ವರ್ಷದ ಮೊದಲ ಚಂದ್ರಗ್ರಹಣ: ಕನ್ಯಾ ಸೇರಿ ಈ 6 ರಾಶಿಗಳಿಗೆ ಲಾಭವೋ ಲಾಭ! ಮುಟ್ಟಿದ ಪ್ರತೀ ಕೆಲಸದಲ್ಲಿ ಗೆಲುವಿನದ್ದೇ ಕಾರುಬಾರು
ಈ ವರ್ಷದ ಮೊದಲ ಚಂದ್ರಗ್ರಹಣ ಮಾರ್ಚ್ 25 ರಂದು ಸಂಭವಿಸಲಿದೆ. ಇದೇ ದಿನ ಹೋಳಿ ಹಬ್ಬ ಎನ್ನುವುದು ಇರುವುದು ವಿಶೇಷ. ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ ಚಂದ್ರಗ್ರಹಣ ಸಂಭವಿಸುತ್ತದೆ.
ಮಾರ್ಚ್ 25 ರಂದು ಚಂದ್ರಗ್ರಹಣ ಭಾಗಶಃ ಇರುತ್ತದೆ. ಬೆಳಗ್ಗೆ 10:40ಕ್ಕೆ ಪ್ರಾರಂಭವಾಗಿ, ಅದೇ ದಿನ ಮಧ್ಯಾಹ್ನ 3:01 ಕ್ಕೆ ಕೊನೆಗೊಳ್ಳುತ್ತದೆ. ಈ ಗ್ರಹಣವು ಆಸ್ಟ್ರೇಲಿಯಾ, ಆಫ್ರಿಕಾ, ದಕ್ಷಿಣ ಆಫ್ರಿಕಾ, ಉತ್ತರ ಅಮೆರಿಕಾ, ಅಟ್ಲಾಂಟಿಕ್ ಸಾಗರ ಮತ್ತು ಪೆಸಿಫಿಕ್ ಮಹಾಸಾಗರದ ಭಾಗಗಳಲ್ಲಿ ಗೋಚರಿಸುತ್ತದೆ. ನಮ್ಮ ದೇಶದಲ್ಲಿ ಕಾಣುವುದಿಲ್ಲ. ಆದರೆ, ಕೆಲವು ರಾಶಿಗಳ ಮೇಲೆ ಪರಿಣಾಮವು ಧನಾತ್ಮಕವಾಗಿ ಬೀರಲಿದೆ.
ಮಿಥುನ ರಾಶಿ: ಚಂದ್ರಗ್ರಹಣದ ಪರಿಣಾಮವು ಮಿಥುನ ರಾಶಿಯ ಮೇಲೆ ಅನುಕೂಲಕರವಾಗಿರುತ್ತದೆ. ವೈಯಕ್ತಿಕ ಜೀವನ ಸುಗಮವಾಗಲಿದೆ. ಲಕ್ಷ್ಮಿ ದೇವಿಯ ಆಶೀರ್ವಾದದಿಂದ, ಆದಾಯದ ಮಾರ್ಗಗಳು ಜೀವನದಲ್ಲಿ ಉತ್ತಮಗೊಳ್ಳುತ್ತವೆ. ಆರೋಗ್ಯ ಕಾಳಜಿ ವಹಿಸಬೇಕು. ಆಸ್ತಿ ವಿವಾದಗಳು ಬಗೆಹರಿಯುತ್ತವೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಇರುತ್ತದೆ.
ಕನ್ಯಾ ರಾಶಿ: ವರ್ಷದ ಮೊದಲ ಚಂದ್ರಗ್ರಹಣವು ಕನ್ಯಾ ರಾಶಿಯವರಿಗೆ ಅದೃಷ್ಟವನ್ನು ತರುತ್ತದೆ. ಲಕ್ಷ್ಮಿ ದೇವಿಯ ಕೃಪೆಯಿಂದ ಆರ್ಥಿಕ ಲಾಭವಾಗುತ್ತದೆ. ಪ್ರಾರಂಭಿಸಿದ ಕೆಲಸದಲ್ಲಿ ಯಶಸ್ವಿಯಾಗುತ್ತಾರೆ. ವ್ಯಾಪಾರದಿಂದ ದುಪ್ಪಟ್ಟು ಆದಾಯ ಪಡೆಯಬಹುದು. ಉದ್ಯೋಗಿಗಳಿಗೆ ಸಂಬಳದ ಹೆಚ್ಚಳ ಮತ್ತು ಬಡ್ತಿಗಳು ಇರಬಹುದು. ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ.
ಧನು ರಾಶಿ: ಈ ರಾಶಿಯವರು ಚಂದ್ರಗ್ರಹಣದ ಪ್ರಭಾವದಿಂದ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯುತ್ತಾರೆ. ವಿವಿಧ ಕ್ಷೇತ್ರಗಳಲ್ಲಿನ ಹೂಡಿಕೆ ಲಾಭ ತರಬಹುದು. ವ್ಯಾಪಾರಗಳು ಅಭಿವೃದ್ಧಿ ಹೊಂದುತ್ತವೆ. ವೈಯಕ್ತಿಕ ಜೀವನ ಸುಖಮಯವಾಗಿರುತ್ತದೆ.
ಸಿಂಹ ರಾಶಿ: ಈ ರಾಶಿಯವರಿಗೆ ಚಂದ್ರಗ್ರಹಣದಿಂದ ಅನೇಕ ಲಾಭ ಸಿಗಲಿವೆ. ಹೊಸ ಮನೆಯನ್ನು ಖರೀದಿಸುವ ಸಾಧ್ಯತೆಯಿದೆ. ಲಕ್ಷ್ಮಿ ದೇವಿಯ ಆಶೀರ್ವಾದ ಇರಲಿದ್ದು, ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ವ್ಯಾಪಾರದಲ್ಲಿ ಲಾಭ. ಸಾಲ ವಸೂಲಿಯಾಗಲಿದೆ.
ವೃಶ್ಚಿಕ ರಾಶಿ: ಈ ರಾಶಿಯವರಿಗೆ ಚಂದ್ರಗ್ರಹಣ ಧನಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. ವ್ಯಾಪಾರದಲ್ಲಿ ಹೊಸ ಒಪ್ಪಂದಗಳನ್ನು ಮಾಡಿಕೊಳ್ಳಬಹುದು. ಆರ್ಥಿಕ ಪರಿಸ್ಥಿತಿಯು ಶೀಘ್ರವಾಗಿ ಸುಧಾರಿಸುತ್ತದೆ. ವೈಯಕ್ತಿಕ ಜೀವನ ಸುಖಮಯವಾಗಿರುತ್ತದೆ. ಹೂಡಿಕೆಗಳು ದ್ವಿಗುಣ ಆದಾಯವನ್ನು ಹೊಂದಬಹುದು.
(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)