ಮಾಧುರಿ ದೀಕ್ಷಿತ್ ಕೂದಲಿಗೆ ಇದೇ ಎಣ್ಣೆ ಹಾಕೋದಂತೆ.. ಕಪ್ಪಾದ ಹೊಳೆಯುವ ಕೇಶರಾಶಿಯ ರಹಸ್ಯ ಇಲ್ಲಿದೆ..!
ಮಾಧುರಿ ದೀಕ್ಷಿತ್ ಅವರ ದಪ್ಪ ಮತ್ತು ರೇಷ್ಮೆಯಂತಹ ಕೂದಲಿನ ಸೌಂದರ್ಯವು ಜನರನ್ನು ಹುಚ್ಚರನ್ನಾಗಿ ಮಾಡುತ್ತದೆ. ಮಾಧುರಿ ದೀಕ್ಷಿತ್ ತಮ್ಮ ಫಿಟ್ನೆಸ್ ಮತ್ತು ಕೂದಲಿನ ಆರೈಕೆಗೆ ಹೆಚ್ಚು ಗಮನ ನೀಡುತ್ತಾರೆ.
ಮಾಧುರಿ ದೀಕ್ಷಿತ್ ಅವರ ಫಿಟ್ನೆಸ್ ಮತ್ತು ಕೂದಲಿನ ಆರೈಕೆಗೆ ಸಂಬಂಧಿಸಿದ ವಿಡಿಯೋಗಳನ್ನು ಆಗಾಗ ಹಂಚಿಕೊಳ್ಳುತ್ತಾರೆ. ನೀವು ಕೂಡ ಮಾಧುರಿ ದೀಕ್ಷಿತ್ ಅವರಂತೆ ನಿಮ್ಮ ಕೂದಲು ಹೊಳೆಯುವ, ರೇಷ್ಮೆಯಂತಹ ಕೂದಲನ್ನು ಹೊಂದ ಬಯಸಿದರೆ ಈ ದಿನಚರಿಯನ್ನು ಅನುಸರಿಸಿ.
ಮಾಧುರಿ ದೀಕ್ಷಿತ್ ಬಿಸಿಯಾದ ನೀರಿನಿಂದ ತಲೆ ಸ್ನಾನ ಮಾಡದಿರಲು ಸಲಹೆ ನೀಡುತ್ತಾರೆ. ಬಿಸಿ ನೀರಿನಿಂದ ಕೂದಲನ್ನು ತೊಳೆಯುವುದು ಮತ್ತು ಕೂದಲಿನ ಮೇಲೆ ಬಿಸಿ ಟವೆಲ್ ಅನ್ನು ಸುತ್ತಿಕೊಳ್ಳುವುದು ಒಳ್ಳೆಯದಲ್ಲ. ಬಿಸಿನೀರಿನ ಬದಲು ಉಗುರುಬೆಚ್ಚನೆಯ ನೀರಿನಿಂದ ತಲೆ ಸ್ನಾನ ಮಾಡುವುದು ಕೂದಲಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.
ಮಾಧುರಿ ದೀಕ್ಷಿತ್ ತಮ್ಮ ಕೂದಲಿಗೆ ಮನೆಯಲ್ಲಿ ತಯಾರಿಸಿದ ಎಣ್ಣೆಯನ್ನು ಬಳಸುತ್ತಾರೆ. ಕರಿಬೇವಿನ ಎಲೆಗಳು, ಮೆಂತ್ಯ ಕಾಳು ಮತ್ತು ಈರುಳ್ಳಿ ರಸವನ್ನು ತೆಂಗಿನ ಎಣ್ಣೆಯಲ್ಲಿ ಬೆರೆಸಿ, ಕುದಿಸಿ ಮನೆಯಲ್ಲಿ ಎಣ್ಣೆಯನ್ನು ತಯಾರಿಸುತ್ತಾರೆ. ಈ ಎಣ್ಣೆ ತಣ್ಣಗಾದಾಗ ಬಳಿಕ ಕೂದಲಿಗೆ ಹಚ್ಚುತ್ತಾರೆ. ಇದರಿಂದ ಕೂದಲಿಗೆ ಬೇರುಗಳಿಂದಲೇ ಪೋಷಣೆ ದೊರೆಯುತ್ತದೆ.
ನಟಿ ಮಾಧುರಿ ದೀಕ್ಷಿತ್ ಕೂದಲಿನ ಆರೋಗ್ಯ ಕಾಪಾಡಲು ಮನೆಯಲ್ಲಿ ತಯಾರಿಸಿದ ಹೇರ್ ಮಾಸ್ಕ್ ಅನ್ನು ಬಳಸುತ್ತಾರೆ. ಮೊಸರು, ಬಾಳೆಹಣ್ಣು ಮತ್ತು ಜೇನುತುಪ್ಪ ಸೇರಿಸಿ ಈ ಮಾಸ್ಕ್ ತಯಾರಿಸುತ್ತಾರೆ. ಇದು ಕೂದಲನ್ನು ನಯವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ.
ಸಾಕಷ್ಟು ನೀರು ಕುಡಿಯುವುದರಿಂದ ಅನೇಕ ಪ್ರಯೋಜನಗಳಿವೆ ಎಂದು ಮಾಧುರಿ ದೀಕ್ಷಿತ್ ಹೇಳುತ್ತಾರೆ. ಕೂದಲಿನ ಬಗ್ಗೆ ಸಂಪೂರ್ಣ ಕಾಳಜಿ ವಹಿಸುವುದರ ಜೊತೆಗೆ, ಪ್ರತಿದಿನ ಅಗತ್ಯವಿರುವಷ್ಟು ನೀರನ್ನು ಕುಡಿಯುತ್ತಾರೆ.