Mahadhan Rajayoga: ಈ 3 ರಾಶಿಯವರಿಗೆ ಮಹಾಧನ ರಾಜಯೋಗ.. ಸಂಪತ್ತಿನ ಮಳೆ ಸುರಿಸಲಿದ್ದಾನೆ ಶುಕ್ರ!
ಸಂಪತ್ತು ಮತ್ತು ಗೌರವವನ್ನು ನೀಡುವ ಶುಕ್ರನು ತನ್ನದೇ ಆದ ರಾಶಿಯನ್ನು ಪ್ರವೇಶಿಸಿದ್ದಾನೆ. ಈ ಮೂಲಕ ಮಹಾಧನ ರಾಜಯೋಗ ಸೃಷ್ಟಿಯಾಗಿದೆ.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಮಹಾಧನ ರಾಜಯೋಗ ಬಹಳಷ್ಟು ಲಾಭವನ್ನು ನೀಡುತ್ತದೆ. ಅನಿರೀಕ್ಷಿತ ಧನಾಗಮನವಾಗುವುದು. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರು ಯಶಸ್ವಿಯಾಗುತ್ತಾರೆ. ಎಲ್ಲದರಲ್ಲೂ ಅದೃಷ್ಟ ನಿಮ್ಮ ಕೈ ಹಿಡಿಯುತ್ತದೆ. ಸಂಗೀತ, ಕಲೆ, ಹೋಟೆಲ್ ಇತ್ಯಾದಿ ವ್ಯಾಪಾರಿಗಳಿಗೆ ಈ ಸಮಯ ಅನುಕೂಲಕರವಾಗಿದೆ.
ವೃಷಭ ರಾಶಿ: ಈ ರಾಶಿಯವರಿಗೆ ಮಹಾಧನ ರಾಜಯೋಗ ಅತ್ಯಂತ ಶುಭ ಫಲ ನೀಡಲಿದೆ. ಈ ರಾಶಿಯಲ್ಲಿ ಮಹಾಲಕ್ಷ್ಮಿ ಯೋಗ ಉಂಟಾಗುತ್ತದೆ. ಇದರಿಂದಾಗಿ ವೃಷಭ ರಾಶಿಯವರು ಆರ್ಥಿಕವಾಗಿ ಸದೃಢರಾಗುತ್ತಾರೆ. ಆದಾಯ ದ್ವಿಗುಣ, ಉದ್ಯೋದಲ್ಲಿ ಬಡ್ತಿ ದೊರೆಯುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ ಸಿಗುವುದು. ಹೂಡಿಕೆ ಮಾಡಲು ಇದು ಉತ್ತಮ ಸಮಯ. ವ್ಯಾಪಾರಿಗಳಿಗೆ ಭಾರೀ ಲಾಭವಾಗಲಿದೆ.
ಮಕರ ರಾಶಿ: ಮಹಾಧನ ಯೋಗದಿಂದ ತುಂಬಾ ಅನುಕೂಲಕರ ಕಾರ್ಯಗಳು ನಡೆಯಲಿವೆ. ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ. ಆದಾಯ ದ್ವಿಗುಣವಾಗಲಿದೆ. ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ. ದಿಢೀರ್ ಧನಲಾಭ ಪಡೆಯುವಿರಿ. ವ್ಯಾಪಾರಿಗಳು ದೊಡ್ಡ ಆರ್ಡರ್ ಪಡೆಯುತ್ತಾರೆ. ಅವಿವಾಹಿತರಿಗೆ ಮದುವೆ ನಿಶ್ಚಯವಾಗುವ ಸಂಭವವಿದೆ.