Lucky Zodiacs: 50 ವರ್ಷಗಳ ನಂತರ ಜನವರಿಯಲ್ಲಿ ಮೂರು ಅದ್ಭುತ ರಾಜಯೋಗ ಈ ರಾಶಿಯವರಿಗೆ ಬಂಪರ್

Tue, 02 Jan 2024-7:02 am,

2024ರ ಮೊದಲ ತಿಂಗಳು ಜನವರಿ ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ತುಂಬಾ ವಿಶೇಷವಾದ ಮಾಸ ಎಂದು ಹೇಳಲಾಗುತ್ತಿದೆ. ಸುಮಾರು 50 ವರ್ಷಗಳ ಬಳಿಕ ಏಕಕಾಲದಲ್ಲಿ ಮೂರು ಅದ್ಭುತ ರಾಜಯೋಗಗಳು ನಿರ್ಮಾಣವಾಗುತ್ತಿದ್ದು ಇದರ ಪ್ರಭಾವ ಎಲ್ಲಾ 12 ರಾಶಿಯವರ ಮೇಲೆ ಕಂಡು ಬರುತ್ತದೆ. 

ಐದು ದಶಕಗಳ ಬಳಿಕ ಏಕಕಾಲದಲ್ಲಿ ಮೂರು ಮಹಾ ರಾಜಯೋಗಗಳು:  ವಾಸ್ತವವಾಗಿ, ಜನವರಿ 01, 2024ರಂದು ಸೂರ್ಯ ಮತ್ತು ಮಂಗಳ ಸಂಯೋಗದಿಂದ ಆದಿತ್ಯ ಮಂಗಳ ರಾಜಯೋಗ, ಚಂದ್ರ ಮತ್ತು ಗುರು ಯುತಿಯಿಂದಾಗಿ ಗಜಕೇಸರಿ ರಾಜಯೋಗ  ಮತ್ತು ಆಯುಷ್ಮಾನ್ ಯೋಗ ರೂಪುಗೊಂಡಿದೆ. ಇದರ ಪರಿಣಾಮವಾಗಿ ಮೂರು ರಾಶಿಯವರ ಅದೃಷ್ಟವೇ ಬದಲಾಗಲಿದೆ ಎಂದು ಹೇಳಲಾಗುತ್ತಿದೆ. ಅವುಗಳೆಂದರೆ... 

ಮೇಷ ರಾಶಿ:  ಜನವರಿ ತಿಂಗಳಿನಲ್ಲಿ ರೂಪುಗೊಂಡಿರುವ ಈ ಮೂರು ಅದ್ಭುತ ರಾಜಯೋಗಗಳ ಪರಿಣಾಮವಾಗಿ ಮೇಷ ರಾಶಿಯವರಿಗೆ ಬಹುದಿನಗಳ ಕನಸು ನನಸಾಗಲಿದೆ. ಉದ್ಯೋಗಸ್ಥರಿಗೆ ಕೈತುಂಬಾ ಹಣದ ಜೊತೆಗೆ ಪ್ರಯೋಷನ್ ಸಾಧ್ಯತೆಯೂ ಇದೆ. 

ವೃಷಭ ರಾಶಿ:  ವರ್ಷದ ಮೊದಲ ತಿಂಗಳಿನಲ್ಲಿ ನಿರ್ಮಾಣವಾಗಿರುವ ಮೂರು ರಾಜಯೋಗಗಳು ನಿಮ್ಮ ಅದೃಷ್ಟವನ್ನೇ ಬದಲಾಯಿಸಬಹುದು. ಈ ತಿಂಗಳು ಬಂಪರ್ ಧನಲಾಭ ಸಾಧ್ಯತೆ, ವೃತ್ತಿ ವ್ಯವಹಾರದಲ್ಲಿ ಯಶಸ್ಸನ್ನು ನಿರೀಕ್ಷಿಸಬಹುದು. ವಿದೇಶ ಪ್ರವಾಸ ಯೋಗವೂ ಇದೆ. 

ಮಕರ ರಾಶಿ:  ಏಕಕಾಲದಲ್ಲಿ ರೂಪುಗೊಂಡಿರುವ ಮೂರು ರಾಜಯೋಗಗಳು ಮಕರ ರಾಶಿಯವರಿಗೆ ವರದಾನಕ್ಕಿಂತ ಕಡಿಮೆ ಇಲ್ಲ ಎಂತಲೇ ಹೇಳಬಹುದು. ಈ ಸಮಯದಲ್ಲಿ ನಿಮ್ಮ ದೀರ್ಘ ಸಮಯದ ಮನೋಕಾಮನೆ ಈಡೇರಲಿದೆ. ಹಣಕಾಸಿನ ವಿಷಯದಲ್ಲೂ ಭಾರೀ ಲಾಭ ನಿರೀಕ್ಷೆಯಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link