Lucky Zodiac Signs: ಈ ರಾಶಿಯವರ ಮೇಲೆ ಸದಾ ಇರುತ್ತೆ ತಾಯಿ ಲಕ್ಷ್ಮಿ ಕೃಪೆ
ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕರ್ಕಾಟಕ ರಾಶಿಯವರು ಕಷ್ಟಪಟ್ಟು ದುಡಿದು ಜೀವನದಲ್ಲಿ ಮುಂದೆ ಬರುತ್ತಾರೆ. ಇವರು ಒಳ್ಳೆಯ ಮನಸ್ಸಿನಿಂದ ಮಾಡಿದ ಯಾವುದೇ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಈ ರಾಶಿಯವರ ಮೇಲೆ ಸಂಪತ್ತಿನ ಅಧಿದೇವತೆ ತಾಯಿ ಮಹಾಲಕ್ಷ್ಮಿಯ ಕೃಪೆ ಇರಲಿದೆ ಎಂದು ಹೇಳಲಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸಿಂಹ ರಾಶಿಯವರು ಸದಾ ಐಷಾರಾಮಿ ಜೀವನವನ್ನು ನಡೆಸಲು ಇಚ್ಚಿಸುತ್ತಾರೆ. ಇವರಿಗೆ ಜೀವನದಲ್ಲಿ ಸೌಕರ್ಯಗಳಿಗೆ ಕೊರತೆ ಇರುವುದಿಲ್ಲ. ಮಾತ್ರವಲ್ಲ, ಸಮಾಜದಲ್ಲಿ ಅಪಾರ ಕೀರ್ತಿ, ಪ್ರಗತಿಯನ್ನೂ ಕಾಣುವರು. ಈ ರಾಶಿಯವರಿಗೆ ಎಂದಿಗೂ ಯಾವುದಕ್ಕೂ ಕೊರತೆ ಆಗುವುದಿಲ್ಲ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವೃಶ್ಚಿಕ ರಾಶಿಯವರನ್ನು ಲಕ್ಷ್ಮೀ ಪುತ್ರರು ಎಂದು ಬನ್ನಿಸಲಾಗುತ್ತದೆ. ಇವರಿಗೆ ಎಷ್ಟೇ ಸಂಕಷ್ಟಗಳು ಎದುರಾದರೂ ಸಹ ಯಾವುದೋ ಒಂದು ರೂಪದಲ್ಲಿ ತಾಯಿ ಎಲ್ಲಾ ಕಷ್ಟಗಳನ್ನು ಪರಿಹರಿಸುತ್ತಾಳೆ. ಯಾವುದೇ ಕೆಲಸವನ್ನು ಶ್ರದ್ಧೆಯಿಂದ ಮಾಡುವ ಇವರು ವೃತ್ತಿ ರಂಗದಲ್ಲಿ ಯಶಸ್ಸಿನ ಉತ್ತುಂಗವನ್ನು ಏರುತ್ತಾರೆ. ಇವರು ತಮ್ಮ ಕಷ್ಟದ ದುಡಿಮೆಯಿಂದ ಹಣ, ಆಸ್ತಿ, ಕೀರ್ತಿ ಎಲ್ಲವನ್ನೂ ಪಡೆಯುತ್ತಾರೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.