ಈ ಖ್ಯಾತ ಕ್ರಿಕೆಟಿಗನಿಗಾಗಿ ಸಿನಿ ಕರಿಯರ್ ಪಣಕ್ಕಿಟ್ಟಿದ್ರು ನಟಿ ಮಾಧುರಿ ದೀಕ್ಷಿತ್.. ಆದರೂ ಸಿಗಲಿಲ್ಲ ಪ್ರೀತಿ, ವಿಲನ್ ಆಗಿದ್ದು ಇವರೇ.!
ಬಾಲಿವುಡ್ ನ 'ಧಕ್ ಧಕ್ ಗರ್ಲ್' ಎಂದೇ ಫೇಮಸ್ ಆದ ಮಾಧುರಿ ದೀಕ್ಷಿತ್ ಇಂದಿಗೂ ಅಭಿಮಾನಿಗಳ ಹಾಟ್ ಫೆವರೇಟ್. ಬಾಲಿವುಡ್‌ನ ಟಾಪ್ ನಟಿಯರಲ್ಲಿ ಒಬ್ಬರು. ಮಾಧುರಿ ದೀಕ್ಷಿತ್ ನೃತ್ಯ ಮಾಡಿದರೆ ನವಿಲು ಕುಣಿದಂತೆ.
ಸಿನಿ ಕರಿಯರ್ ಉತ್ತುಂಗದಲ್ಲಿರುವ ಸಮಯದಕ್ಕೇ ಸ್ಟಾರ್ ಕ್ರಿಕೆಟಿಗರೊಬ್ಬರಿಗೆ ಮಾಧುರಿ ದೀಕ್ಷಿತ್ ಮೇಲೆ ಲವ್ ಆಯ್ತು ಎಂದು ಹೇಳಲಾಗುತ್ತಿದೆ. ಮಾಧುರಿ ದೀಕ್ಷಿತ್ ಫೋಟೋಶೂಟ್ ಸಮಯದಲ್ಲಿ ಪ್ರಸಿದ್ಧ ಕ್ರಿಕೆಟಿಗನನ್ನು ಭೇಟಿಯಾದರು. ಲವ್ ಆಟ್ ಫಸ್ಟ್ ಸೈಟ್ ಅಂತಾರಲ್ಲ ಹಾಗೆ ಆ ಆಲ್ರೌಂಡರ್ ಮಾಧುರಿಯ ಪ್ರೀತಿಯಲ್ಲಿ ಬಿದ್ದರು ಎನ್ನಲಾಗುತ್ತದೆ.
ಮಾಧುರಿ ದೀಕ್ಷಿತ್ ಪ್ರೀತಿಯಲ್ಲಿ ಬಿದ್ದ ಕ್ರಿಕೆಟರ್ ಅಜಯ್ ಜಡೇಜಾ. ಮಾಧುರಿ ದೀಕ್ಷಿತ್ ಮತ್ತು ಅಜಯ್ ಜಡೇಜಾ ಫೋಟೋಶೂಟ್ ಸಮಯದಲ್ಲಿ ಭೇಟಿಯಾದರು. ಆ ದಿನಗಳಲ್ಲಿ ಮಾಧುರಿ ಮತ್ತು ಅಜಯ್ ಅವರ ರೊಮ್ಯಾಂಟಿಕ್ ಫೋಟೋಗಳು ಕೂಡ ಸಾಕಷ್ಟು ಸುದ್ದಿ ಮಾಡಿದ್ದವು.
ಆ ಕಾಲದ ಮಾಧ್ಯಮ ವರದಿಗಳ ಪ್ರಕಾರ, ಅಜಯ್ ಜಡೇಜಾ ಸಿನಿಮಾದಲ್ಲಿ ನಟಿಸುವ ಮೂಲಕ ಅದೃಷ್ಟ ಪರೀಕ್ಷಗೆ ಇಳಿದಿದ್ದರಂತೆ. ಮಾಧುರಿ ತನಗೆ ತಿಳಿದಿರುವ ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಅವರನ್ನು ಶಿಫಾರಸು ಮಾಡಿದ್ದರಂತೆ ಎನ್ನಲಾಗುತ್ತದೆ. ಆದರೆ ಅಜಯ್ ಜಡೇಜಾ ಸಿನಿ ವೃತ್ತಿಜೀವನ ಶುರುವಾಗಲೇ ಇಲ್ಲ ಎನ್ನಲಾಗುತ್ತದೆ.
ಆ ದಿನಗಳಲ್ಲಿ ಮಾಧುರಿ ದೀಕ್ಷಿತ್ ಮತ್ತು ಅಜಯ್ ಜಡೇಜಾ ಅವರ ಮಧ್ಯೆ ಪ್ರೀತಿ ಅರಳಿತು. ಆದರೆ ಕುಟುಂಬದವರಿಂದಾಗಿ ಮಾಧುರಿ ದೀಕ್ಷಿತ್ ಮತ್ತು ಅಜಯ್ ಜಡೇಜಾ ಬ್ರೇಕಪ್ ಮಾಡಿಕೊಂಡರು ಎಂದು ಹೇಳಲಾಗುತ್ತದೆ.
ಭಾರತೀಯ ಕ್ರಿಕೆಟ್ ತಂಡದಲ್ಲಿದ್ದ ಅಜಯ್ ಜಡೇಜಾ ರಾಜಮನೆತನಕ್ಕೆ ಸೇರಿದವರಾಗಿದ್ದರು. ಮಾಧುರಿ ಸಾಮಾನ್ಯ ಕುಟುಂಬಕ್ಕೆ ಸೇರಿದವರು. ಸಾಮಾನ್ಯ ಹುಡುಗಿಯನ್ನು ತಮ್ಮ ರಾಜಮನೆತನಕ್ಕೆ ಒಪ್ಪಿಕೊಳ್ಳಲು ಇಷ್ಟವಿರದ ಕಾರಣವೇ ಇವರಿಬ್ಬರ ಪ್ರೇಮ ಸಂಬಂಧ ಮುರಿದುಬೀಳಲು ಕಾರಣ ಎಂದು ಹೇಳಲಾಗುತ್ತದೆ.