Mahashivaratri 2021 : ಮಹಾಶಿವರಾತ್ರಿಯಂದು ಶಿವನ ಕೃಪೆಗೆ ಪಾತ್ರರಾಗಲು ಹೀಗೆ ಮಾಡಿ..!

Fri, 26 Feb 2021-9:51 am,

ಬಿಲ್ವಪತ್ರೆ ಶಿವನಿಗೆ ಅತ್ಯಂತ ಪ್ರಿಯವಾದದ್ದು. ಶಿವಲಿಂಗಕ್ಕೆ ಬಿಲ್ವಪತ್ರೆಯನ್ನು ಅರ್ಪಿಸುವುದರಿಂದ ಸಂಪತ್ತು ಪ್ರಾಪ್ತಿಯಾಗುತ್ತದೆ. ವೈವಾಹಿಕ ಜೀವನ ಸುಖ ಸಂತೋಷದಿಂದ ಕೂಡಿರುತ್ತದೆ. ಎದುರಾಗಬಹುದಾದ ರೋಗ ರುಜಿನಗಳು ನಿವಾರಣೆಯಾಗುತ್ತದೆ. ಜೀವನದ ಎಲ್ಲಾ ರೀತಿಯ ಸಮಸ್ಯೆಗಳನ್ನು ಇದು ತೊಡೆದುಹಾಕುತ್ತದೆ. ಬಿಲ್ವಪತ್ರೆಯನ್ನು ಮೂರರಿಂದ 11ರತನಕ ಅರ್ಪಿಸಬಹುದು. ಬಿಲ್ವಪತ್ರೆ ಅರ್ಪಿಸುವ ಸಮಯದಲ್ಲಿ ಹರಿದ ಪತ್ರೆಗಳನ್ನು ಯಾವುದೇ ಕಾರಣಕ್ಕೂ ಅರ್ಪಿಸಬಾರದು ಎನ್ನುವುದು ನೆನಪಿರಲಿ.. 

 ಶಿವಪುರಾಣದ ಪ್ರಕಾರ, ಶಿವ ಲಿಂಗವನ್ನು ಶಿವನ ನಿರಾಕಾರ ರೂಪವೆಂದು ಪರಿಗಣಿಸಲಾಗುತ್ತದೆ.  ಆದ್ದರಿಂದ ಮಹಾಶಿವರಾತ್ರಿಯ ವಿಶೇಷ ಸಂದರ್ಭದಲ್ಲಿ ಮಾತ್ರವಲ್ಲ, ಪ್ರತಿದಿನವೂ ಶಿವಲಿಂಗಕ್ಕೆ ನೀರಿನಿಂದ ಅಭಿಷೇಕ ಮಾಡಿದರೆ, ದುರಾದೃಷ್ಟ ಕೂಡಾ  ಅದೃಷ್ಟವಾಗಿ ಬದಲಾಗುತ್ತದೆಯಂತೆ. ಧರ್ಮಗ್ರಂಥಗಳ ನಂಬಿಕೆಯ ಪ್ರಕಾರ, ಶಿವಲಿಂಗಕ್ಕೆ ನೀರಿನ ಅಭಿಷೇಕ ಮಾಡಿದರೆ  ದೈಹಿಕ ಮತ್ತು ಮಾನಸಿಕ ತೊಂದರೆಗಳಿಂದ ಮುಕ್ತಿ ಸಿಗುತ್ತದೆ ಎನ್ನುವುದು ನಂಬಿಕೆ. ಇದಲ್ಲದೆ, ಶಿವಲಿಂಗಕ್ಕೆ ಹಾಲಿನಿಂದ ಅಭಿಷೇಕ ಮಾಡಿದರೆ, ಎಲ್ಲಾ ಆಸೆಗಳನ್ನು ಈಡೇರುತ್ತದೆಯಂತೆ.

ಶಿವ ಧಾತುರವನ್ನು ಬಹಳ ಇಷ್ಟಪಡುತ್ತಾನೆ. ಆದ್ದರಿಂದ ಮಹಾಶಿವರಾತ್ರಿಯ ದಿನದಂದು, ಮನಸ್ಸು ಮತ್ತು ಆಲೋಚನೆಗಳ ಕಹಿ ತೆಗೆದುಕೊಳ್ಳಲು ಮತ್ತು ಶಿವಲಿಂಗದ  ಮೇಲೆ ಧಾತುರವನ್ನು ಅರ್ಪಿಸಬೇಕು. ಹೀಗೆ ಮಾಡುವುದರಿಂದಲೂ  ಶಿವನು ಸಂತೋಷಗೊಳ್ಳುತ್ತಾನೆ. .   

ಕೇವಲ 4 ಕಾಳು ಅಕ್ಕಿಯನ್ನು ಅರ್ಪಿಸುವುದರಿಂದಲೂ  ಶಿವನು ಸಂತಸಗೊಂಡು ಭಕ್ತನಿಗೆ ಅಪಾರ ಸಂತೋಷವನ್ನು ಕರುಣಿಸುತ್ತಾನೆ ಎಂದು  ನಂಬಲಾಗಿದೆ. ಸ್ವಚ್ಚ ಮತ್ತು ಮುರಿಯದೇ ಇರುವಂಥಹ ಅಂದರೆ ಇಡೀ ಅಕ್ಕಿ ಕಾಳನ್ನು ಶಿವಲಿಂಗಕ್ಕೆ ಅರ್ಪಿಸಬೇಕು. ಶಿವ ಪುರಾಣದ ಪ್ರಕಾರ, ಶಿವನು ಶಿವಲಿಂಗಕ್ಕೆ ಅಕ್ಕಿಯನ್ನು ಅರ್ಪಿಸುವುದರ ಮೂಲಕ ಶಿವನನ್ನು ಸಂತೋಷಪಡಿಸಬಹುದು. ಹೀಗೆ ಮಾಡುವುದರಿಂದ ಈಶ್ವರನು ಭಕ್ತರಿಗೆ ಸಂಪತ್ತು, ಗೌರವವನ್ನು ಕರುಣಿಸುತ್ತಾನೆ.    

ಮಹಾಶಿವರಾತ್ರಿಯಂದು, ಭೋಲೆಶಂಕರನನ್ನು ಮೆಚ್ಚಿಸಲು ಮತ್ತು ಅವರ ಅನುಗ್ರಹವನ್ನು ಪಡೆಯಲು ಈ ಮಂತ್ರಗಳನ್ನು ಪಠಿಸಬಹುದು. ಮಂತ್ರವನ್ನು ಪಠಿಸುವಾಗ, ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಿ ಕುಳಿತಿರಬೇಕು..  1 ಓಂ ನಮಃ ಶಿವಾಯ. 2 ನಮೋ ನೀಲಕಂಠಯಾಃ. 3 ಓಂ ಪಾರ್ವತಿಪತಯೇ ನಮಃ 4 ಓಂ ಹ್ರೀಂ ಹ್ರೂಂ ನಮಃ ಶಿವಾಯ 5  ಓಂ ನಮೋ ಭಗವತೇ ದಕ್ಷಿಣಮೂರ್ತಯೆ ಮಹ್ಯಾಮ್ ಮೇಧಾ ಪ್ರಾಯ್ಚಾ ಸ್ವಾಹಾ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link