Mahalakshmi Yog 2024: ಮಕರ ರಾಶಿಯಲ್ಲಿ ಪವರ್ಫುಲ್ ಮಹಾಲಕ್ಷ್ಮೀ ಯೋಗ ರಚನೆ, ಈ ಜನರಿಗೆ ಅಪಾರ ಧನ-ಸಂಪತ್ತು ಪ್ರಾಪ್ತಿ!
ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ, ಮಂಗಳ ಹಾಗೂ ಚಂದ್ರರ ಮೈತ್ರಿಯಿಂದ ಅಪಾರ ಧನ-ಸಂಪತ್ತು ಪ್ರಾಪ್ತಿಯಾಗುತ್ತದೆ. ಇದಲ್ಲದೆ ಜಾತಕದವರಿಗೆ ಅಪಾರ ಸುಖ ಸಂಪತ್ತು-ವೈಭವ ಅನುಭವಿಸಲು ಸಿಗಲಿದೆ. ಇದಲ್ಲದೆ ರಾಜಕೀಯ ಮುಖಂಡರು, ವಕೀಲ, ವೈದ್ಯ ಹಾಗೂ ಸರ್ಕಾರಿ ನೌಕರರಿಗೆ ಸಾಕಷ್ಟು ಪ್ರಸಿದ್ಧಿ ಸಿಗಲಿದೆ.
ಮೇಷ ರಾಶಿ: ನಿಮ್ಮ ಜಾತಕದ ದಶಮ ಭಾವದಲ್ಲಿ ರಚನೆಯಾಗುತ್ತಿದೆ. ಹೀಗಿರುವಾಗ ಮೇಷ ರಾಶಿಯ ಜಾತಕದವರಿಗೆ ಅಪಾರ ಯಶಸ್ಸು ಪ್ರಾಪ್ತಿಯಾಗಲಿದೆ. ಸಾಕಷ್ಟು ಸಮೃದ್ಧಿ ಹೆಚ್ಚಾಗಲಿದೆ. ಇದಲ್ಲದೆ ಆದಾಯದಲ್ಲಿ ಅಪಾರ ಹೆಚ್ಚಳ ಸಂಭವಿಸಲಿದೆ. ವೃತ್ತಿ ಜೀವನದಲ್ಲಿ ನೀವು ಪಟ್ಟ ಪರಿಶ್ರಮಕ್ಕೆ ತಕ್ಕ ಫಲ ಪ್ರಾಪ್ತಿಯಾಗಲಿದೆ. ಇದಲ್ಲದೆ ಇದಲ್ಲದೆ ನಿಮಗೆ ಬೋನಸ್ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಮಂಗಳನ ಕಾರಣ ನಿಮ್ಮಲ್ಲಿ ನೇತೃತ್ವ ಸಾಮರ್ಥ್ಯ ಹೆಚ್ಚಾಗಲಿದೆ. ಆರ್ಥಿಕ ಸ್ಥಿತಿ ಬಲವಾಗಲಿದೆ ಹಾಗೂ ಸಾಕಷ್ಟು ಹಣ ಗಳಿಕೆ ಮಾಡುವಲ್ಲಿ ನೀವು ಯಶಸ್ವಿಯಾಗುವಿರಿ. ವೈವಾಹಿಕ ಜೀವನದಲ್ಲಿ ಖುಷಿಗಳ ವಾತಾವರಣ ಇರಲಿದೆ.
ವೃಶ್ಚಿಕ ರಾಶಿ: ನಿಮ್ಮ ಜಾತಕದ ತೃತೀಯ ಭಾವದಲ್ಲಿ ಮಹಾಲಕ್ಷ್ಮೀ ರಾಜಯೋಗ ರಚನೆಯಾಗುತ್ತಿದೆ. ಇದರಿಂದ ನಿಮಗೆ ವಿಶೇಷ ಲಾಭ ಸಿಗಲಿದೆ. ದೀರ್ಘಾವಧಿಯಿಂದ ನಿಂತುಹೋದ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿವೆ. ನೌಕರಿ ಮಾಡುವ ಜನರಿಗೆ ಅವರ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಆದರೆ ಯಾವುದೇ ಕೆಲಸಕ್ಕೆ ಸಂಬಂಧಿಸಿದಂತೆ ತರಾತುರಿ ಬೇಡ. ಕೆಲಸ ಹಾಳಾಗಲಿದೆ. ಇದಲ್ಲದೆ ನಿಮ್ಮ ಆರ್ಥಿಕ ಸ್ಥಿತಿ ಕೂಡ ಉತ್ತಮವಾಗಿರಲಿದ್ದು, ಅಪಾರ ಹಣ ಗಳಿಸುವಲ್ಲಿ ಯಶಸ್ವಿಯಾಗುವಿರಿ. ಇದಲ್ಲದೆ ದೊಡ್ಡ ಹೂಡಿಕೆ ಮಾಡುವುದರಿಂದ ಅಪಾರ ಲಾಭ ಸಿಗಲಿದೆ. ಕುಟುಂಬ ಸದಸ್ಯರ ಜೊತೆಗೆ ಉತ್ತಮ ಕಾಲವನ್ನು ಕಳೆಯುವಿರಿ.
ಮಕರ ರಾಶಿ: ನಿಮ್ಮ ಜಾತಕದಲ್ಲಿಯೇ ಈ ಮಹಾಲಕ್ಷ್ಮಿ ಯೋಗ ರಚನೆಯಾಗುತ್ತಿದೆ. ಹೀಗಿರುವಾಗ ನಿಮ್ಮ ಜಾತಕದಲ್ಲಿ ಸುಖ-ಸೌಕರ್ಯ ಹಾಗೂ ವಿಲಾಸಿತನದಲ್ಲಿ ವೃದ್ಧಿಯಾಗಲಿದೆ. ಇದರ ಜೊತೆಗೆ ಕುಟುಂಬ ಸದಸ್ಯರ ಜೊತೆಗೆ ಉತ್ತಮ ಕಾಲ ಕಳೆಯಲಿದೆ. ವೃತ್ತಿ ಜೀವನದ ಕುರಿತು ಹೇಳುವುದಾದರೆ, ಸಹೋದ್ಯೋಗಿಗಳ ಹಾಗೂ ಹಿರಿಯರ ಬೆಂಬಲ ನಿಮಗೆ ಸಿಗಲಿದೆ. ಅತಿ ಹೆಚ್ಚು ಕ್ಷೇತ್ರಗಳಲ್ಲಿ ಯಶಸ್ಸು ನಿಮಗೆ ಸಿಗಲಿದೆ. ವೃತ್ತಿ ಜೀವನದಲ್ಲಿ ನೀವು ನಿಮ್ಮೆಲ್ಲಾ ಗುರಿಗಳನ್ನು ತಲುಪುವಲ್ಲಿ ಯಶಸ್ವಿಯಾಗುವಿರಿ. ಇದರಿಂದ ಎಲ್ಲಾ ರಂಗಗಳಲ್ಲಿಯೂ ಪ್ರಗತಿಯಾಗಲಿದೆ ಮತ್ತು ಆರೋಗ್ಯ ಉತ್ತಮವಾಗಿರಲಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)