ಮುಖ್ಯ ದ್ವಾರದ ಮ್ಯಾಟ್ ಬಣ್ಣ ಇದಾಗಿದ್ದರೆ ಲಕ್ಷ್ಮೀ ಮೊದಲು ನಿಮ್ಮ ಮನೆಯನ್ನೇ ಪ್ರವೇಶಿಸುತ್ತಾಳೆ! ಮನೆಯಲ್ಲಿ ಕಷ್ಟಗಳಿಗೆ ಜಾಗವೇ ಇರುವುದಿಲ್ಲ ! ಹಣದ ಕೊರತೆ ಕಾಡುವುದೇ ಇಲ್ಲ
ನಿಮ್ಮ ಮನೆಯ ಮುಖ್ಯ ದ್ವಾರದಲ್ಲಿ ಯಾವ ಬಣ್ಣದ ಡೋರ್‌ಮ್ಯಾಟ್ ಹಾಕಬೇಕು ಎನ್ನುವುದಕ್ಕೂ ವಾಸ್ತುವಿನಲ್ಲಿ ನಿಯಮವಿದೆ. ಯಾವ ದಿಕ್ಕಿಗೆ ಯಾವ ಬಣ್ಣದ ಡೋರ್ಮ್ಯಾಟ್ ಹಾಕಿದರೆ ಶುಭ ಎನ್ನುವುದನ್ನು ವಿವರವಾಗಿ ಹೇಳಲಾಗಿದೆ.
ಮನೆಯ ಮುಖ್ಯ ದ್ವಾರವು ಪೂರ್ವ ದಿಕ್ಕಿನಲ್ಲಿದ್ದರೆ ಅದು ಮಂಗಳಕರ. ಸೂರ್ಯ ಪೂರ್ವದಿಂದ ಉದಯಿಸುತ್ತಾನೆ. ಆದ್ದರಿಂದ, ಈ ದಿಕ್ಕಿನಲ್ಲಿ ಮರೂನ್ ಅಥವಾ ಕಂದು ಬಣ್ಣದ ಡೋರ್ ಮ್ಯಾಟ್ ಹಾಕಬೇಕು. ಈ ಬಣ್ಣವು ಸಮೃದ್ಧಿ, ಸಂತೋಷ ಮತ್ತು ಧನಾತ್ಮಕ ಶಕ್ತಿಯನ್ನು ಪಸರಿಸಿ, ಮನೆಯಲ್ಲಿ ಸುಖ ಸಂತೋಷ ವೃದ್ದಿಯಾಗುತ್ತದೆ.
ಪಶ್ಚಿಮ ದಿಕ್ಕನ್ನು ಭೂಮಿಯ ಅಂಶದೊಂದಿಗೆ ಸಂಯೋಜಿಸಲಾಗಿದೆ. ಮನೆಯ ಮುಖ್ಯ ದ್ವಾರವು ಪಶ್ಚಿಮ ದಿಕ್ಕಿನಲ್ಲಿದ್ದರೆ ಅಲ್ಲಿ ಜೇಡಿಮಣ್ಣು ಅಥವಾ ಕಂದು ಬಣ್ಣದ ಡೋರ್ ಮ್ಯಾಟ್ ಹಾಕಬೇಕು. ಈ ಬಣ್ಣವು ಮನೆಯಲ್ಲಿ ಸಂಪತ್ತು ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ.
ಮನೆಯ ಮುಖ್ಯ ಬಾಗಿಲು ಉತ್ತರ ದಿಕ್ಕಿನಲ್ಲಿದ್ದರೆ, ಅಲ್ಲಿ ನೀಲಿ ಬಣ್ಣದ ಡೋರ್‌ಮ್ಯಾಟ್ ಅನ್ನು ಇಡುವುದು ಮಂಗಳಕರ.ಇದಕ್ಕೆ ಕಾರಣವೆಂದರೆ ವಾಸ್ತು ಶಾಸ್ತ್ರದ ಪ್ರಕಾರ ಈ ದಿಕ್ಕು ನೀರಿನ ಅಂಶದ ಸಂಕೇತ. ಈ ದಿಕ್ಕಿನಲ್ಲಿ ಬುಧನ ಪ್ರಭಾವ ಹೆಚ್ಚು.
ಮನೆಯ ಮುಖ್ಯ ದ್ವಾರವು ದಕ್ಷಿಣ ದಿಕ್ಕಿನಲ್ಲಿದ್ದರೆ ಅಲ್ಲಿ ಕೆಂಪು ಬಣ್ಣದ ಡೋರ್‌ಮ್ಯಾಟ್ ಬಳಸಬೇಕು. ಈ ಬಣ್ಣವು ಮನೆಯಲ್ಲಿ ಯಶಸ್ಸು, ಪ್ರಗತಿ ಮತ್ತು ಆತ್ಮವಿಶ್ವಾಸ ಹೆಚ್ಚಿಸಲು ಸಹಾಯ ಮಾಡುತ್ತದೆ. ದಕ್ಷಿಣ ದಿಕ್ಕು ಬೆಂಕಿಯ ಅಂಶಕ್ಕೆ ಸಂಬಂಧಿಸಿದೆ, ಅದರ ಅಧಿಪತಿ ಮಂಗಳ, ಅದರ ಬಣ್ಣ ಕೆಂಪು. ಆದ್ದರಿಂದ, ದಕ್ಷಿಣ ದಿಕ್ಕಿನಲ್ಲಿ ಕೆಂಪು ಬಣ್ಣದ ಡೋರ್‌ಮ್ಯಾಟ್ ಇಡುವುದು ಮಂಗಳಕರ.
ಮನೆಯಲ್ಲಿ ಡೋರ್‌ಮ್ಯಾಟ್ ಇಟ್ಟುಕೊಳ್ಳುವುದು ಅನಿವಾರ್ಯ.ಆದರೆ ಡೋರ್‌ಮ್ಯಾಟ್ ಬಾಗಿಲಿನ ಗಾತ್ರಕ್ಕೆ ಹೊಂದಿಕೆಯಾಗಬೇಕು. ಇದು ತುಂಬಾ ದೊಡ್ಡದಾಗಿ ಅಥವಾ ಚಿಕ್ಕದಾಗಿರಬಾರದು. ಪ್ರತಿ ದಿನವೂ ಅದನ್ನು ಸ್ವಚ್ಛಗೊಳಿಸಬೇಕು, ಇದರಿಂದ ಧೂಳು ಹೊರಬರುತ್ತದೆ. ಡೋರ್‌ಮ್ಯಾಟ್ ಹಳೆಯದಾದಾಗ ಅದನ್ನು ಬದಲಾಯಿಸಬೇಕು. ಕೊಳಕು ಮತ್ತು ಹಳೆಯ ಡೋರ್ಮ್ಯಾಟ್ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.