Astro Tips: ಶುಕ್ರವಾರ ಲಕ್ಷ್ಮಿದೇವಿಗೆ ಈ ವಸ್ತು ಅರ್ಪಿಸಿ, ಜೀವನದಲ್ಲಿ ಎಂದಿಗೂ ಹಣದ ಕೊರತೆ ಇರಲ್ಲ!

Fri, 11 Nov 2022-8:47 am,

ಶುಕ್ರವಾರದಂದು ತಾಯಿ ಲಕ್ಷ್ಮಿದೇವಿಗೆ 108 ಬಾರಿ ‘ಓಂ ಶ್ರೀ ಶ್ರೀಯೇ ನಮಃ’ ಎಂದು ಜಪಿಸಿ. ಈ ದಿನ ವಿಷ್ಣುವಿಗೆ ದಕ್ಷಿಣಾವರ್ತಿ ಶಂಖದಲ್ಲಿ ನೀರು ತುಂಬಿ ಅಭಿಷೇಕ ಮಾಡಬೇಕು. ಸಂಜೆ ಹಸುವಿನ ತುಪ್ಪದ ದೀಪವನ್ನು ಹಚ್ಚಿ ಮತ್ತು ಆ ದೀಪಕ್ಕೆ ಸ್ವಲ್ಪ ಕುಂಕುಮವನ್ನು ಹಾಕಿ. ಅಷ್ಟೇ ಅಲ್ಲ ಶುಕ್ರವಾರ ಬಡವರಿಗೆ ಅನ್ನದಾನ ಮಾಡಬೇಕು.

ಶ್ವೇತವರ್ಣದ ಬೆಂಡು-ಬತ್ತಾಸು(Bendu Battasu) ತಾಯಿ ಲಕ್ಷ್ಮಿದೇವಿಗೆ ಬಹಳ ಪ್ರಿಯ. ಹೀಗಾಗಿ ಶುಕ್ರವಾರ ದೇವಿಗೆ ಈ ಮಿಠಾಯಿಗಳನ್ನು ಅರ್ಪಿಸಬೇಕು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಲಕ್ಷ್ಮಿದೇವಿಗೆ ಬಿಳಿ ಬಣ್ಣ ತುಂಬಾ ಪ್ರಿಯ. ಆದ್ದರಿಂದ ಶುಕ್ರವಾರ ದೇವಿಗೆ ಬಿಳಿ ಬಣ್ಣದ ವಸ್ತುಗಳನ್ನು ಮಾತ್ರ ನೀಡಬೇಕು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಲಕ್ಷ್ಮಿದೇವಿಗೆ ಮಖಾನಾ(Prickly water lily) ಅರ್ಪಿಸಿ. ಮಖಾನಾವನ್ನು ಕಮಲದ ಹೂವಿನ ಬೀಜಗಳಿಂದ ತಯಾರಿಸಲಾಗುತ್ತದೆ ಎಂದು ನಂಬಲಾಗಿದೆ. ಇದಕ್ಕಾಗಿಯೇ ಇದನ್ನು ಫೂಲ್ ಮಖಾನಾ ಎಂದೂ ಕರೆಯುತ್ತಾರೆ. ಇವುಗಳನ್ನು ಅರ್ಪಿಸಿದರೆ ಲಕ್ಷ್ಮಿದೇವಿ ಸಂತೋಷಪಡುತ್ತಾಳೆ.

ಶಾಸ್ತ್ರಗಳ ಪ್ರಕಾರ ಬಿಳಿ ಬಣ್ಣದ ವಸ್ತುಗಳು ತಾಯಿ ಲಕ್ಷ್ಮಿಗೆ ಬಹಳ ಪ್ರಿಯವಾಗಿವೆ. ಶುಕ್ರವಾರದಂದು ಖೀರ್, ಬರ್ಫಿ, ಮಖಾನಾ ಕಿ ಖೀರ್ ಮುಂತಾದ ಹಾಲಿನಿಂದ ಮಾಡಿದ ಸಿಹಿತಿಂಡಿಗಳನ್ನು ದೇವಿಗೆ ಅರ್ಪಿಸಬಹುದು. ಹೀಗೆ ಮಾಡುವುದರಿಂದ ತಾಯಿ ಲಕ್ಷ್ಮಿಯು ತುಂಬಾ ಸಂತೋಷಪಡುತ್ತಾಳೆ ಮತ್ತು ಭಕ್ತರ ಮೇಲೆ ಸಾಕಷ್ಟು ಕೃಪೆಯ ಮಳೆ ಸುರಿಸುತ್ತಾಳೆ. ಇದಲ್ಲದೆ ಲಕ್ಷ್ಮಿದೇವಿಗೆ ಸಕ್ಕರೆ ಮಿಠಾಯಿಯನ್ನು ಸಹ ಅರ್ಪಿಸಬಹುದು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link