Migraine Attacks In Summer: ಬೇಸಿಗೆಯಲ್ಲಿ ಮೈಗ್ರೇನ್ ದಾಳಿಗೆ 5 ಪ್ರಮುಖ ಕಾರಣಗಳಿವು
ಬೇಸಿಗೆಯಲ್ಲಿ ತಾಪಮಾನ ಹೆಚ್ಚಾದಂತೆ ಮೈಗ್ರೇನ್‌ನಿಂದ ಬಳಲುತ್ತಿರುವ ಜನರ ಸಮಸ್ಯೆಗಳು ಹೆಚ್ಚಾಗುತ್ತದೆ. ಹಾಗಾಗಿ ಏರುತ್ತಿರುವ ತಾಪಮಾನದಿಂದಾಗಿ ಹಠಾತ್ ಮೈಗ್ರೇನ್ ದಾಳಿಗೆ ಒಳಗಾಗುವುದನ್ನು ತಪ್ಪಿಸಲು ಕೆಲವು ವಿಚಾರಗಳ ಬಗ್ಗೆ ವಿಶೇಷ ಕಾಳಜಿ ಅಗತ್ಯವಿರುತ್ತದೆ. ಅವುಗಳೆಂದರೆ....
ಬೇಸಿಗೆಯಲ್ಲಿ ಮೈಗ್ರೇನ್‌ಗೆ ಪ್ರಾಥಮಿಕ ಪ್ರಚೋದಕಗಳಲ್ಲಿ ನಿರ್ಜಲೀಕರಣವೂ ಒಂದು. ತಾಪಮಾನ ಹೆಚ್ಚಾದಂತೆ, ಹೆಚ್ಚು ಬೆವರುವಿಕೆಯಿಂದಾಗಿ ದೇಹದಿಂದ ದ್ರವದ ನಷ್ಟವಾಗುತ್ತವೆ. ಇದು ಮೈಗ್ರೇನ್ ಸಮಸ್ಯೆಗೂ ಕಾರಣವಾಗಬಹುದು.
ಪ್ರಕಾಶಮಾನವಾದ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದಲೂ ಕೆಲವರಿಗೆ ಮೈಗ್ರೇನ್ ಸಮಸ್ಯೆ ಉಂಟಾಗಬಹುದು. ಹಾಗಾಗಿ ಬೇಸಿಗೆಯಲ್ಲಿ ಹೆಚ್ಚು ಬಿಸಿಲಿಗೆ ಹೋಗುವುದನ್ನು ತಪ್ಪಿಸಿ.
ಬೇಸಿಗೆ ಕಾಲದಲ್ಲಿ ಅತಿಯಾದ ಒತ್ತಡವು ಸಹ ತಲೆನೋವಿಗೆ ಕಾರಣವಾಗಬಹುದು ಅಥವಾ ಮೈಗ್ರೇನ್ ಸಮಸ್ಯೆಯನ್ನು ಉಲ್ಬಣಗೊಳಿಸಬಹುದು.
ಮಾಲಿನ್ಯ, ಪರಾಗ ಮತ್ತು ಅಲರ್ಜಿನ್‌ಗಳಂತಹ ಅಂಶಗಳಿಂದಾಗಿ ಬೇಸಿಗೆಯ ಗಾಳಿಯ ಗುಣಮಟ್ಟವು ಹದಗೆಡಬಹುದು. ಕಳಪೆ ಗಾಳಿಯ ಗುಣಮಟ್ಟವು ಉಸಿರಾಟದ ವ್ಯವಸ್ಥೆಯನ್ನು ಕಿರಿಕಿರಿಗೊಳಿಸುತ್ತದೆ ಮತ್ತು ಉರಿಯೂತವನ್ನು ಪ್ರಚೋದಿಸುತ್ತದೆ, ಇದು ಮೈಗ್ರೇನ್ ದಾಳಿಗೂ ಕಾರಣವಾಗಬಹುದು.
ಬೇಸಿಗೆಯಲ್ಲಿ ಸರಿಯಾದ ಆಹಾರ ಪದ್ದತಿಯನ್ನು ಅನುಸರಿಸದಿದ್ದರೂ ಸಹ ಮೈಗ್ರೇನ್ ಸಮಸ್ಯೆ ಉಲ್ಬಣಿಸಬಹುದು.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.