ಚಿನ್ನದ ಬೆಲೆಯಲ್ಲಿ 4,230 ರೂಪಾಯಿಯಷ್ಟು ಕುಸಿತ !ಮದುವೆ ಸೀಸನ್ ನಲ್ಲಿಯೇ ಇಳಿಕೆ ಕಾಣುತ್ತಿದೆ ಬಂಗಾರ
ಸಾಮಾನ್ಯವಾಗಿ ಮದುವೆ ಸೀಸನ್‌ನಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಹೆಚ್ಚುತ್ತದೆ. ಬೇಡಿಕೆಯ ಹೆಚ್ಚಳದಿಂದ ಚಿನ್ನ ದುಬಾರಿಯಾಗುತ್ತಿರುತ್ತದೆ.ಆದರೆ ಈ ಬಾರಿ ಪರಿಸ್ಥಿತಿ ಬದಲಾಗಿದೆ. ಮದುವೆ ಸೀಸನ್‌ನಲ್ಲಿ ಚಿನ್ನದ ಬೆಲೆ ನಿರಂತರವಾಗಿ ಕುಸಿಯುತ್ತಿದೆ.
ಗಗನಕ್ಕೇರಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆ ಮದುವೆ ಸೀಸನ್ ನಲ್ಲಿ ದಿನೇ ದಿನೇ ಕುಸಿಯುತ್ತಿದೆ. ಬಂಗಾರದ ಬೆಲೆಯಲ್ಲಿ ಒಂದೇ ಏಟಿಗೆ 1,630 ರೂ.ಯಷ್ಟು ಇಳಿಕೆ ಕಂಡಿದೆ. ಇದೀಗ ಚಿನ್ನದ ಬೆಲೆ 10 ಗ್ರಾಂಗೆ 75451 ರುಪಾಯಿ ಆಗಿದೆ.
24 ಕ್ಯಾರೆಟ್ ನಿಂದ 18 ಕ್ಯಾರೆಟ್ ವರೆಗಿನ ಬೆಲೆಯನ್ನು ಗಮನಿಸುವುದಾದರೆ ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 7, 723 22 ಕ್ಯಾರೆಟ್ ಚಿನ್ನದ ಬೆಲೆ 7,079, 18 ಕ್ಯಾರೆಟ್ ಚಿನ್ನದ ಬೆಲೆ 5,792 ಆಗಿದೆ.
ಚಿನ್ನದ ಬೆಲೆಯನ್ನು ಹೋಲಿಕೆ ಮಾಡಿ ನೋಡುವುದಾದರೆ ಅಕ್ಟೋಬರ್ 30 ರಂದು 10 ಗ್ರಾಂ ಚಿನ್ನದ ಬೆಲೆ 79,681 ರೂ. ಆಗಿತ್ತು. ಇದೇ ದಿನಾಂಕದಂದು ಬೆಳ್ಳಿಯ ಬೆಲೆ ಕೆಜಿಗೆ 98340 ರೂ.ತಲುಪಿತ್ತು.
ಅಂದರೆ, ಸುಮಾರು 25 ದಿನಗಳಲ್ಲಿ ಚಿನ್ನದ ಬೆಲೆ 4,230 ರೂಪಾಯಿಯಷ್ಟು ಅಗ್ಗವಾಗಿದೆ. ಬೆಳ್ಳಿ ಬೆಲೆ 10,240 ರೂ.ವರೆಗೆ ಕುಸಿದಿದೆ. ಮದುವೆಯ ಸೀಸನ್ ನಲ್ಲಿ ಬಂಗಾರದ ಬೆಲೆ ಇಳಿದಿರುವುದು ನಿಜಕ್ಕೂ ಸಂತಸದ ವಿಚಾರ.
ಇನ್ನು ಫುಚರ್ ಮಾರುಕಟ್ಟೆಯನ್ನು ಗಮನಿಸುವುದಾದರೆ ಹಳದಿ ಲೋಹದ ಬೆಲೆಯಲ್ಲಿ ಇಳಿಕೆಯಾಗಿದೆ.
ಇನ್ನು ನಿಮ್ಮ ನಗರದ ಬಂಗಾರದ ಇಂದಿನ ನಿಖರವಾದ ಬೆಲೆಯನ್ನು ತಿಳಿಯಲು ಇಂಡಿಯಾ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಶನ್‌ನ ಅಧಿಕೃತ ವೆಬ್‌ಸೈಟ್ ibjarates.com ಅನ್ನು ಸಂಪರ್ಕಿಸಬಹುದು.