ಟೀಂ ಇಂಡಿಯಾ ಕ್ರಿಕೆಟಿಗರು ಧರಿಸುತ್ತಾರೆ ದುಬಾರಿ ಕೈಗಡಿಯಾರ: ಬೆಲೆ ಎಷ್ಟು ಗೊತ್ತಾ..?

Sat, 28 Aug 2021-1:37 pm,

27 ವರ್ಷದ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಸದ್ಯ ಐಪಿಎಲ್ ಆಡಲು ಅಬುಧಾಬಿಗೆ ತೆರಳಿದ್ದಾರೆ. ಐಷಾರಾಮಿ ಜೀವನದ ಮೂಲಕ ಅನೇಕ ಬಾರಿ ಸುದ್ದಿಯಾಗಿರುವ ಪಾಂಡ್ಯ ಬಳಿ ಹಲವು ಐಷಾರಾಮಿ ವಾಚ್ ಗಳ ಸಂಗ್ರಹ ಇದೆ. ಹಾರ್ದಿಕ್ ಪಾಂಡ್ಯ ಪಚ್ಚೆ ಹಸಿರು ಬಣ್ಣದ ಪಟೆಕ್ ಫಿಲಿಪ್ ನಾಟಿಲಸ್ ಪ್ಲಾಟಿನಂ(emerald green Patek Philippe Nautilus Platinum) 5711 ಕೈಗಡಿಯಾರ ಧರಿಸುತ್ತಾರೆ. ಈ ಅಲ್ಟ್ರಾ-ಐಷಾರಾಮಿ ವಾಚ್‌ಗೆ ಹೆಚ್ಚಿನ ಬೇಡಿಕೆಯಿದ್ದು, ಮಾರುಕಟ್ಟೆಯಲ್ಲಿ 5 ಕೋಟಿ ರೂ. ಬೆಲೆ ಇದೆ.

ಟೀ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಲಿಮಿಟೆಡ್ ಎಡಿಶನ್ ಆಗಿರುವ ಪಟೇಕ್ ಫಿಲಿಪ್ ಅಕ್ವಾನಾಟ್(Patek Philippe Aquanaut) 5167 ವಾಚ್ ಧರಿಸುತ್ತಾರೆ. ಸ್ವಿಸ್ ವಾಚ್ ತಯಾರಕರಿಂದ ಮಾಡಲ್ಪಟ್ಟಿರುವ ಈ ಕೈಗಡಿಯಾರ ಹಲವು ವಿಶೇಷತೆಗಳನ್ನು ಹೊಂದಿದೆ. ಈ ವಾಚ್ ನ ನಿಖರ ಬೆಲೆ ತಿಳಿದಿಲ್ಲವಾದರೂ ಮಾರುಕಟ್ಟೆಯಲ್ಲಿ ಸುಮಾರು 5 ರಿಂದ 10 ಕೋಟಿ ರೂ. ಇರಬಹುದೆಂದು ಅಂದಾಜಿಸಲಾಗಿದೆ.

ಟೀಂ ಇಂಡಿಯಾ ಆರಂಭಿಕ ಆಟಗಾರ ಕೆ.ಎಲ್.ರಾಹುಲ್ ಐಷಾರಾಮಿ ವಾಚ್ ಗಳ ಪ್ರೇಮಿ ಎಂದರೆ ತಪ್ಪಾಗಲಾರದು. ಅವರ ಬಳಿ ರೋಲೆಕ್ಸ್ ನಿಂದ ಪನೇರೈ ಮತ್ತು ಹ್ಯೂಬ್ಲೋಟ್ ನಿಂದ ಪಾಟೆಕ್ ಫಿಲಿಫ್ ವರೆಗೆ ಅನೇಕ ದುಬಾರಿ ಬೆಲೆಯ ವಾಚ್ ಗಳಿವೆ. ಸ್ಟೈಲಿಶ್ ಬ್ಯಾಟ್ಸಮನ್ ರಾಹುಲ್ ಲಿಮಿಡೆಡ್ ಎಡಿಶನ್ ಆಗಿರುವ ಔಡೆಮರ್ಸ್ ಪಿಗುಯೆಟ್ ರಾಯಲ್ ಓಕ್(Audemars Piguet Royal Oak) ವಾಚನ್ನು ಹೆಚ್ಚಾಗಿ ಧರಿಸುತ್ತಾರೆ. ಈ ಅಲ್ಟ್ರಾ-ಐಷಾರಾಮಿ ವಾಚ್‌ನ ಬೆಲೆ ಸುಮಾರು 3 ಕೋಟಿ ರೂ. ಎಂದು ಹೇಳಲಾಗಿದೆ.

ಟೀಂ ಇಂಡಿಯಾದ ಹಿಟ್ ಮ್ಯಾನ್ ರೋಹಿತ್ ಶರ್ಮಾಗೆ ಹ್ಯೂಬ್ಲೋಟ್ ವಾಚ್ ಗಳೆಂದರೆ ತುಂಬಾ ಅಚ್ಚುಮೆಚ್ಚು. ಅವರು ವಿಶೇಷವಾಗಿ ಐಕಾನಿಕ್ ಕಾರ್ ಬ್ರಾಂಡ್ ಫೆರಾರಿ ಸಹಯೋಗದೊಂದಿಗೆ ವಾಚ್ ಮೇಕರ್ ನ ಲಿಮಿಟೆಡ್ ಎಡಿಶನ್ ವಾಚ್ ಧರಿಸುತ್ತಾರೆ. ರೋಹಿತ್ ಹ್ಯೂಬ್ಲೋಟ್ ಬಿಗ್ ಬ್ಯಾಂಡ್ ಗೋಲ್ಡ್ ಸೆರಾಮಿಕ್(Hublot Big Band Gold Ceramic)ಅನ್ನು ಹೆಚ್ಚಾಗಿ ಧರಿಸುತ್ತಾರೆ. ಈ ವಾಚ್‌ನ ಬೆಲೆ ಸುಮಾರು 2 ರಿಂದ 3 ಕೋಟಿ ರೂ. ಎಂದು ಹೇಳಲಾಗುತ್ತಿದೆ.   

ಕೊನೆಯದಾಗಿ ಕ್ಯಾಪ್ಟನ್ ಕೂಲ್ ಖ್ಯಾತಿಯ ಎಂ.ಎಸ್.ಧೋನಿ ವಾಚ್‌ಮೇಕರ್ ಪನೇರೈ(Panerai)ದೊಂದಿಗೆ ಸಹಯೋಗ ಹೊಂದಿದ್ದಾರೆ. ಪನೇರೈ ಕಂಪನಿಯು MSD ಸಹಯೋಗದೊಂದಿಗೆ ಹಸಿರು ಬಣ್ಣದಲ್ಲಿ ಎರಡು ಲಿಮಿಟೆಡ್ ಎಡಿಶನ್ ವಾಚ್ ಗಳನ್ನು ಬಿಡುಗಡೆ ಮಾಡಿದೆ. ಧೋನಿ ಧರಿಸುವ ಈ ಕಂಪನಿಯ ವಾಚ್ ನ ಬೆಲೆ ಸುಮಾರು 1-2 ಕೋಟಿ ರೂ. ಎಂದು ಹೇಳಲಾಗಿದೆ. ಇದಲ್ಲದೆ ಧೊನಿ ಅನೇಕ ದುಬಾರಿ ವಾಚ್ ಗಳ ಸಂಗ್ರಹ ಹೊಂದಿದ್ದಾರಂತೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link