ದರ್ಶನ್‌ ʼಡೆವಿಲ್‌ʼ ಸಿನಿಮಾದ ವಿಲನ್‌ ಮಗಳಾ ಈ ಸ್ಟಾರ್‌ ನಟಿ..! ಇಷ್ಟು ದಿನ ಈ ಮ್ಯಾಟರ್‌ ಗೊತ್ತಿದ್ದಿಲ್ಲ..

Sat, 10 Aug 2024-2:45 pm,

ಬಹಳಷ್ಟು ದಿನಗಳ ನಂತರ, ನಟ ದರ್ಶನ್ ಅಭಿನಯದ ಡೆವಿಲ್ ಚಿತ್ರದ ಮೂಲಕ ಮಹೇಶ್ ಸ್ಯಾಂಡಲ್‌ವುಡ್‌ಗೆ ಕಮ್‌ಬ್ಯಾಕ್‌ ಮಾಡಿದ್ದಾರೆ..   

ಮರಾಠಿ ಇಂಡಸ್ಟ್ರಿಯಲ್ಲ ಒಳ್ಳೆ ಹೆಸರು ಗಳಿಸಿರುವ ಈ ನಟ ಬಾಲಿವುಡ್‌ನಲ್ಲೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಕನ್ನಡಕ್ಕೆ ಎರಡನೇ ಬಾರಿ ಬಂದಿದ್ದಾರೆ.  

2005 ರಲ್ಲಿ ಎನ್‌ಕೌಂಟರ್ ದಯಾ ನಾಯಕ್ ಅನ್ನೋ ಚಿತ್ರ ಬಂದಿತ್ತು. ಇದರಲ್ಲಿ ಯೂಸುಫ್ ಖಲೀಲ್ ಅನ್ನೋ ಪಾತ್ರವನ್ನ ಮಹೇಶ್‌ ನಿರ್ವಹಿಸಿದ್ದರು.   

ಇದಾದ್ಮೇಲೆ ಕನ್ನಡದ ಯಾವ ಚಿತ್ರದಲ್ಲೂ ಕಾಣಿಸಿಕೊಂಡಿರಲಿಲ್ಲ. ಮಾಡ್ತಾರೆ ಅನ್ನೋ ಸುದ್ದಿನೂ ಇಷ್ಟು ದಿನ ಇರಲಿಲ್ಲ.  

ದರ್ಶನ್ ಅಭಿನಯದ ಡೆವಿಲ್ ಚಿತ್ರದಲ್ಲಿ ಮಹೇಶ್ ಮಂಜ್ರೇಕರ್ ಮಹತ್ವದ ಪಾತ್ರ ಮಾಡುತ್ತಿದ್ದಾರೆ. ಅವರ ಪಾತ್ರ ಹೇಗಿರುತ್ತೇ ಅನ್ನೋ ಬಗ್ಗೆ ಮಾಹಿತಿ ಇಲ್ಲ.   

ಆದರೆ ದರ್ಶನ್‌ ಬಂಧನದಿಂದ ಇದೀಗ ಚಿತ್ರದ ಶೂಟಿಂಗ್‌ ರದ್ದಾಗಿದ್ದು.. ಮುಂದೇನಾಗುತ್ತೆ ಅಂತ ಕಾಯ್ದು ನೋಡಬೇಕಿದೆ..   

ಇದರ ಬೆನ್ನಲ್ಲೆ, ಮಹೇಶ್ ಮಂಜ್ರೇಕರ್ ಅವರ ಪುತ್ರಿಯ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ.. ಅವರ ಮಗಳನ್ನು ನೋಡಿದ ನೆಟ್ಟಿಗರು.. ಅರೇ ಈ ಹುಡುಗಿ ಸ್ಟಾರ್‌ ನಟಿ ಅಲ್ವಾ ಅಂತ ಶಾಕ್‌ ಆಗಿದ್ದಾರೆ...   

ಹೌದು.. ಮಹೇಶ್ ಮಂಜ್ರೇಕರ್ ಅವರಿಗೆ ಮೂವರು ಮಕ್ಕಳಿದ್ದಾರೆ. ಅವರಲ್ಲಿ ಸಾಯಿ ಮಂಜ್ರೇಕರ್ ಒಬ್ಬರು. ಈ ಸುಂದರಿ ಸಲ್ಮಾನ್ ಖಾನ್ ಅಭಿನಯದ 'ದಬಾಂಗ್ 3' ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.  

ಹೇಳಿದಂತೆ, ತುಂಬಾ ಕ್ಯೂಟಾಗಿರುವ ಈ ಚೆಲುವೆ ತೆಲುಗಿನಲ್ಲೂ ನಾಯಕಿಯಾಗಿ ವರುಣ್ ತೇಜ್ ʼಗಣಿʼ, ರಾಮ್ ಪೋತಿನೇನಿ ʼಸ್ಕಂದʼ ಮತ್ತು ʼಮೇಜರ್ʼ ಸಿನಿಮಾದಲ್ಲಿ ನಟಿಸಿದ್ದಾರೆ. ಆದರೆ ಅಷ್ಟಾಗಿ ಕ್ರೇಜ್‌ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾದರು..  

ZEENEWS TRENDING STORIES

By continuing to use the site, you agree to the use of cookies. You can find out more by Tapping this link