ಒಂದು ಕಾಲದಲ್ಲಿ ಆ್ಯಂಕರ್.. ಈಗ ಸ್ಟಾರ್‌ ಹೀರೋಯಿನ್..! ಕಿಚ್ಚ ಸುದೀಪ್‌ ಫ್ಯಾನ್ಸ್‌ಗಂತೂ ಈಕೆ ಫೇವರಿಟ್‌..

Fri, 18 Oct 2024-4:38 pm,

ಇಂಡಸ್ಟ್ರಿಯಲ್ಲಿ ಅನೇಕ ನಾಯಕಿಯರು ಸ್ಟಾರ್ ಗಳಾಗಿ ಮಿಂಚುತ್ತಿದ್ದಾರೆ. ಆದರೆ ಇಂಡಸ್ಟ್ರಿಯಲ್ಲಿರುವ ನಾಯಕಿಯರಲ್ಲಿ ಕಷ್ಟಪಟ್ಟು ಮೇಲೆ ಬಂದವರೂ ಇದ್ದಾರೆ. ಬಾಲ ಕಲಾವಿದರಾಗಿ ನಟಿಸಿ ನಂತರ ನಾಯಕಿಯರಾದವರು ಕಡಿಮೆ. ಹಾಗೆಯೇ ಇನ್ನೂ ಕೆಲವರು ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿ ನಂತರ ನಾಯಕಿಯರೂ ಇದ್ದಾರೆ.   

ಈ ಮೇಲೆ ಫೋಟೋದಲ್ಲಿರುವ ನಾಯಕಿ ಆಂಕರ್ ಆಗಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿ ನಂತರ ನಾಯಕಿಯಾಗಿ ಬದಲಾದರು. ಮುದ್ದಾದ ನಗು ಮತ್ತು ಮನಸೆಳೆಯುವ ಕಣ್ಣುಗಳಿಂದ ಹಲವಾರು ಅಭಿಮಾನಿಗಳನ್ನು ಗೆದ್ದಿದ್ದಾಳೆ..  

ತೆಲುಗು ಕಿರುತೆರೆಯಲ್ಲಿ ಅನಸೂಯಾ, ರಶ್ಮಿಯಂತಹ ಮುದ್ದಾದ ಹುಡುಗಿಯರು ಆ್ಯಂಕರಿಂಗ್‌ನಿಂದ ಬಂದು ನಾಯಕಿಯರಾಗಿ ಮಿಂಚುತ್ತಿದ್ದಾರೆ. ಹಾಗೆಯೇ ಮೇಲಿನ ಫೋಟೋದಲ್ಲಿರುವ ಸುಂದರಿ ಸಹ..   

ಈ ಮೇಲಿನ ಫೋಟೋದಲ್ಲಿರುವ ಚೆಲುವೆ ಆ್ಯಂಕರ್ ಆಗಿ ವೃತ್ತಿ ಜೀವನ ಆರಂಭಿಸಿ ನಂತರ ಹೀರೋಯಿನ್ ಆಗಿ ಈಗ ಒಂದರ ಹಿಂದೆ ಒಂದರಂತೆ ಅವಕಾಶಗಳನ್ನು ಪಡೆಯುತ್ತಿದ್ದಾರೆ. ಈಕೆ ಬೇರೆ ಯಾರೂ ಅಲ್ಲ, ಕಿಚ್ಚ ಸುದೀಪ್‌ ನಟನೆಯ ಕೋಟಿಗೋಬ್ಬ 3 ಸಿನಿಮಾದ ನಟಿ, ಮಡೋನಾ ಸೆಬಾಸ್ಟಿಯನ್.   

ಕನ್ನಡದಲ್ಲಿ ಕೋಟಿಗೋಬ್ಬ 3, ತೆಲುಗಿನಲ್ಲಿ ಪ್ರೇಮಂ ಮತ್ತು ಶ್ಯಾಮ್ ಸಿಂಘರಾಯ್ ಚಿತ್ರಗಳ ಮೂಲಕ ಪ್ರಭಾವ ಬೀರಿದ್ದಾರೆ. ವೃತ್ತಿಜೀವನದ ಆರಂಭದಲ್ಲಿ, ಮಡೋನಾ ಚಾನಲ್‌ವೊಂದರಲ್ಲಿ ಆಂಕರ್ ಆಗಿದ್ದರು.   

ಮಡೋನಾ ಸೆಬಾಸ್ಟಿಯನ್ ಆ್ಯಂಕರ್ ಆಗಿ ತಮ್ಮ ಸಿಹಿ ಮಾತುಗಳಿಂದ ಅನೇಕ ಅಭಿಮಾನಿಗಳನ್ನು ಗಳಿಸಿದ್ದರು.. ನಂತರ ಅವರಿಗೆ ನಾಯಕಿಯಾಗುವ ಅವಕಾಶಗಳು ಬಂದವು.  

ನಟಿ ಮಲಯಾಳಂ, ಕನ್ನಡ, ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ಮಡೋನಾ 2015 ರ ಮಲಯಾಳಂ ಚಿತ್ರ ಪ್ರೇಮಮ್‌ನಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.  

ಈ ಚೆಲುವೆ ತನ್ನ ಸೌಂದರ್ಯ ಮತ್ತು ನಟನೆಯಿಂದ ಮೊದಲ ಚಿತ್ರದಲ್ಲೇ ಪ್ರೇಕ್ಷಕರಿಗೆ ಹತ್ತಿರವಾದರು.. ಪ್ರೇಮಂ ಚಿತ್ರದಲ್ಲಿ ತುಂಬಾ ಮುದ್ದಾಗಿ ನಟಿಸಿದ್ದರು. ಪ್ರೇಮಂ ಸಿನಿಮಾವನ್ನು ನಾಗ ಚೈತನ್ಯ ತೆಲುಗಿಗೆ ರಿಮೇಕ್ ಮಾಡುತ್ತಿರುವುದು ಗೊತ್ತೇ ಇದೆ. ಈ ಚಿತ್ರದಲ್ಲಿ ಮಡೋನಾ ಕೂಡ ನಟಿಸಿದ್ದಾರೆ.   

ಅದರ ನಂತರ ಅವರು ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ ತೆಲುಗು ಚಲನಚಿತ್ರ ಶ್ಯಾಮ್ ಸಿಂಘರಾಯ್‌ನಲ್ಲಿ ತಮ್ಮ ಅಭಿನಯದಿಂದ ಮೆಚ್ಚುಗೆ ಗಳಿಸಿದರು.. ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿರುವ ಮಡೋನಾ, ಸಧ್ಯ ಹಂಚಿಕೊಂಡಿರುವ ಫೋಟೋಸ್‌ ಸಖತ್‌ ಹೈಪ್‌ ಕ್ರಿಯೇಟ್‌ ಮಾಡುತ್ತಿವೆ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link