Mahashivaratri 2021: ಶಿವನನ್ನು ಸುಲಭವಾಗಿ ಒಲಿಸಿಕೊಳ್ಳಲು ಇಲ್ಲಿವೆ ಸುಲಭ ವಿಧಾನಗಳು

Sun, 28 Feb 2021-9:59 pm,

ಬಿಲ್ವಪತ್ರೆ ಅರ್ಪಿಸಿ: ಶಿವನಿಗೆ ಅತ್ಯಂತ ಪ್ರೀಯ ವಸ್ತುಗಳಲ್ಲಿ ಬಿಲ್ವಪತ್ರ ಮೊದಲ ವಸ್ತುವಾಗಿದೆ. ಮಹಾ ಶಿವರಾತ್ರಿಯ ದಿನ ಶಿವನಿಗೆ ಬಿಲ್ವಪತ್ರೆ ಅರ್ಪಿಸಿದರೆ ಧನ ಪ್ರಾಪ್ತಿಯಾಗುತ್ತದೆ, ವೈವಾಹಿಕ ಜೀವನದಲ್ಲಿ ಸುಖ ನೆಲೆಸುತ್ತದೆ. ದೊಡ್ಡ ರೋಗಗಳು ದೂರವಾಗಿ ಸಂತಾನ ಸುಖ ಪ್ರಾಪ್ತಿಯಾಗುತ್ತದೆ. ಜೀವನದ ಎಲ್ಲ ಸಂಕಷ್ಟಗಳಿಂದ ಮುಕ್ತಿ ಸಿಗುತ್ತದೆ. ಬಿಲ್ವಪತ್ರೆ ಮೂರು ದಳಗಳಿಂದ ಹಿಡಿದು 11 ದಳಗಳವರೆಗೆ ಇರುತ್ತವೆ. ದಳಗಳು ಜಾಸ್ತಿ ಇದ್ದಷ್ಟು ಉತ್ತಮ. ಆದರೆ, ಶಿವಲಿಂಗದ ಮೇಲೆ ಬಿಲ್ವಪತ್ರೆ ಅರ್ಪಿಸುವಾಗ ಎಲೆಗಳು ಕತ್ತರಿಸಿರಬಾರದು ಎಂಬುದನ್ನು ನೆನಪಿಡಿ.

ಜಲ ಹಾಗೂ ಹಾಲಿನಿಂದ ಅಭಿಷೇಕ ಮಾಡಿ: ವಿಷ್ಣುಪುರಾಣದ ಪ್ರಕಾರ ಶಿವ ಓರ್ವ ನಿರಾಕಾರ ಎಂದು ಭಾವಿಸಲಾಗುತ್ತದೆ. ಹೀಗಾಗಿ ಕೇವಲ ಶಿವರಾತ್ರಿ ಅಷ್ಟೇ ಅಲ್ಲ ದಿನನಿತ್ಯವೂ ಕೂಡ ಶಿವನಿಗೆ ಜಲ ಹಾಗೂ ಅಭಿಷೇಕ ಮಾಡಿದರೆ, ದೌರ್ಭಾಗ್ಯ ಕೂಡ ಸೌಭಾಗ್ಯವಾಗಿ ಪರಿವರ್ತನೆಯಾಗುತ್ತದೆ. ಶಾಸ್ತ್ರಗಳ ಪ್ರಕಾರ ಶಿವಲಿಂಗದ ಮೇಲೆ ಜಲ ಅರ್ಪಿಸುವುದರಿಂದ ಶಾರೀರಿಕ ಹಾಗೂ ಮಾನಸಿಕ ಕಷ್ಟಗಳು ದೂರಗುತ್ತವೆ. ಜಲದ ಹೊರತಾಗಿ ಶಿವಲಿಂಗದ ಮೇಲೆ ಹಾಲಿನಿಂದ ಅಭಿಷೇಕ ಮಾಡಿದರೆ, ಸಮಸ್ತ ಮನೋಕಾಮನೆಗಳು ಪೂರ್ಣಗೊಳ್ಳುತ್ತವೆ. ಒಂದು ವೇಳೆ ನಿಮ್ಮ ಬಳಿ ಹಾಲಿನ ಕೊರತೆ ಇದ್ದರೆ, ನಿಮ್ಮ ಬಳಿ ಇರುವ ಹಾಲನ್ನು ನೀರಿನಲ್ಲಿ ಬೆರೆಸಿ ಅದನ್ನು ಶಿವಲಿಂಗಕ್ಕೆ ಅರ್ಪಿಸಿ.

ಶಿವಲಿಂಗಕ್ಕೆ ಧತ್ತೂರಿ ಅರ್ಪಿಸಿ: ಶಿವ ಧತ್ತೂರಿ ಪ್ರಿಯ. ಹೀಗಾಗಿ ಶಿವರಾತ್ರಿಯ ದಿನ ಶಿವಲಿಂಗಕ್ಕೆ ಧತ್ತೂರಿಯನ್ನು ಆರೋಪಿಸಿ ಮನಸ್ಸು ಮತ್ತು ವಿಚಾರಗಳಿಂದ ಕಹಿ ಸಂಗತಿಗಳನ್ನು ತೊಡೆದುಹಾಕಿ ನಿಮ್ಮ ಜೀವನದಲ್ಲಿ ಸಿಹಿಯನ್ನು ತುಂಬುವ ಸಂಕಲ್ಪ ಮಾಡಿ. ಇದರಿಂದ ಶಿವ ಬೇಗ ಪ್ರಸನ್ನನಾಗುತ್ತಾನೆ. ಇದಲ್ಲದೆ ಭಾಂಗ್ ಹಾಗೂ ಅಂಕ್ ಗಿಡದ ಹೂವು ಹಾಗೂ ಬಾರಿಹಣ್ಣು ಶಿವಲಿಂಗಕ್ಕೆ ಅರ್ಪಿಸಿ.

ಶಿವಲಿಂಗಕ್ಕೆ ಅಕ್ಕಿ ಅರ್ಪಿಸಿ: ಕೇವಲ 4 ಕಾಳು ಅಕ್ಕಿ ಅರ್ಪಣೆಯಿಂದಲೂ ಕೂಡ ಶಿವ ಪ್ರಸನ್ನನಾಗುತ್ತಾನೆ ಎನ್ನಲಾಗುತ್ತದೆ. ಹೀಗಾಗಿ ಶಿವರಾತ್ರಿಯ ದಿನ ನೀವೂ ಕೂಡ ಶಿವಲಿಂಗಕ್ಕೆ ಅಕ್ಷತೆ ಹಾಕಿ. ಅಕ್ಕಿ ಶುಭ್ರ ಹಾಗೂ ಅಖಂಡವಾಗಿರಬೇಕು ಎಂಬುದನ್ನು ನೆನಪಿಡಿ. ತುಂಡಾಗಿರುವ ಅಕ್ಕಿ ಶಿವನಿಗೆ ಅರ್ಪಿಸಬೇಕು. ಶಿವಪುರಾಣದ ಅನುಸಾರ ಶಿವಲಿಂಗಕ್ಕೆ ಅಕ್ಕಿ ಅರ್ಪಿಸುವುದರಿಂದ ಶಿವ ಪ್ರಸನ್ನನಾಗಿ ಅಖಂಡ ಧನ, ಮಾನ-ಸಮ್ಮಾನ ದಯಪಾಲಿಸುತ್ತಾನೆ ಎನ್ನಲಾಗಿದೆ.

ಈ ಮಂತ್ರವನ್ನು ಜಪಿಸಿ ಶಿವನಿಗೆ ಪ್ರಸನ್ನಗೊಳಿಸಿ.: ಶಿವರಾತ್ರಿಯ ದಿನ ಶಿವನನ್ನು ಪ್ರಸನ್ನಗೊಳಿಸಿ ಅವನ ಕೃಪೆಗೆ ಪಾತ್ರರಾಗಲು ನೀವು ಈ ಕೆಳಗೆ ಸೂಚಿಸಲಾಗಿರುವ ಮಂತ್ರಗಳನ್ನೂ ಜಪಿಸಿ. ಮಂತ್ರ ಜಪಿಸುವಾಗ ನಿಮ್ಮ ಮುಖ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿರಬೇಕು. 1. ಓಂ ನಮಃ ಶಿವಾಯ, 2. ಓಂ ನಮೋ ನಿಲಕಂಠಾಯನಮಃ, 3. ಓಂ ಪಾರ್ವತಿಪತಯೇನಮಃ, 4. ಓಂ ಹ್ರೀಮ್-ಹ್ರೌಮ್ ನಮಃ ಶಿವಾಯ, 5. ಓಂ ನಮೋ ಭಗವತೇ ದಕ್ಷಿಣಮೂರ್ತಯೇ ಮಹಂಮೇಧಾ ಪ್ರಯಚ್ಛ ಸ್ವಾಹಾ

ZEENEWS TRENDING STORIES

By continuing to use the site, you agree to the use of cookies. You can find out more by Tapping this link