Lucky Zodiac Signs: ಜುಲೈ ತಿಂಗಳಿನಲ್ಲಿ ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ..!

Thu, 27 Jun 2024-6:00 pm,

ಜುಲೈ ತಿಂಗಳು ವೃಷಭ ರಾಶಿಯವರಿಗೆ ವಿಶೇಷವಾಗಿರುತ್ತದೆ. ಈ ರಾಶಿಯವರು ಈ ಅವಧಿಯಲ್ಲಿ ಆರ್ಥಿಕ ಲಾಭಕ್ಕಾಗಿ ಅನೇಕ ಅವಕಾಶಗಳನ್ನು ಪಡೆಯುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಸಿಹಿಸುದ್ದಿ ಸಿಗಲಿದೆ. ಉದ್ಯೋಗಸ್ಥರು ಹೊಸ ಉದ್ಯೋಗಕ್ಕಾಗಿ ಉತ್ತಮ ಕೊಡುಗೆ ಪಡೆಯಬಹುದು. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿದ್ದು, ನೀವು ಹಿಂದೆ ಮಾಡಿದ ಹೂಡಿಕೆಯಿಂದ ಉತ್ತಮ ಲಾಭ ಪಡೆಯುತ್ತೀರಿ. ಒಟ್ಟಾರೆ ಜುಲೈ ತಿಂಗಳು ನಿಮಗೆ ತುಂಬಾ ಶುಭಕರವಾಗಿರುತ್ತದೆ.

ಕರ್ಕಾಟಕ ರಾಶಿಯವರು ಯಾವ ಕನಸು ಕಂಡರು ಸಹ ಜುಲೈ ತಿಂಗಳಲ್ಲಿ ನನಸಾಗುತ್ತದೆ. ಈ ಅವಧಿಯಲ್ಲಿ ಹೊಸ ಉದ್ಯೋಗಗಳು ಸಿಗುವ ಸಾಧ್ಯತೆಯಿದೆ. ನಿಮ್ಮ ಆತ್ಮಸ್ಥೈರ್ಯ ಹೆಚ್ಚಲಿದ್ದು, ಕಚೇರಿಯಲ್ಲಿ ಮೇಲಧಿಕಾರಿಗಳಿಂದ ಬೆಂಬಲ ಸಿಗಲಿದೆ. ನಿಮ್ಮ ಮನಸ್ಸಿಗೆ ಸಂತೋಷವಾಗುತ್ತದೆ & ಸ್ಥಗಿತಗೊಂಡಿರುವ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆಯಿದೆ.

ಕನ್ಯಾ ರಾಶಿಯ ಜನರು ಜುಲೈ ತಿಂಗಳಲ್ಲಿ ತಮ್ಮ ವೃತ್ತಿಜೀವನದಲ್ಲಿ ಉತ್ತಮ ಯಶಸ್ಸು ಪಡೆಯುತ್ತಾರೆ. ಈ ಸಮಯದಲ್ಲಿ ನಿಮಗೆ ಅದೃಷ್ಟವು ದೊರೆಯಲಿದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಕೆಲವು ಕಷ್ಟಕರ ಕೆಲಸಗಳಲ್ಲಿ ಯಶಸ್ವಿಯಾಗಲು ನಿಮಗೆ ಅದೃಷ್ಟ ಸಹಾಯ ಮಾಡುತ್ತದೆ. ನ್ಯಾಯಾಲಯದ ಪ್ರಕರಣಗಳಲ್ಲಿ ನಿಮಗೆ ಯಶಸ್ಸು ದೊರೆಯಲಿದೆ.

ತುಲಾ ರಾಶಿಯವರಿಗೆ ಜುಲೈ ತಿಂಗಳು ಮಂಗಳಕರವಾಗಿರುತ್ತದೆ. ಈ ಸಮಯವು ಈ ರಾಶಿಯವರಿಗೆ ವರದಾನಕ್ಕಿಂತ ಕಡಿಮೆಯಿಲ್ಲ. ಕೆಲಸದಲ್ಲಿ ನಿಮಗೆ ಬಡ್ತಿ ಸಿಗಲಿದ್ದು, ವ್ಯಾಪಾರಿಗಳಿಗೆ ಈ ಅವಧಿ ಲಾಭದಾಯಕವಾಗಿರುತ್ತದೆ. ನಿಮ್ಮ ಕೆಲವು ಕನಸುಗಳು ನನಸಾಗುತ್ತವೆ. ಹಣಕಾಸಿನ ಪರಿಸ್ಥಿತಿಯಲ್ಲಿ ತೀವ್ರ ಬದಲಾವಣೆ ಸಾಧ್ಯತೆಯಿದೆ.

ಮಕರ ರಾಶಿಯವರಿಗೆ ಶನೀಶ್ವರನ ಆಶೀರ್ವಾದ ಸಿಗಲಿದೆ. ಜುಲೈ ತಿಂಗಳು ಮಕರ ರಾಶಿಯವರಿಗೆ ಸೌಕರ್ಯ ಮತ್ತು ಐಷಾರಾಮಿಗಳಿಂದ ತುಂಬಿರುತ್ತದೆ. ಈ ತಿಂಗಳು ನೀವು ಸಂತೋಷದ ಜೀವನವನ್ನು ನಡೆಸುತ್ತೀರಿ. ನಿಮ್ಮ ಮನೆಯಲ್ಲಿ ಸಂತೋಷ ಹೆಚ್ಚುತ್ತದೆ ಮತ್ತು ಆದಾಯ ಹೆಚ್ಚಾಗುವ ಸಾಧ್ಯತೆಯಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link