ಪೋಷಕರೇ ತಿಳಿದುಕೊಳ್ಳಿ! ಸುಕನ್ಯಾ ಸಮೃದ್ಧಿ ನಿಯಮದಲ್ಲಿ ಪ್ರಮುಖ 6 ಬದಲಾವಣೆ ಮಾಡಿದ ಸರ್ಕಾರ :ಬಡ್ಡಿ ಕತೆ ಏನು ?

Wed, 02 Oct 2024-11:59 am,

ಹೆಣ್ಣು ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, 2015ರಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಪ್ರಾರಂಭಿಸಲಾಯಿತು.ಇದರಿಂದ ಪೋಷಕರು ಚಿಕ್ಕ ವಯಸ್ಸಿನಿಂದಲೇ ಉಳಿತಾಯ ಮಾಡುವುದನ್ನು ಪ್ರೋತ್ಸಾಹಿಸಲಾಯಿತು.   

ಈ ಖಾತೆಯನ್ನು ಮಗಳು ಹುಟ್ಟಿದ ಸಮಯದಲ್ಲಿ ಅಥವಾ ಆಕೆಗೆ 10 ವರ್ಷ ತುಂಬುವುದರೊಳಗೆ ತೆರೆಯಬಹುದು. ನಂತರ ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಅವಕಾಶ ಇಲ್ಲ.   

ಈ ಯೋಜನಗೆ ಸಂಬಂಧಿಸಿದಂತೆ ಇದೀಗ ಆರು ನಿಯಮಗಳನ್ನು ಬದಲಾಯಿಸಲಾಗಿದೆ. ಬದಲಾಗಿರುವ ನಿಯಮವನ್ನು ಹೆಣ್ಣು ಮಕ್ಕಳ ಪೋಷಕರು ತಿಳಿದುಕೊಳ್ಳುವುದು ಅವಶ್ಯಕ. 

ಹೊಸ ನಿಯಮದ ಪ್ರಕಾರ, ಹೆಣ್ಣುಮಗುವಿಗೆ 18 ವರ್ಷವಾಗುವವರೆಗೆ ಖಾತೆಯನ್ನು ಮಗುವಿನ ಪೋಷಕರು ಮತ್ತು ಕಾನೂನು ಪಾಲಕರೇ ನಿರ್ವಹಿಸಬೇಕು.  

ಹೆಣ್ಣು ಮಕ್ಕಳ ಕಾನೂನು ಪಾಲಕರು ಖಾತೆಯನ್ನು ನಿರ್ವಹಿಸದಿದ್ದರೆ,ಈ ಖಾತೆಯನ್ನು ಮುಚ್ಚಬಹುದು.ಮೊದಲು ಈ ಖಾತೆಯನ್ನು ಮಗಳ ಮರಣ ಅಥವಾ ನಿವಾಸದ ವಿಳಾಸವನ್ನು ಬದಲಾಯಿಸಿದಾಗ ಮುಚ್ಚುವ ಅವಕಾಶ ಇತ್ತು. ಈಗ ಖಾತೆದಾರರ ಮಾರಣಾಂತಿಕ ಕಾಯಿಲೆಯ ಸಂದರ್ಭದಲ್ಲಿಯೂ ಇದನ್ನು ಕ್ಲೋಸ್ ಮಾಡುವ ಅವಕಾಶ ನೀಡಲಾಗಿದೆ.   

ಈಗ ಮೂರನೇ ಮಗಳ ಹೆಸರಿನಲ್ಲಿಯೂ ಖಾತೆ ತೆರಬಹುದು. ತಾಯಿಗೆ ಮೊದಲ ಹೆರಿಗೆಯಲ್ಲಿ ಇಬ್ಬರೂ ಅವಳಿ ಹೆಣ್ಣು ಮಕ್ಕಳು ಜನಿಸಿ, ಎರಡನೇ ಹೆರಿಗೆಯಲ್ಲಿಯೂ ಹೆಣ್ಣು ಮಗು ಜನಿಸಿದ್ದರೆ ಆ ಮಗುವಿನ ಹೆಸರಿನಲ್ಲಿಯೂ ಖಾತೆ ತೆರೆಯಬಹುದು.

ಹೊಸ ನಿಯಮಗಳ ಪ್ರಕಾರ, ಹೆಣ್ಣುಮಕ್ಕಳು 18 ವರ್ಷಕ್ಕಿಂತ ಮೊದಲು ಸುಕನ್ಯಾ ಸಮೃದ್ಧಿ ಖಾತೆಯನ್ನು ನಿರ್ವಹಿಸಲು ಅನುಮತಿಸುವುದಿಲ್ಲ.18 ವರ್ಷ ವಯಸ್ಸಿನವರೆಗೆ, ಖಾತೆಯನ್ನು ಕಾನೂನು ಪಾಲಕರು ಮಾತ್ರ ನಿರ್ವಹಿಸುತ್ತಾರೆ.  

ಸುಕನ್ಯಾ ಸಮೃದ್ಧಿ ಯೋಜನೆ (SSY) ಅಡಿಯಲ್ಲಿ ಮಾಡಿದ ಹೂಡಿಕೆಗಳ ಮೇಲೆ ಸ್ವೀಕರಿಸುವ ಬಡ್ಡಿಯ ಮೊತ್ತವನ್ನು ಹಣಕಾಸು ಸಚಿವಾಲಯವು ಪ್ರತಿ ತ್ರೈಮಾಸಿಕದಲ್ಲಿ ಪರಿಶೀಲಿಸುತ್ತದೆ.ಸೆಪ್ಟೆಂಬರ್ 30ಕ್ಕೆ ಕೊನೆಗೊಳ್ಳುವ ತ್ರೈಮಾಸಿಕದಲ್ಲಿ ಬಡ್ಡಿ ದರವನ್ನು ವಾರ್ಷಿಕ 8.2% ನಂತೆ ಕಾಯ್ದುಕೊಳ್ಳಲಾಗಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link