Sankranti 2023: ಜಲದಿಂದ ಮಾಡಲಾಗುವ ಈ ಉಪಾಯಗಳಿಂದ ಭಾಗ್ಯೋದಯ, ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸು
1. ಮಕರ ಸಂಕ್ರಾಂತಿಯ ದಿನದಂದು, ಬೆಳಗ್ಗೆ ಸ್ನಾನ ಮಾಡಿದ ನಂತರ, ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಿ. ಈ ದಿನ ಊಟ ಮಾಡುವಾಗ ಬಲಭಾಗದಲ್ಲಿ ಒಂದು ಲೋಟ ನೀರನ್ನು ಇರಿಸಿ. ಈ ರೀತಿ ಮಾಡುವುದರಿಂದ ಅದೃಷ್ಟ ಒಲಿದು ಬರುತ್ತದೆ ಮತ್ತು ಜೀವನದಲ್ಲಿ ಯಶಸ್ಸಿನ ದಾರಿ ಸುಗಮವಾಗುತ್ತದೆ.
2. ಮಕರ ಸಂಕ್ರಾಂತಿಯ ದಿನದಂದು ಶಿವಲಿಂಗಕ್ಕೆ ನೀರನ್ನು ಅರ್ಪಿಸುವ ಆಚರಣೆಯೂ ಇದೆ. ಈ ದಿನದಂದು ಶಿವಲಿಂಗಕ್ಕೆ ನೀರನ್ನು ಅರ್ಪಿಸುವುದರಿಂದ ಜೀವನದಲ್ಲಿನ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಈ ದಿನ ಮರಗಳು ಮತ್ತು ಗಿಡಗಳಿಗೆ ನೀರನ್ನು ನೀಡಲು ಪ್ರಯತ್ನಿಸಿ, ಇದನ್ನು ಮಾಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹರಿದುಬರುತ್ತದೆ.
3. ಹಿಂದೂ ಧರ್ಮದಲ್ಲಿ, ತುಳಸಿ ಸಸ್ಯವನ್ನು ಮಂಗಳಕರ ಮತ್ತು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಈ ಸಂದರ್ಭದಲ್ಲಿ ಮಕರ ಸಂಕ್ರಾಂತಿಯಂದು ತುಳಸಿಗೆ ನೀರನ್ನು ಅರ್ಪಿಸಿ ಪೂಜೆ ಸಲ್ಲಿಸಿ. ಇದು ಜೀವನದಲ್ಲಿ ಸಕಾರಾತ್ಮಕತೆಯನ್ನು ತರುತ್ತದೆ. ಮತ್ತೊಂದೆಡೆ, ಈ ದಿನದಂದು ಅಗತ್ಯವಿರುವವರಿಗೆ ನೀರನ್ನು ದಾನ ಮಾಡುವುದು ಬಹಳ ಪುಣ್ಯವೆಂದು ಪರಿಗಣಿಸಲಾಗಿದೆ.
4. ಮಕರ ಸಂಕ್ರಾಂತಿಯ ದಿನದಂದು ಬೆಳಗ್ಗೆ ಸ್ನಾನದ ನಂತರ ಅಶ್ವತ್ಥ ಮರಕ್ಕೆ ನೀರನ್ನು ಅರ್ಪಿಸಿ. ಇದೇ ವೇಳೆ, ಈ ದಿನ ನೀರನ್ನು ವ್ಯರ್ಥ ಮಾಡಬೇಡಿ. ಹೀಗೆ ಮಾಡುವುದರಿಂದ ಜೀವನದಲ್ಲಿ ನಕಾರಾತ್ಮಕ ಶಕ್ತಿ ದೂರಾಗುತ್ತದೆ ಮತ್ತು ಮನೆಯಲ್ಲಿ ಸಂತೋಷದ ವಾತಾವರಣ ಉಳಿಯುತ್ತದೆ.
5. ಮಕರ ಸಂಕ್ರಾಂತಿಯ ದಿನದಂದು ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದು ತುಂಬಾ ಮುಖ್ಯ. ಇದನ್ನು ಮಾಡಲು ಸಾಧ್ಯವಾಗದಿದ್ದರೆ, ನೀವು ಮನೆಯಲ್ಲಿ ಸ್ನಾನದ ನೀರಿನಲ್ಲಿ ಸ್ವಲ್ಪ ಗಂಗಾಜಲವನ್ನು ಬೆರೆಸಿ ಸ್ನಾನ ಮಾಡಬಹುದು. ಇದೇ ವೇಳೆ ಬೆಲ್ಲ ಮತ್ತು ಜೇನುತುಪ್ಪವನ್ನು ನೀರಿನಲ್ಲಿ ಬೆರೆಸಿ ಮಗುವಿಗೆ ತಿನ್ನಿಸಿದರೆ ದೃಷ್ಟಿ ದೋಷ ಬರುವುದಿಲ್ಲ ಎಂಬ ನಂಬಿಕೆಯಿದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)