Gold rate: ಭಾರೀ ಇಳಿಕೆ ಕಂಡ ಚಿನ್ನದ ಬೆಲೆ.. ಬರೋಬ್ಬರಿ 17,900 ರೂ. ಕುಸಿತ! ಇಂದಿನ ಬಂಗಾರದ ದರ ಎಷ್ಟು?
Todays Gold Rate in Bangalore: ಚಿನಿವಾರ ಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆ ಇಳಿಕೆಯಾಗಿದ್ದು ಆಭರಣ ಪ್ರಿಯರು ಸಂತಸಗೊಂಡಿದ್ದಾರೆ. in Bangalore: ಚಿನಿವಾರ ಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆ ಇಳಿಕೆಯಾಗಿದ್ದು ಆಭರಣ ಪ್ರಿಯರು ಸಂತಸಗೊಂಡಿದ್ದಾರೆ.
ಚಿನಿವಾರ ಪೇಟೆಯಲ್ಲಿ ಶುಕ್ರವಾರವೂ ಚಿನ್ನದ ಧಾರಣೆ ಇಳಿಕೆ ಕಂಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಕುಸಿತ ಕಂಡಿದೆ.
ಕಳೆದ ಎರಡು ತಿಂಗಳ ಹಿಂದೆ ಚಿನ್ನದ ಬೆಲೆ 1 ಲಕ್ಷ ರೂಪಾಯಿ ತಲುಪಲಿದೆ ಎಂಬ ವರದಿಗಳು ಬಂದಿದ್ದವು. ಇದು ಜನರನ್ನು ಆತಂಕಗೊಳಿಸಿತ್ತು. ಬಂಗಾರ ಇನ್ಮುಂದೆ ಕನಸು ಅಂತಲೇ ಭಾವಿಸಿದ್ದರು.
ಆದರೆ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಮತ್ತು ದೀಪಾವಳಿ ಹಬ್ಬದ ಬಳಿಕ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುತ್ತಿದೆ. 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ 100 ಗ್ರಾಂಗೆ 17,900 ರೂಪಾಯಿ ಇಳಿಕೆಯಾಗಿದೆ.
ಇಂದು 24 ಕ್ಯಾರಟ್ ಶುದ್ಧ ಚಿನ್ನದ ದರವು ಪ್ರತಿ ಗ್ರಾಂಗೆ 7,855 ರೂ.ಗೆ ತಲುಪಿದೆ. 10 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ 78,550 ರೂಪಾಯಿ ಆಗಿದೆ.
22 ಕ್ಯಾರಟ್ ಆಭರಣ ಬಂಗಾರ ಬೆಲೆ ಪ್ರತಿ ಗ್ರಾಂಗೆ 7,199 ರೂ. ಆಗಿದೆ. 10 ಗ್ರಾಂ 22 ಕ್ಯಾರಟ್ ಒಡವೆ ಚಿನ್ನದ ಬೆಲೆ 71,990 ರೂಪಾಯಿಯಲ್ಲಿ ವಹಿವಾಟು ನಡೆಸುತ್ತಿದೆ.
ಬೆಳ್ಳಿ ದರ ಕೆಜಿಗೆ 92,901 ರೂ.ಗೆ ಇಳಿಕೆಯಾಗಿದೆ. ಬೆಳ್ಳಿ ದರ ಕೆಜಿಗೆ 1 ಲಕ್ಷ ರೂ. ದಾಟಿತ್ತು. ಇದೀಗ 7000 ರೂಪಾಯಿ ವರೆಗೆ ಕುಸಿತ ಕಂಡಿದೆ.