, ಮನಿ ಪ್ಲಾಂಟ್ ಮನೆಯಲ್ಲಿದ್ದರೆ ಅಂತಹ ಮನೆಯಲ್ಲಿ ಆರ್ಥಿಕ ಸಮಸ್ಯೆಗಳು ಕೊನೆಗೊಂಡು ಹಣದ ಹರಿವು ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.
ವಾಸ್ತು ಶಾಸ್ತ್ರದಲ್ಲಿ ಜೇಡ್ ಸಸ್ಯವನ್ನು ಅದೃಷ್ಟವನ್ನು ಆಕರ್ಷಿಸುವ ಸಸ್ಯ ಎಂದು ನಂಬಲಾಗಿದೆ. ಫೆಂಗ್ ಶೂಯಿಯಲ್ಲಿ ಇದನ್ನು ಅದೃಷ್ಟ ಮತ್ತು ಸಂಪತ್ತನ್ನು ಆಕರ್ಷಿಸುವ ಸಸ್ಯ ಎಂದು ನಂಬಲಾಗಿದ್ದು, ಈ ಸಸ್ಯವನ್ನು ಮನೆಯಲ್ಲಿಡುವುದರಿಂದ ಇದು ಆರ್ಥಿಕ ಅದೃಷ್ಟವನ್ನು ಸಕ್ರಿಯಗೊಳಿಸುತ್ತದೆ ಎಂದು ನಂಬಲಾಗಿದೆ.
ವಿಶಿಷ್ಟವಾದ ಲಂಬ ಮತ್ತು ಮೊನಚಾದ ಎಲೆಗಳನ್ನು ಹೊಂದಿರುವ ಸ್ನೇಕ್ ಪ್ಲಾಂಟ್ ಗಾಳಿ ಶುದ್ಧೀಕರಿಸುವ ಅತ್ಯುತ್ತಮ ಸಸ್ಯ. ಇದು ಮನೆಯಲ್ಲಿ ಧನಾತ್ಮಕ ಶಕ್ತಿಯೊಂದಿಗೆ ಹಣವನ್ನು ಸಹ ಆಕರ್ಷಿಸುತ್ತದೆ ಎನ್ನಲಾಗುತ್ತದೆ.
ಪ್ರತಿ ಭಾರತೀಯರ ಮನೆಯಲ್ಲೂ ಪ್ರವೇಶ ದ್ವಾರದ ಬಳಿ ತುಳಸಿ ಸಸ್ಯ ಇದ್ದೇ ಇರುತ್ತದೆ. ಅತ್ಯಂತ ಶಕ್ತಿಶಾಲಿ ಗಿಡಮೂಲಿಕೆಗಳಲ್ಲಿ ಒಂದಾದ ತುಳಸಿ ಸಸ್ಯ ಮನೆಯಲ್ಲಿದ್ದರೆ ಅಂತಹ ಮನೆಯಲ್ಲಿ ಸದಾ ಸಕಾರಾತ್ಮಕ ಶಕ್ತಿ ಇರುತ್ತದೆ. ಜೊತೆಗೆ ಹಣಕಾಸಿಗೂ ಕೂಡ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಹೇಳಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.