Makar Sankranti 2024: ಸಂಕ್ರಾಂತಿ ಹಬ್ಬದಂದು ಅದ್ಭುತ ಯೋಗಗಳ ನಿರ್ಮಾಣ ಈ 3 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ
ಸೂರ್ಯದೇವನು ಧನು ರಾಶಿಯನ್ನು ತೊರೆದು ಮಕರ ರಾಶಿಯನ್ನು ಪ್ರವೇಶಿಸುವುದನ್ನು ಮಕರ ಸಂಕ್ರಾಂತಿ ಎಂದು ಹೇಳಲಾಗುತ್ತದೆ. ಪ್ರತಿ ವರ್ಷ ಜನವರಿ 14/15ರಂದು ಮಕರ ಸಂಕ್ರಾಂತಿ ಹಬ್ಬವನ್ನು ದೇಶಾದ್ಯಂತ ಆಚರಿಸಲಾಗುತ್ತದೆ.
ಮಕರ ಸಂಕ್ರಾಂತಿಯಲ್ಲಿ ಅದ್ಭುತ ಯೋಗಗಳ ನಿರ್ಮಾಣ: ಈ ವರ್ಷ ಜನವರಿ 15ರಂದು ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ದಿನ ಹಲವು ಶುಭ ಯೋಗಗಳು ನಿರ್ಮಾಣಗೊಳ್ಳುತ್ತಿವೆ. ಅದರಲ್ಲೂ, ವಿಶೇಷವಾಗಿ ಮಕರ ಸಂಕ್ರಾಂತಿಯಲ್ಲಿ ರವಿ ಯೋಗ ಮತ್ತು ವರಿಯಾನ್ ಯೋಗಗಳು ರೂಪುಗೊಳ್ಳುತ್ತಿದ್ದು ಕೆಲವು ರಾಶಿಯವರಿಗೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...
ಮೇಷ ರಾಶಿ: ಮಕರ ಸಂಕ್ರಾಂತಿಯಲ್ಲಿ ರೂಪುಗೊಳ್ಳುತ್ತಿರುವ ಅದ್ಭುತ ಯೋಗಗಳ ಪರಿಣಾಮವಾಗಿ ಮೇಷ ರಾಶಿಯವರು ವಿಶೇಷ ಲಾಭವನ್ನು ಪಡೆಯುತ್ತಾರೆ. ತಾಯಿ ಲಕ್ಷ್ಮಿ ಅನುಗ್ರಹದಿಂದ ನಿಮ್ಮ ಆದಾಯ ಹೆಚ್ಚಾಗಲಿದ್ದು ದೀರ್ಘ ಸಮಯದ ಆರ್ಥಿಕ ಸಂಕಷ್ಟಗಳಿಂದ ಪರಿಹಾರ ಪಡೆಯುವಿರಿ.
ಮಿಥುನ ರಾಶಿ: ಮಕರ ಸಂಕ್ರಾಂತಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ರವಿ ಯೋಗ ಮತ್ತು ವರಿಯಾನ್ ಯೋಗಗಳು ಮಿಥುನ ರಾಶಿಯವರ ಬದುಕಿನಲ್ಲಿ ಒಳ್ಳೆಯ ಸಮಯವನ್ನು ತರಲಿವೆ. ಆಯುರ್, ಆರೋಗ್ಯ್ ಆವೃದ್ಧಿಯಾಗಲಿದೆ. ವೈವಾಹಿಕ ಜೀವನವೂ ಉತ್ತಮವಾಗಿರಲಿದೆ.
ಸಿಂಹ ರಾಶಿ: ಮಕರ ಸಂಕ್ರಾಂತಿಯ ದಿನ ರೂಪುಗೊಳ್ಳುತ್ತಿರುವ ಅದ್ಭುತ ಯೋಗಗಳ ಪರಿಣಾಮವಾಗಿ ಸಿಂಹ ರಾಶಿಯವರು ವೃತ್ತಿ ಬದುಕಿನಲ್ಲಿ ಬಂಪರ್ ಪ್ರಯೋಜನವನ್ನು ಪಡೆಯಲಿದ್ದಿರಿ. ಹಠಾತ್ ಧನಲಾಭ ನಿಮ್ಮ ಹಣಕಾಸಿನ ಸ್ಥಿತಿಯನ್ನು ಉತ್ತಮಗೊಳಿಸಲಿದೆ. ಪ್ರೇಮ ಜೀವನ ಸುಮಧುರವಾಗಿರಲಿದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.