ಮತ್ತೆ ತೀವ್ರ ಕುಸಿತ ಕಂಡ ಚಿನ್ನದ ಬೆಲೆ ! ತಿಂಗಳ ಆರಂಭದಲ್ಲಿಯೇ ಪಾತಾಳಕ್ಕಿಳಿದ ಬಂಗಾರ !
ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರೀ ಏರಿಳಿತ ಕಾಣುತ್ತಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಳೆದ ವಾರದ ಕುಸಿತದ ನಂತರ, ಇದೀಗ ದೇಶೀಯ ಮಾರುಕಟ್ಟೆಯಲ್ಲಿಯೂ ಬಂಗಾರದ ಬೆಲೆಯಲ್ಲಿ ಇಳಿಕೆ ದಾಖಲಾಗಿದೆ.
ಹೊಸ ವಾರದ ಮೊದಲ ದಿನವಾದ ಸೋಮವಾರ, ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ ಮತ್ತು ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ ಕಂಡುಬಂದಿದೆ.
ಇಂಡಿಯಾ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಶನ್‌ನ ಅಧಿಕೃತ ವೆಬ್‌ಸೈಟ್ ibjarates.com ನ ದರಗಳ ಪ್ರಕಾರ, 999 ಶುದ್ಧತೆಯ 10 ಗ್ರಾಂ ಚಿನ್ನವು ಇಂದು 873 ರೂ. ಇಳಿಕೆ ಕಂಡಿದ್ದು, 75,867 ರೂ.ಗೆ ಇಳಿದಿದೆ,
ಭಾರತೀಯ ಭವಿಷ್ಯದ ಮಾರುಕಟ್ಟೆ MCX ನಲ್ಲಿ 692 ರೂಪಾಯಿಗಳ ಕುಸಿತದೊಂದಿಗೆ 10 ಗ್ರಾಂಗೆ 75,682 ರೂ.ಆಗಿದೆ. ಬೆಳ್ಳಿ ಪ್ರತಿ ಕೆಜಿಗೆ 831 ರೂ.ನಷ್ಟು ಕುಸಿದು 88,050 ರೂ.ಗೆ ತಲುಪಿದೆ.
ಚಿನ್ನದ ಮಾರುಕಟ್ಟೆಯಲ್ಲಿನ ಇಂದಿನ ಬೆಲೆಯನ್ನು ಗಮನಿಸುವುದಾದರೆ 24 ಕ್ಯಾರೆಟ್ ಚಿನ್ನದ ಬೆಲೆ 75,867, 22 ಕ್ಯಾರೆಟ್ ಚಿನ್ನದ ಬೆಲೆ 69494, 18 ಕ್ಯಾರೆಟ್ ಚಿನ್ನದ ಬೆಲೆ 44382 ಆಗಿದೆ.
ಬೆಳ್ಳಿಯ ಬೆಲೆಯಲ್ಲಿಯೂ 1,332 ರೂಪಾಯಿಗಳ ಕುಸಿತವನ್ನು ಕಂಡಿದ್ದು, ಪ್ರತಿ ಕೆಜಿಗೆ 88,051 ರೂಪಾಯಿಗಳಿಗೆ ತಲುಪಿದೆ.
ಈ ಸುದ್ದಿ ಬರೆಯುವ ಸಮಯದಲ್ಲಿನ ಮಾರುಕಟ್ಟೆ ಬೆಲೆಯನ್ನು ಇಲ್ಲಿ ನೀಡಲಾಗಿದೆ. ನಿಮ್ಮ ನಗರದ ಬಂಗಾರದ ಇಂದಿನ ನಿಖರವಾದ ಬೆಲೆಯನ್ನು ತಿಳಿಯಲು ಇಂಡಿಯಾ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಶನ್‌ನ ಅಧಿಕೃತ ವೆಬ್‌ಸೈಟ್ ibjarates.com ಅನ್ನು ಸಂಪರ್ಕಿಸಬಹುದು.