ದೀಪಾವಳಿ ದಿನವೇ ಮಹಾಲಕ್ಷ್ಮಿ ಪರ್ವ ಶುರು: 2024ರಲ್ಲಿ ಈ 5 ರಾಶಿಯ ಜನರಿಗೆ ಲಕ್ಷಾಧಿಪತಿ ಯೋಗ-ಸಂಪತ್ತಿನ ಜೊತೆ ಸುಂದರ ಜೀವನ ಕರುಣಿಸುವಳು ಸಿರಿದೇವಿ

Fri, 10 Nov 2023-7:08 pm,

ಜ್ಯೋತಿಷ್ಯ ಶಾಸ್ತ್ರಜ್ಞರ ಪ್ರಕಾರ ದೀಪಾವಳಿಯ ನಂತರ ಗ್ರಹಗಳ ಅತ್ಯಂತ ಮಂಗಳಕರ ಮತ್ತು ಅಪರೂಪದ ಸಂಯೋಜನೆ ಇರುತ್ತದೆ. ಇದಲ್ಲದೇ ಈ ವರ್ಷ ದೀಪಾವಳಿಗೂ ಮುನ್ನವೇ ಶನಿದೇವನು ಕುಂಭ ರಾಶಿಯಲ್ಲಿ, ರಾಹು ಗ್ರಹವು ಮೀನ ರಾಶಿಯಲ್ಲಿ, ಕೇತುವು ಕನ್ಯಾರಾಶಿಯಲ್ಲಿ, ಗುರುವು ವೃಷಭ ರಾಶಿಯಲ್ಲಿ ಸಂಚರಿಸಲಿವೆ.

ಗ್ರಹಗಳ ಈ ಅಪರೂಪದ ಮತ್ತು ಮಂಗಳಕರ ಸ್ಥಾನ ಬದಲಾವಣೆಯು 2024ರಲ್ಲೂ 5 ರಾಶಿಯ ಜನರಿಗೆ ಶುಭವನ್ನುಂಟು ಮಾಡಲಿದೆ. ಅಂದಹಾಗೆ 2024 ರಲ್ಲಿ ಅದೃಷ್ಟ ಮತ್ತು ಆರ್ಥಿಕ ಲಾಭವನ್ನು ಪಡೆಯಲಿರುವ 5 ರಾಶಿಗಳ ಬಗ್ಗೆ ತಿಳಿದುಕೊಳ್ಳೋಣ.

ಮಿಥುನ ರಾಶಿ: ಮಹಾಲಕ್ಷ್ಮಿ ವರ್ಷ 2024 ದೀಪಾವಳಿಯಿಂದ ಪ್ರಾರಂಭವಾಗುತ್ತದೆ. ಇದು ಮಿಥುನ ರಾಶಿಯವರಿಗೆ ಬಹಳಷ್ಟು ಮಂಗಳವನ್ನುಂಟು ಮಾಡಲಿದೆ. 2024 ರಲ್ಲಿ ಆದಾಯದ ಮೂಲಗಳು ಅಭಿವೃದ್ಧಿಗೊಳ್ಳುತ್ತವೆ. ವ್ಯಾಪಾರ ಮಾಡುವವರಿಗೆ ಮಹಾಲಕ್ಷ್ಮಿ ವರ್ಷ 2024 ವರದಾನವೇ ಆಗಲಿದೆ. ವ್ಯವಹಾರದಲ್ಲಿನ ಹಣಕಾಸಿನ ಹೂಡಿಕೆಯು 2024 ರಲ್ಲಿ ಉತ್ತಮ ಆದಾಯವನ್ನು ನೀಡುತ್ತದೆ.

ಸಿಂಹ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಹಾಲಕ್ಷ್ಮಿ ವರ್ಷ 2024, ಸಿಂಹ ರಾಶಿಯ ಜನರಿಗೆ ಮಂಗಳಕರ ಫಲಿತಾಂಶಗಳನ್ನು ನೀಡುತ್ತದೆ. ಈ ಅವಧಿಯಲ್ಲಿ ರೂಪುಗೊಂಡ ಗ್ರಹಗಳ ಅದ್ಭುತ ಸಂಯೋಜನೆಯು ನಿಮ್ಮ ವ್ಯಕ್ತಿತ್ವವನ್ನು ಸುಧಾರಿಸುತ್ತದೆ. ಉದ್ಯೋಗದಲ್ಲಿ ಬಡ್ತಿ ಮತ್ತು ಪ್ರಗತಿ ಇರಲಿದೆ.  

ಕನ್ಯಾ ರಾಶಿ: ಮಹಾಲಕ್ಷ್ಮಿ ವರ್ಷ 2024 ಕನ್ಯಾ ರಾಶಿಯವರಿಗೆ ಆರ್ಥಿಕ ದೃಷ್ಟಿಯಿಂದ ತುಂಬಾ ಮಂಗಳಕರವಾಗಿರುತ್ತದೆ. ದೀಪಾವಳಿಯಿಂದ 2024ರ ವರೆಗೆ ರೂಪುಗೊಂಡ ಗ್ರಹಗಳ ಮಂಗಳಕರ ಸಂಯೋಜನೆಯಿಂದ ನೀವು ಲಾಭವನ್ನು ಪಡೆಯುತ್ತೀರಿ. ವ್ಯಾಪಾರದಲ್ಲಿ ಸಾಕಷ್ಟು ಪ್ರಗತಿ ಕಾಣಲಿದೆ. ಪರಿಶ್ರಮಕ್ಕೆ ತಕ್ಕ ಫಲ ದೊರೆಯಲಿದೆ.

ವೃಶ್ಚಿಕ ರಾಶಿ: ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಮಹಾಲಕ್ಷ್ಮಿ ವರ್ಷ 2024 ವೃಶ್ಚಿಕ ರಾಶಿಯವರಿಗೆ ತುಂಬಾ ಅನುಕೂಲಕರವಾಗಿದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಮಹತ್ತರವಾದ ಪ್ರಗತಿ ಕಂಡುಬರುತ್ತದೆ. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ.

ಮಕರ ರಾಶಿ: ಮಹಾಲಕ್ಷ್ಮಿ ವರ್ಷ 2024 ಕೂಡ ಮಕರ ರಾಶಿಯವರಿಗೆ ಮಂಗಳಕರ ಎಂದು ಹೇಳಲಾಗುತ್ತಿದೆ. ಈ ರಾಶಿಯವರು ಶನಿ ದೇವರ ವಿಶೇಷ ಅನುಗ್ರಹವನ್ನು ಪಡೆಯುತ್ತಾರೆ. ಯಾವುದೇ ಹಣಕಾಸಿನ ಸಮಸ್ಯೆಯಿಂದ ಮುಕ್ತಿ ಪಡೆಯಲಿದ್ದೀರಿ. ಸಂಗಾತಿಯಿಂದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ.

(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ) 

ZEENEWS TRENDING STORIES

By continuing to use the site, you agree to the use of cookies. You can find out more by Tapping this link