Lunar Eclipse 2021: ಮೇ 26 ರಂದು ವರ್ಷದ ಮೊದಲ ಚಂದ್ರ ಗ್ರಹಣ, ಈ ರಾಶಿಯ ಮೇಲೆ ನೇರ ಪರಿಣಾಮ

Sat, 15 May 2021-1:30 pm,

ಅಂದಹಾಗೆ, ಚಂದ್ರ ಗ್ರಹಣವು (Lunar eclipse) ಖಗೋಳ ವಿದ್ಯಮಾನವಾಗಿದೆ. ವಿಜ್ಞಾನದ ಪ್ರಕಾರ, ಸೂರ್ಯ, ಭೂಮಿ ಮತ್ತು ಚಂದ್ರರು ಸರಳ ರೇಖೆಯಲ್ಲಿ ಬಂದಾಗ ಚಂದ್ರನು ಅದರ ನೆರಳಿನಲ್ಲಿ ಭೂಮಿಯ ಹಿಂದೆಯೇ ಹೋಗುತ್ತಾನೆ ಮತ್ತು ಅದನ್ನು ಚಂದ್ರ ಗ್ರಹಣ ಎಂದು ಕರೆಯಲಾಗುತ್ತದೆ. ಇದು ಹುಣ್ಣಿಮೆಯ ದಿನದಂದು ಮಾತ್ರ ನಡೆಯುತ್ತದೆ.  ಖಗೋಳ ವಿದ್ಯಮಾನಗಳ ಹೊರತಾಗಿ, ಚಂದ್ರ ಗ್ರಹಣವನ್ನು ಜ್ಯೋತಿಷ್ಯದಲ್ಲಿ ವಿಶೇಷ ಪ್ರಾಮುಖ್ಯತೆ ಎಂದು ಪರಿಗಣಿಸಲಾಗಿದೆ.

ಹಿಂದೂ ಕ್ಯಾಲೆಂಡರ್ ಮತ್ತು ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, 2021 ರ ಮೊದಲ ಚಂದ್ರಗ್ರಹಣವು ವೈಶಾಖ ಪೂರ್ಣಿಮಾದ ದಿನವಾದ ಮೇ 26 ರಂದು ಸಂಭವಿಸಲಿದೆ. ಈ ಚಂದ್ರ ಗ್ರಹಣವನ್ನು (Lunar Eclipse) ನೆರಳು ಚಂದ್ರ ಗ್ರಹಣ ಎಂದು ಹೇಳಲಾಗಿದೆ. ಭಾರತೀಯ ಕಾಲಮಾನದ ಪ್ರಕಾರ, ಮೇ 26 ರಂದು  ಸಂಭವಿಸಲಿರುವ ಚಂದ್ರ ಗ್ರಹಣದ ಸಮಯ ಮಧ್ಯಾಹ್ನ 2.17 ರಿಂದ ಸಂಜೆ 7.19 ರವರೆಗೆ ಎನ್ನಲಾಗಿದೆ.

ಭಾರತದ ಸಮಯದ ಪ್ರಕಾರ, ಈ ಚಂದ್ರ ಗ್ರಹಣ (lunar eclipse 2021) ಹಗಲಿನಲ್ಲಿ ಸಂಭವಿಸಲಿದೆ. ಆದ್ದರಿಂದ ಇದು ಭಾರತದಲ್ಲಿ ಗೋಚರಿಸುವುದಿಲ್ಲ. ಈ ಚಂದ್ರ ಗ್ರಹಣವು ಇಡೀ ಭಾರತದಲ್ಲಿ ಕಾಣಿಸುವುದಿಲ್ಲ, ಆದ್ದರಿಂದ ಅದರ ಸುತಕ್ ಅವಧಿಯು ಸಹ ಮಾನ್ಯವಾಗಿರುವುದಿಲ್ಲ. ಸುತಕ್ ಮಾನ್ಯವಾಗಿಲ್ಲದ ಕಾರಣ, ದೇವಾಲಯದ ಬಾಗಿಲು ಮುಚ್ಚಲಾಗುವುದಿಲ್ಲ ಮತ್ತು ಶುಭ ಕಾರ್ಯಗಳನ್ನು ನಿಷೇಧಿಸಲಾಗುವುದಿಲ್ಲ.

ಇದನ್ನೂ ಓದಿ - Lunar eclipse 2021: ಈ ವರ್ಷದ ಮೊದಲ ಚಂದ್ರ ಗ್ರಹಣ ಯಾವಾಗ ? ಎಲ್ಲಿ?  

ಮೇ 26 ರಂದು ಸಂಭವಿಸಲಿರುವ ಚಂದ್ರ ಗ್ರಹಣ ಜಪಾನ್, ಸಿಂಗಾಪುರ್, ಬಾಂಗ್ಲಾದೇಶ, ದಕ್ಷಿಣ ಕೊರಿಯಾ, ಬರ್ಮಾ, ಉತ್ತರ ಮತ್ತು ದಕ್ಷಿಣ ಅಮೆರಿಕಾ, ಫಿಲಿಪೈನ್ಸ್, ಪೆಸಿಫಿಕ್ ಮತ್ತು ಹಿಂದೂ ಮಹಾಸಾಗರ, ಆಸ್ಟ್ರೇಲಿಯಾ ಮತ್ತು ಉತ್ತರ ಯುರೋಪಿನ ಕೆಲವು ಪ್ರದೇಶಗಳಲ್ಲಿ ಗೋಚರಿಸಲಿದೆ. ಆದರೆ ಭಾರತದಲ್ಲಿ ಈ ಗ್ರಹಣವು ನೆರಳಿನಂತೆ ಕಾಣಿಸುತ್ತದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ - ವರ್ಷದ ಮೊದಲ Lunar Eclipse, ಎಲ್ಲಿ ಗೋಚರ, ಅದರ ಪರಿಣಾಮ ಏನೆಂದು ತಿಳಿಯಿರಿ

ಹಿಂದೂ ಕ್ಯಾಲೆಂಡರ್ ಪ್ರಕಾರ, ಮೇ 26 ರಂದು ಸಂಭವಿಸಲಿರುವ ವರ್ಷದ ಮೊದಲ ಚಂದ್ರಗ್ರಹಣವು ವೃಶ್ಚಿಕ ರಾಶಿಯಲ್ಲಿ ಸಂಭವಿಸಲಿದೆ. ಈ ಕಾರಣದಿಂದಾಗಿ, ಈ ಗ್ರಹಣದ ಗರಿಷ್ಠ ಪರಿಣಾಮವು ಈ ರಾಶಿಯ ಜನರ ಮೇಲೆ ಇರುತ್ತದೆ. ಹಾಗಾಗಿ ವೃಶ್ಚಿಕ ರಾಶಿಯ ಜನರು ಈ ಗ್ರಹಣ ಸಮಯದಲ್ಲಿ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ.

(ಗಮನಿಸಿ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. ಜೀ ನ್ಯೂಸ್ ಇವುಗಳನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link