Lunar Eclipse 2021: ಚಿತ್ರಪಟಗಳಲ್ಲಿ ವರ್ಷದ ಮೊದಲ ಚಂದ್ರಗ್ರಹಣ
ಭಾರತೀಯ ಸಮಯಕ್ಕೆ ಅನುಗುಣವಾಗಿ ಮಧ್ಯಾಹ್ನ 2.18 ಕ್ಕೆ ಆರಂಭವಾದ ಚಂದ್ರ ಗ್ರಹಣ ಸಂಜೆ 7.19 ಕ್ಕೆ ಕೊನೆಗೊಳ್ಳಲಿದೆ. ಅಂದರೆ ಒಟ್ಟು 5 ಗಂಟೆಗಳ ಗ್ರಹಣ ಕಾಲ. ಕ್ಯಾಲಿಫೋರ್ನಿಯಾದಲ್ಲಿ ಕಂಡ ಚಂದ್ರಮ ಹೀಗಿದ್ದ..
ಭಾರತದಲ್ಲಿ ಚಂದ್ರಗ್ರಹಣವು ಹೆಚ್ಚು ಪರಿಣಾಮಕಾರಿಯಾಗಿರುವುದಿಲ್ಲ. ಗ್ರಹಣ ಸಮಯದಲ್ಲಿ ಭಾರತದ ಹೆಚ್ಚಿನ ಭಾಗಗಳಲ್ಲಿ ಚಂದ್ರನು ಪೂರ್ವ ದಿಗಂತಕ್ಕಿಂತ ಕೆಳಗಿರುವುದರಿಂದ ದೇಶದ ಹೆಚ್ಚಿನ ಭಾಗಗಳಲ್ಲಿ ಚಂದ್ರ ಗ್ರಹಣವನ್ನು ನೋಡಲು ಸಾಧ್ಯವಾಗುವುದಿಲ್ಲ. ಪೂರ್ವ ಭಾರತದ ಕೆಲವು ಭಾಗಗಳಲ್ಲಿ ಸ್ವಲ್ಪ ಕಾಲಕ್ಕೆ ಮಾತ್ರ ಚಂದ್ರ ಗ್ರಹಣವನ್ನು ವೀಕ್ಷಿಸಬಹುದು.
ಚಂದ್ರಗ್ರಹಣದ ನಂತರ ಪ್ರಪಂಚದಾದ್ಯಂತ ಸೂಪರ್‌ಮೂನ್ ನೋಡುವುದು ಸಾಧ್ಯವಾಗುತ್ತದೆ. ಆದರೆ ಭಾರತ, ನೇಪಾಳ, ಪಶ್ಚಿಮ ಚೀನಾ, ಮಂಗೋಲಿಯಾ ಮತ್ತು ಪೂರ್ವ ರಷ್ಯಾದ ಕೆಲವು ಭಾಗಗಳಲ್ಲಿ ಭಾಗಶಃ ಗ್ರಹಣ ಮಾತ್ರ ಕಾಣಿಸುತ್ತದೆ
ಭಾರತದಲ್ಲಿ ಚಂದ್ರಗ್ರಹಣ ವೀಕ್ಷಣೆ ಸಾಧ್ಯವಾಗುತ್ತಿಲ್ಲವಾದರೂ, ಪೂರ್ವ ಏಷ್ಯಾ, ಆಸ್ಟ್ರೇಲಿಯಾ, ಪೆಸಿಫಿಕ್ ಮಹಾಸಾಗರ ಮತ್ತು ಅಮೆರಿಕದ ಅನೇಕ ಪ್ರದೇಶಗಳಲ್ಲಿ ಚಂದ್ರಗ್ರಹಣ ಕಂಡುಬರುತ್ತಿವೆ. ಈ ಸುಂದರ ನೋಟ ಸಿಡ್ನಿಯದ್ದು.
ಸಾಮಾನ್ಯವಾಗಿ ಗ್ರಹಣ ಆರಂಭವಾಗುವ 9 ಗಂಟೆಗೂ ಮುನ್ನ ಸೂತಕ ಕಾಲ ಆರಂಭವಾಗುತ್ತದೆ. ಆದರೆ ಈ ಬಾರಿ ಭಾರತದಲ್ಲಿ ಚಂದ್ರಗ್ರಹಣ ಗೋಚರವಾಗದ ಕಾರಣ ಸೂತಕ ಸಮಯ ಇರುವುದಿಲ್ಲ.