Bharata Hunnime 2024: ಭಾರತ ಹುಣ್ಣಿಮೆಯ ದಿನ ಅಪರೂಪದ ಕಾಕತಾಳೀಯ, ಈ ರಾಶಿಗಳ ಜನರ ಮೇಲಿರಲಿದೆ ತಾಯಿ ಲಕ್ಷ್ಮಿಯ ವಿಶೇಷ ಕೃಪೆ!
ಫೆಬ್ರುವರಿ 24, 2024 ರಂದು ಆಚರಿಸಲಾಗುವ ಹುಣ್ಣಿಮೆ ತುಂಬಾ ವಿಶೇಷವಾಗಿದೆ. ಪುರಾತನ ರೈತ ಪಂಚಾಂಗದ ಪ್ರಕಾರ ಈ ತಿಂಗಳ ಹುಣ್ಣಿಮೆಯನ್ನು 'ಸ್ನೋ ಮೂನ್' ಎಂದು ಕರೆಯಲಾಗುತ್ತದೆ. ಏಕೆಂದರೆ ಈ ಅವಧಿಯಲ್ಲಿ ಉತ್ತರ ಗೋಲಾರ್ಧದಲ್ಲಿ ಸಾಮಾನ್ಯವಾಗಿ ಅತಿ ಹೆಚ್ಚು ಹಿಮವೃಷ್ಟಿಯಾಗುತ್ತದೆ. ಇದಲ್ಲದೆ ಈ ತಿಂಗಳ ಹುಣ್ಣಿಮೆಯನ್ನು 'ಮೈಕ್ರೋಮೂನ್' ಎಂದೂ ಕೂಡ ಕರೆಯಲಾಗುತ್ತದೆ. ಏಕೆಂದರೆ ಇದು ವರ್ಷದ ಆತಂತ ಸಣ್ಣ ಅವಧಿಯ ಹುಣ್ಣಿಮೆಯಾಗಿರುತ್ತದೆ. ದಕ್ಷಿಣ ಭಾರತದಲ್ಲಿ ಇದನ್ನು ಭರತ ಹುಣ್ಣಿಮೆಯ ರೂಪದಲ್ಲಿ ಆಚರಿಸಲಾಗುತ್ತದೆ. ಇದೆ ಭರತನಿಂದ ನಮ್ಮ ದೇಶಕ್ಕೆ ಭಾರತ ಎಂಬ ಹೆಸರು ಬಂತು ಎಂಬ ಪ್ರಚಿತಿ ಇದೆ.
ವೃಷಭ ರಾಶಿ: ವೃಷಭ ರಾಶಿಯ ಜನರ ಮೇಲೆ ಈ ಹುಣ್ಣಿಮೆ ಅತ್ಯಂತ ಶುಭ ಫಲಗಳನ್ನು ನೀಡಲಿದೆ. ರಚನಾತ್ಮಕ ಕೆಲಸಗಳತ್ತ ನಿಮ್ಮ ಆಸಕ್ತಿ ಹೆಚ್ಚಾಗಲಿದೆ. ನಿಮ್ಮ ಬುದ್ಧಿ ಮತ್ತು ಯೋಚನಾ ಸಾಮರ್ಥ್ಯದಿಂದ ನೀವು ದೊಡ್ಡ ಕನಸನ್ನು ಸಾಕಾರಗೊಳಿಸುವಿರಿ. ತಾಯಿ ಲಕ್ಷ್ಮಿ ಕೃಪೆಯಿಂದ ನಿಮಗೆ ಎಲ್ಲ ಕ್ಷೇತ್ರಗಳಲ್ಲಿ ಯಶಸ್ಸು ಲಭಿಸಲಿದೆ. ಸಂಬಂಧಗಳಲ್ಲಿ ಉದ್ಭವಿಸಿದ್ದ ವೈಮನಸ್ಸುಗಳು ಅಂತ್ಯವಾಗಲಿವೆ. ಕುಟುಂಬ ಸದಸ್ಯರ ಜೊತೆಗೆ ಉತ್ತಮ ಕಾಲ ಕಳೆಯುವಿರಿ. ಬಿಸ್ನೆಸ್ ಮಾಡುವವರ ಮೇಲೆ ತಾಯಿ ಲಕ್ಷ್ಮಿಯ ವಿಶೇಷ ಕೃಪೆ ಇರಲಿದೆ. ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ನಿಮಗೆ ಲಭಿಸಲಿದೆ. ಇದಲ್ಲದೆ ಸಾಕಷ್ಟು ಹಣಗಳಿಕೆಯ ಅವಕಾಶ ನಿಮಗೆ ಸಿಗಲಿದೆ. ಚಂದ್ರನ ಪ್ರಭಾವದಿಂದ ವಿಶೇಷ ವ್ಯಕ್ತಿಯತ್ತ ನೀವು ಆಕರ್ಷಿತರಾಗುವಿರಿ.
ಮಕರ ರಾಶಿ: ಈ ಹುಣ್ಣಿಮೆ ಮಕರ ರಾಶಿಯ ಜಾತಕದವರಿಗೆ ಒಂದು ವರದಾನ ಎಂದರೆ ತಪ್ಪಾಗಲಾರದು. ದೀರ್ಘಾವಧಿಯಿಂದ ನಡೆದುಕೊಂಡು ಬಂದ ಕೆಲಸಗಳು ಪೂರ್ಣಗೊಳ್ಳಲಿವೆ. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರಲಿವೆ. ಲವ್ ಲೈಫ್ ಕೂಡ ಉತ್ತಮವಾಗಿರಲಿದೆ. ಅರ್ಧಕ್ಕೆ ನಿಂತ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿವೆ. ಉನ್ನತ ಶಿಕ್ಷಣ ಅಥವಾ ಉನ್ನತ ಶೈಕ್ಷಣಿಕ ಸಂಸ್ಥೆಯಲ್ಲಿ ಶಿಕ್ಷಣ ಪಡೆಯುವ ನಿಮ್ಮ ಆಸೆ ಈಡೇರಲಿದೆ. ಶಿಕ್ಷಣಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳಲ್ಲಿ ನಿಮಗೆ ಲಾಭ ಸಿಗಲಿದೆ. ಇದಲ್ಲದೆ ಅತಿ ಕಡಿಮೆ ಪ್ರಯಾಸದಿಂದ ಅಧಿಕ ಯಶಸ್ಸು ಲಭಿಸಲಿದೆ. ದೊಡ್ಡ ಯಶಸ್ಸು ಸಿಗುವ ಯೋಗ ರಚನೆಯಾಗುತ್ತಿದೆ.
ಕರ್ಕ ರಾಶಿ: ನಿಮ್ಮ ರಾಶಿಗೆ ಸ್ವಯಂ ಚಂದ್ರನೇ ರಾಶ್ಯಾಧಿಪನಾಗಿದ್ದಾನೆ. ಹೀಗಿರುವಾಗ ಭಾರತ ಹುಣ್ಣಿಮೆಯ ವಿಶೇಷ ಲಾಭ ನಿಮಗೆ ಸಿಗಲಿದೆ. ದೀರ್ಘಾವಧಿಯಿಂದ ನೆನೆಗುದಿಗೆ ಬಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ನೀವು ನಿಮ್ಮ ಜೀವನದ ಅಸಲಿ ಉದ್ದೇಶವನ್ನು ತಿಳಿದುಕೊಳ್ಳುವಲ್ಲಿ ಯಶಸ್ವಿಯಾಗುವಿರಿ ಮತ್ತು ಅದರಲ್ಲಿ ಯಶಸ್ವಿಯಾಗುವಿರಿ. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಲಾಭ ಸಿಗಲಿದೆ. ಗುರು, ತಂದೆಯ ಸಂಪೂರ್ಣ ಬೆಂಬಲ ನಿಮಗೆ ಸಿಗಲಿದ್ದು, ಅದರಲ್ಲಿ ನೀವು ನಿಮ್ಮ ಪರಿಶ್ರಮದ ಬಲದಿಂದ ಎಲ್ಲ ಕ್ಷೇತ್ರಗಳಲ್ಲಿ ಯಶಸ್ಸನ್ನು ಸಾಧಿಸುವಿರಿ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)