Chandra Grahan: 100 ವರ್ಷಗಳ ನಂತರ ಹೋಳಿ ವೇಳೆ ಚಂದ್ರಗ್ರಹಣ, ಗ್ರಹಗಳ ಅಶುಭ ಯೋಗದಿಂದ ಈ ಜನರಿಗೆ ಭಾರೀ ತೊಂದರೆ
2024 ರ ಮೊದಲ ಚಂದ್ರಗ್ರಹಣವು ಫಾಲ್ಗುಣ ಪೂರ್ಣಿಮೆಯ ದಿನ ಎಂದರೆ ಹೋಳಿ ಹಬ್ಬದ ದಿನವೇ ಇರಲಿದೆ. ಈ ವರ್ಷ ಮಾರ್ಚ್ 25 ರಂದು ಹೋಳಿ ಹಬ್ಬವನ್ನು ಆಚರಿಸಲಾಗುತ್ತಿದ್ದು, ಇದೇ ದಿನ ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸಲಿದೆ. ಮಾರ್ಚ್ 25 ರಂದು ಬೆಳಿಗ್ಗೆ 10:23 ಕ್ಕೆ ಪ್ರಾರಂಭವಾಗಲಿರುವ ಚಂದ್ರಗ್ರಹಣವು ಮಧ್ಯಾಹ್ನ 3:02 ಕ್ಕೆ ಕೊನೆಗೊಳ್ಳುತ್ತದೆ.
ಹೋಳಿ ಹಬ್ಬದ ದಿನವೇ ಚಂದ್ರಗ್ರಹಣದ ಜೊತೆಗೆ ಕೆಲವು ಅಶುಭ ಯೋಗಗಳು ಕೂಡ ನಿರ್ಮಾಣವಾಗಲಿವೆ. ಒಂದೆಡೆ, ಮೀನ ರಾಶಿಯಲ್ಲಿ ಸೂರ್ಯ ಮತ್ತು ರಾಹುವಿನ ಅಶುಭ ಸಂಯೋದಿಂದ ಗ್ರಹಣ ಯೋಗ ರೂಪುಗೊಳ್ಳುತ್ತಿದೆ. ಇನ್ನೊಂದೆಡೆ, ಕುಂಭ ರಾಶಿಯಲ್ಲಿ ಮಂಗಳ ಮತ್ತು ಶನಿಯ ಅಪಾಯಕಾರಿ ಯೋಗ ನಿರ್ಮಾಣವಾಗುತ್ತಿದೆ. ಈ ಅಶುಭ ಯೋಗಗಳ ಪರಿಣಾಮವಾಗಿ ಕೆಲವು ರಾಶಿಯವರು ತುಂಬಾ ಎಚ್ಚರಿಕೆಯಿಂದ ಇರಬೇಕು ಎನ್ನಲಾಗುತ್ತಿದೆ. ಆ ರಾಶಿಗಳೆಂದರೆ...
ಹೋಳಿ ಹಬ್ಬದಲ್ಲಿ ಚಂದ್ರಗ್ರಹಣ ಆಶುಭ ಯೋಗಗಳ ಪರಿಣಾಮವಾಗಿ ಮೇಷ ರಾಶಿಯವರ ಜೀವನದಲ್ಲಿ ಸಮಸ್ಯೆಗಳು ಉಲ್ಬಣಿಸಲಿವೆ. ಈ ಸಂದರ್ಭದಲ್ಲಿ ವೃತ್ತಿ ಬದುಕಿನಲ್ಲಿಯೂ ನಾನಾ ರೀತಿಯ ಅಡೆತಡೆಗಳು ನಿರ್ಮಾಣವಾಗಲಿದೆ. ಆರ್ಥಿಕ ಸಂಕಷ್ಟ, ಅನಾರೋಗ್ಯವೂ ನಿಮ್ಮನ್ನು ಬಾಧಿಸಬಹುದು.
ಹೋಳಿ ಹಬ್ಬದ ಸಂದರ್ಭದಲ್ಲಿ ವರ್ಷದ ಮೊದಲ ಚಂದ್ರಗ್ರಹಣವು ವೃಷಭ ರಾಶಿಯ ಜನರಿಗೆ ಉದ್ಯೋಗದಲ್ಲಿ ಒತ್ತಡವನ್ನು ಹೆಚ್ಚಿಸಲಿದೆ. ಈ ವೇಳೆ ನಿಮ್ಮ ಕಠಿಣ ಪರಿಶ್ರಮಕ್ಕೆ ಸರಿಯಾದ ರೀತಿಯಲ್ಲಿ ಮನ್ನಣೆ ಸಿಗದೇ ಇರುವುದು ನಿಮಗೆ ಮಾನಸಿಕವಾಗಿ ನೋವುಂಟು ಮಾಡಬಹುದು. ಕೌಟುಂಬಿಕ ವಿಚಾರಗಳಲ್ಲೂ ಸಹ ನಿಮ್ಮ ಮಾತಿನ ಬಗ್ಗೆ ಸಂಯಮ ಕಾದುಕೊಳ್ಳುವುದು ಒಳ್ಳೆಯದು.
2024 ರ ಮೊದಲ ಚಂದ್ರಗ್ರಹಣವು ಕನ್ಯಾರಾಶಿಯಲ್ಲಿಯೇ ಸಂಭವಿಸಲಿದೆ. ಹಾಗಾಗಿ, ಈ ರಾಶಿಯ ಜನರು ವಿಶೇಷ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ಅದು ವೃತ್ತಿ ವ್ಯವಹಾರವಾಗಿರಲಿ, ಇಲ್ಲವೇ, ವೈಯಕ್ತಿಕ ವಿಚಾರಗಳಿರಲಿ ನಕಾರಾತ್ಮಕ ಆಲೋಚನೆಗಳಿಗೆ ಆಸ್ಪದ ನೀಡಬೇಡಿ. ಅನಾವಶ್ಯಕ ವಾದ-ವಿವಾದಗಳಿಂದ ದೂರ ಉಳಿಯುವುದರಿಂದ ಆರೋಗ್ಯ ಸಮಸ್ಯೆಗಳಿಂದ ಒಂದಿಷ್ಟು ಪರಿಹಾರ ಕಂಡುಕೊಳ್ಳಬಹುದು.
ವರ್ಷದ ಮೊದಲ ಚಂದ್ರ ಗ್ರಹಣದ ಸಂದರ್ಭದಲ್ಲೇ ಕುಂಭ ರಾಶಿಯಲ್ಲಿ ಮಂಗಳ ಮತ್ತು ಶನಿಯ ಅಪಾಯಕಾರಿ ಯೋಗ ನಿರ್ಮಾಣವಾಗುತ್ತಿದೆ. ಸ್ವ ರಾಶಿಯಲ್ಲಿ ಅಪಾಯಕಾರಿ ಯೋಗವು ಕುಂಭ ರಾಶಿಯ ಜನರಿಗೆ ನಾನಾ ರೀತಿಯ ಸಮಸ್ಯೆಯನ್ನೇ ತಂದೊಡ್ಡಲಿದೆ. ನಿಮ್ಮ ಮಾತೇ ನಿಮಗೆ ಮುಳುವಾಗಿ ಕಾಡುವ ಸಾಧ್ಯತೆ ಇರುವುದರಿಂದ ಸಾಧ್ಯವಾದಷ್ಟು ನಿಮ್ಮ ನಾಲಿಗೆಗೆ ಕಡಿವಾಣ ಹಾಕಿ. ವ್ಯಾಪಾರದಲ್ಲಿ ದೊಡ್ಡ ನಷ್ಟ ಸಾಧ್ಯತೆ ಇರುವುದರಿಂದ ವಿಶೇಷ ಕಾಳಜಿ ವಹಿಸಿ.
ವರ್ಷದ ಮೊದಲ ಚಂದ್ರಗ್ರಹಣವು ಮೀನ ರಾಶಿಯ ಜನರ ಸಮಸ್ಯೆಗಳನ್ನು ಹೆಚ್ಚಿಸಲಿದೆ. ಈ ವೇಳೆ ನಿಮ್ಮ ಮಕ್ಕಳಿಂದಲೇ ನಿಮ್ಮ ಮನಸ್ಸಿಗೆ ನೋವುಂಟಾಗಬಹುದು. ಆದಾಗ್ಯೂ, ಈ ಸಂದರ್ಭದಲ್ಲಿ ತಾಳ್ಮೆಯನ್ನು ಅಭ್ಯಾಸ ಮಾಡುವುದು ಒಳ್ಳೆಯದು. ವ್ಯಾಪಾರ-ವ್ಯವಹಾರದಲ್ಲಿಯೂ ಕೈ ಸುಟ್ಟಿಕೊಳ್ಳುವ ಸಂಭವವಿರುವುದರಿಂದ ಎಚ್ಚರಿಕೆಯಿಂದಿರಿ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.