Mahashivratri 2024: ಮಹಾಶಿವರಾತ್ರಿ ಪೂಜೆ ವೇಳೆ ಈ ವಿಷಯಗಳ ಬಗ್ಗೆ ಇರಲಿ ವಿಶೇಷ ಗಮನ

Fri, 08 Mar 2024-7:19 am,

ಇಂದು ಅಂದರೆ ಮಾರ್ಚ್ 8 ರಂದು ದೇಶದಾದ್ಯಂತ ಮಹಾಶಿವರಾತ್ರಿ ಹಬ್ಬವನ್ನು ಆಚರಿಸಲಾಗುತ್ತಿದೆ. ಭಗವಾನ್ ಭೋಲೆನಾಥನ ಆರಾಧನೆ ತುಂಬಾ ಸರಳ. ಆದಾಗ್ಯೂ, ಮಹಾಶಿವರಾತ್ರಿಯ ದಿನ ಪೂಜೆ ಮಾಡುವಾಗ ಏನು ಮಾಡಬೇಕು? ಏನು ಮಾಡಬಾರದು ಎಂಬುದನ್ನೂ ನೆನೆಪಿನಲ್ಲಿಡುವುದು ತುಂಬಾ ಅಗತ್ಯ. 

ಮಹಾಶಿವರಾತ್ರಿಯಂದು ಉಪವಾಸವನ್ನು ಆಚರಿಸುವ ಜನರು ಈ ದಿನ ಸಾತ್ವಿಕ ಆಹಾರ ಮತ್ತು ಹಣ್ಣುಗಳನ್ನಷ್ಟೇ ಸೇವಿಸಬೇಕು.   

ಎಲ್ಲರಿಗೂ ತಿಳಿದಿರುವಂತೆ ಶಿವರಾತ್ರಿ ಹಬ್ಬದಲ್ಲಿ ಶಿವಾನಿಗೆ 3 ಎಲೆಗಳೊಂದಿಗೆ ಸಂಪೂರ್ಣ ಬಿಲ್ವಪತ್ರವನ್ನು ಅರ್ಪಿಸಬೇಕು ಎಂಬುದನ್ನು ನೆನಪಿನಲ್ಲಿಡಿ. 

ಶಿವನ ಪೂಜೆಯಲ್ಲಿ ತೆಂಗಿನಕಾಯಿ ಬಳಸಬಾರದು  ಧಾರ್ಮಿಕ ನಂಬಿಕೆಗಳ ಪ್ರಕಾರ, ತೆಂಗಿನಕಾಯಿ ತಾಯಿ ಲಕ್ಷ್ಮೀ ಸ್ವರೂಪವಾಗಿದ್ದು, ಶಿವನ ಪೂಜೆಯಲ್ಲಿ ಅದರಲ್ಲೂ ಮಹಾಶಿವರಾತ್ರಿಯ ದಿನ ಪೂಜೆ ಮಾಡುವಾಗ ಶಿವಲಿಂಗಕ್ಕೆ ತೆಂಗಿನಕಾಯಿಯನ್ನು ಅರ್ಪಿಸಬಾರದು. ಇಲ್ಲದೆ, ಶಿವಲಿಂಗಕ್ಕೆ ಎಳನೀರಿನಿಂದ ಅಭಿಷೇಕ ಮಾಡಬಾರದು ಎಂದು ಹೇಳಲಾಗುತ್ತದೆ. 

ಶಿವನ ಆರಾಧನೆಯಲ್ಲಿ ಅಪ್ಪಿತಪ್ಪಿಯೂ ಸಹ ಅರಿಶಿನ, ಕುಂಕುಮ, ಕೆಂಪು ಹೂವುಗಳು, ಸಿಂಧೂರವನ್ನು ಅರ್ಪಿಸಬಾರದು. 

ಶಿವನ ಪೂಜೆಯಲ್ಲಿ ಶಂಖ ಊದುವುದು/ಶಂಖದಿಂದ ಪ್ರತಿಷ್ಠಾಪನೆ ಮಾಡುವುದನ್ನು ನಿಷೇಧಿಸಲಾಗಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link