ಶತಮಾನದ ಬಳಿಕ 3 ರಾಶಿಗಳ ಗೋಚರ ಜಾತಕದಲ್ಲಿ 4 ಮಹಾ ರಾಜಯೋಗಗಳು, ಸಿಗಲಿದೆ ಸ್ಥಾನಮಾನ ಮತ್ತು ಅಪಾರ ಧನ-ಸಂಪತ್ತು!
Maha Rajayogas: ವೈದಿಕ ಜೋತಿಷ್ಯ ಪಂಚಾಂಗದ ಪ್ರಕಾರ ಸರಿ ಸುಮಾರು 100 ವರ್ಷಗಳ ಬಳಿಕ ಮೂರು ರಾಶಿಗಳ ಗೋಚರ ಜಾತಕದಲ್ಲಿ 4 ಮಹಾ ರಾಜಯೋಗಗಳು ರೂಪುಗೊಳ್ಳುತ್ತಿವೆ. ಇದರಿಂದ ಆ ಮಾರೂ ರಾಶಿಗಳ ಜನರಿಗೆ ಭಾರಿ ಧನಲಾಭ ಉಂಟಾಗಲಿದೆ. ಭಾಗ್ಯೋದಯದಿಂದ ಅವರ ತಿಜೋರಿ ಧನಸಂಪತ್ತಿನಿಂದ ತುಂಬಿ ತುಳುಕಲಿದೆ.
ಕುಂಭ ರಾಶಿ: ನಿರ್ಮಾಣಗೊಳ್ಳುತ್ತಿರುವ ಈ ನಾಲ್ಕು ರಾಜಯೋಗಗಳು ಕುಂಭ ರಾಶಿಯ ಜಾತಕದವರಿಗೆ ಅಪಾರ ಲಾಭದಾಯಕ ಸಿದ್ಧ ಸಾಬೀತಾಗಲಿದೆ. ಬುದ್ಧಾದಿತ್ಯ ರಾಜ್ಯಯೋಗ ನಿಮ್ಮ ಜಾತಕದ ಶಷ್ಟಮ ಭಾವದಲ್ಲಿ ರೂಪುಗೊಳ್ಳುತ್ತಿದೆ. ಇದರ ಜೊತೆಗೆ ನಿಮ್ಮ ಗೋಚರ ಜಾತಕದಲ್ಲಿ ಶಶ, ಸಮಸಪ್ತಕ ಹಾಗೂ ಕೇಂದ್ರ ತ್ರಿಕೋನ ರಾಜಯೋಗ ರೂಪುಗೂಳ್ಳುತ್ತಲಿವೆ. ಹೀಗಾಗಿ ಕೋರ್ಟ್-ಕಚೇರಿ ವ್ಯವಹಾರಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಇದರ ಜೊತೆಗೆ ಆಕಸ್ಮಿಕ ಧನಲಾಭ ಯೋಗ ಕೂಡ ನಿರ್ಮಾಣಗೊಳ್ಳುತ್ತಿದೆ. ಕೌಟುಂಬಿಕ ವ್ಯಾಪಾರದಲ್ಲಿರುವವರಿಗೆ ಈ ಸಮಯ ಅದ್ಭುತವಾಗಿರಲಿದೆ. ಬಿಸ್ನೆಸ್ ಗೆ ಸಂಬಂಧಿಸಿದ ನಿರ್ಣಯಗಳಲ್ಲಿ ನಿಮಗೆ ಲಾಭ ಉಂಟಾಗಲಿದೆ.
ವೃಷಭ ರಾಶಿ: ಪ್ರಸ್ತುತ ನಿರ್ಮಾಣಗೊಳ್ಳುತ್ತಿರುವ ಈ ರಾಜಯೋಗಗಳು ನಿಮ್ಮ ಪಾಲಿಗೆ ಅದ್ಭುತ ಸಾಬೀತಾಗಲಿವೆ. ಏಕೆಂದರೆ ಸೂರ್ಯ ದೇವ ನಿಮ್ಮ ಗೋಚರ ಜಾತಕದ ಆಸ್ತಿ ಹಾಗೂ ಸುಖ-ಸೌಕರ್ಯ ಭಾವಕ್ಕೆ ಅಧಿಪತಿಯಾಗಿದ್ದಾನೆ. ಇನ್ನೊಂದೆಡೆ ತೃತೀಯ ಭಾವದಲ್ಲಿ ಬುದ್ಧಾದಿತ್ಯ ರಾಜಯೋಗ ನಿರ್ಮಾಣಗೊಳ್ಳುತ್ತಿದೆ. ಇದಲ್ಲದೆ ಶಶ ಮಹಾಪುರುಷ ರಾಜಯೋಗ, ಕೇಂದ್ರ ತ್ರಿಕೋನ ರಾಜಯೋಗ ಹಾಗೂ ಶುಕ್ರ-ಮಂಗಳ-ಶನಿಯ ಸಮಸಪ್ತಕ ರಾಜಯೋಗ ಕೂಡ ರೂಪುಗೊಳ್ಳುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ವಾಹನ-ಆಸ್ತಿಪಾಸ್ತಿ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ನೌಕರವರ್ಗದ ಜನರಿಗೆ ಈ ಅವಧಿ ಅದೃಷ್ಟದಾಯಕ ಸಾಬೀತಾಗಲಿದೆ. ಏನೆಂದರೆ, ಈ ಸಮಯದಲ್ಲಿ ನೀವು ಅತಿ ಕಡಿಮೆ ಪರಿಶ್ರಮದ ಮೂಲಕ ನಿಮ್ಮ ಆದಾಯವನ್ನು ಹೆಚ್ಚಿಸುವಲ್ಲಿ ಯಶಸ್ಸನ್ನು ಸಾಧಿಸುವಿರಿ. ನೌಕರವರ್ಗದ ಜನರಿಗೆ ಇಂಕ್ರಿಮೆಂಟ್-ಬಡ್ತಿಯ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತಿವೆ.
ವೃಶ್ಚಿಕ ರಾಶಿ: ಪ್ರಸ್ತುತ ನಿರ್ಮಾಣಗೊಳ್ಳುತ್ತಿರುವ ಈ ನಾಲ್ಕು ರಾಜಯೋಗಗಳು ನಿಮ್ಮ ವೃತ್ತಿಜೀವನ ಹಾಗೂ ವ್ಯಾಪಾರದ ದೃಷ್ಟಿಯಿಂದ ಅತ್ಯದ್ಭುತವಾಗಿವೆ. ಏಕೆಂದರೆ, ನಿಮ್ಮ ಗೋಚರ ಜಾತಕದ ಭಾಗ್ಯ ಸ್ಥಾನದಲ್ಲಿ ಬುದ್ಧಾದಿತ್ಯ ರಾಜಯೋಗ ನಿರ್ಮಾಣಗೊಳ್ಳುತ್ತಿದೆ. ಈಗಾಗಿ ಈ ಅವಧಿಯಲ್ಲಿ ನಿಮ್ಮ ಭಾಗ್ಯೋದಯ ಪಕ್ಕಾ ಎನ್ನಲಾಗುತ್ತಿದೆ. ಇದರ ಜೊತೆಗೆ ನೀವು ಈ ಹಿಂದೆ ಮಾಡಿದ ಪ್ರಯತ್ನಗಳಿಂದಲೂ ಕೂಡ ನಿಮಗೆ ಲಾಭದ ಎಲ್ಲಾ ಸಾಧ್ಯತೆಗಳಿವೆ. ಈ ಅವಧಿಯಲ್ಲಿ ನಿಮ್ಮ ಸಾಹಸ ಹೆಚ್ಚಾಗಲಿದೆ. ಜೊತೆಗೆ ಯಾತ್ರೆ ಸಂಭವಿಸುವ ಸಾಧ್ಯತೆ ಇದ್ದು, ನಿಮ್ಮ ಮಾತಿನಲ್ಲಿ ಸಾಕಷ್ಟು ಪ್ರಭಾವ ಇರಲಿದೆ. ಇದರಿಂದ ನೀವು ಇತರರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗುವಿರಿ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)