ನವೆಂಬರ್ 15 ಮತ್ತು 20 ಸಾರ್ವಜನಿಕ ರಜೆ !ಎಲ್ಲಾ ಶಾಲಾ, ಕಾಲೇಜು, ಕಚೇರಿಗಳಿಗೆ ಕಡ್ಡಾಯ ರಜೆ ಘೋಷಿಸಿದ ರಾಜ್ಯ ಸರ್ಕಾರ
ದೀಪಾವಳಿ ಸಾಲು ಸಾಲು ರಜೆಯ ಗುಂಗಿನಿಂದ ಹೊರ ಬರುವ ಮೊದಲೇ ಮತ್ತೆ ರಜಾ ಭಾಗ್ಯ ಕರುಣಿಸಲಾಗಿದೆ. ರಜೆ ಘೋಷಿಸಿ ಸರ್ಕಾರ ಆದೇಶ ಹೊರಡಿಸಿದೆ.
ಅದರಲ್ಲಿಯೂ ನವೆಂಬರ್ 20 ರಂದು ಶಾಲಾ ಕಾಲೇಜು ಮಾತ್ರವಲ್ಲದೆ, ಸರ್ಕಾರಿ ಕಚೇರಿ, ಖಾಸಗಿ ಕಂಪನಿ,ಕಚೇರಿಗಳಿಗೂ ಕಡ್ಡಾಯ ರಜೆ ಘೋಷಿಸಲಾಗಿದೆ. ಈ ನಿರ್ದೇಶನದ ಉಲ್ಲಂಘನೆಯು ಉದ್ಯೋಗದಾತರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
ಇಲ್ಲಿ ನವೆಂಬರ 15 ಗುರು ನಾನಕ್ ಜಯಂತಿಯ ಕಾರಣದಿಂದ ರಜೆ ಇದ್ದರೆ, 16 ಶನಿವಾರ ಅರ್ಧ ದಿನ ಶಾಲೆ ಇರಲಿದೆ. 17 ಭಾನುವಾರ.
ಮಹಾರಾಷ್ಟ್ರದಲ್ಲಿ ಇದೇ ತಿಂಗಳು ಅಂದರೆ ನವೆಂಬರ್ 20 ವಿಧಾನಸಭೆ ಚುನಾವಣೆ ನಡೆಯಲಿದ್ದು, ಇದಕ್ಕಾಗಿ ಸಾರ್ವಜನಿಕ ರಜೆ ಘೋಷಿಸಲಾಗಿದೆ. ಇದರ ಅಡಿಯಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ನವೆಂಬರ್ 20 ರಂದು ರಜೆ ಇರುತ್ತದೆ.
ಮುಂಬಯಿ ಮುನ್ಸಿಪಲ್ ಕಾರ್ಪೊರೇಶನ್ (BMC) ಯ ಮಿತಿಯೊಳಗೆ ಬರುವ ಎಲ್ಲಾ ಸಂಸ್ಥೆಗಳು, ವ್ಯವಹಾರಗಳು ಮತ್ತು ಇತರ ಕೆಲಸದ ಸ್ಥಳಗಳು ನವೆಂಬರ್ 20 ರಂದು ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆಯಲ್ಲಿ ಮತ ಚಲಾಯಿಸಲು ತಮ್ಮ ಉದ್ಯೋಗಿಗಳಿಗೆ ರಜೆ ನೀಡಬೇಕಾಗುತ್ತದೆ.
ಮುಂಬೈ ನಗರ ಮತ್ತು ಮುಂಬೈ ಉಪನಗರ ಪ್ರದೇಶದ ಮತದಾರರು ತಮ್ಮ ಹಕ್ಕು ಚಲಾಯಿಸಲು ಮತ್ತು ಮತದಾನದ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ನವೆಂಬರ್ 20 ರಂದು ತಮ್ಮ ಕ್ಷೇತ್ರಗಳಲ್ಲಿ ಮತದಾನ ಮಾಡಲು ಉದ್ಯೋಗದಾತರು ತಮ್ಮ ಉದ್ಯೋಗಿಗಳಿಗೆ ವೇತನ ಸಹಿತ ರಜೆ ನೀಡಬೇಕು ಮತ್ತು ಈ ನಿಯಮವು ಎಲ್ಲಾ ಕೈಗಾರಿಕಾ ಪ್ರದೇಶಗಳು, ನಿಗಮಗಳು, ಕಂಪನಿಗಳು ಮತ್ತು ಇತರ ಸಂಸ್ಥೆಗಳಿಗೆ ಅನ್ವಯಿಸುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಒಂದು ವೇಳೆ ವಿಶೇಷ ಸಂದರ್ಭದ ಕಾರಣದಿಂದ ಪೂರ್ಣ ದಿನ ರಜೆ ನೀಡಲು ಸಾಧ್ಯವಾಗದಿದ್ದರೆ ಕನಿಷ್ಠ ನಾಲ್ಕು ಗಂಟೆ ರಜೆ ನೀಡಬಹುದು. ಆದರೆ ಇದಕ್ಕೆ ಜಿಲ್ಲಾ ಚುನಾವಣಾಧಿಕಾರಿಯಿಂದ ಅನುಮತಿ ಪಡೆಯಬೇಕು.