ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಜನವರಿ 11ರಿಂದ ಜನವರಿ 16ರವರೆಗೆ ರಜೆ ಘೋಷಣೆ
ವರ್ಷದ ಮೊದಲ ಹಬ್ಬ 'ಮಕರ ಸಂಕ್ರಾಂತಿ' ಆಚರಣೆಗೆ ಇನ್ನೊಂದು ವಾರವಷ್ಟೆ ಬಾಕಿ ಉಳಿದಿದೆ. ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾದ ಸಂಕ್ರಾಂತಿ ಹಬ್ಬವನ್ನು ರೈತರು 'ಸುಗ್ಗಿ ಹಬ್ಬ' ಎಂತಲೂ ಆಚರಿಸುತ್ತಾರೆ.
ಮಕರ ಸಂಕ್ರಾಂತಿ ಹಬ್ಬಕ್ಕೆ ಎಲ್ಲಾ ಶಾಲಾ-ಕಾಲೇಜುಗಳಿಗೆ ಜನವರಿ 11 ರಿಂದ ಜನವರಿ 16ರವರೆಗೆ ಒಟ್ಟು ಆರು ದಿನಗಳ ಕಾಲ ರಜೆ ಘೋಷಿಸಲಾಗಿದೆ.
ತೆಲಂಗಾಣ ಸರ್ಕಾರ ಬಿಡುಗಡೆ ಮಾಡಿರುವ ಕ್ಯಾಲೆಂಡರ್ ಪ್ರಕಾರ, ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನವರಿ 11ರಿಂದ ಜನವರಿ 17ರವರೆಗೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ ಎಂದು ತೆಲಂಗಾಣ ಶಿಕ್ಷಣ ಇಲಾಖೆ ತಿಳಿಸಿದೆ.
ತೆಲಂಗಾಣದಲ್ಲಿ ಪ್ರತಿ ತಿಂಗಳ ಎರಡನೇ ಶನಿವಾರದಂದು ಶಾಲೆಗಳಿಗೆ ರಜೆ ಇರಲಿದೆ. ಜನವರಿ 11 ಎರಡನೇ ಶನಿವಾರ, ಜ. 12 ಭಾನುವಾರ ರಜೆ, ಜನವರಿ 13ರಂದು ಭೋಗಿ ಹಬ್ಬ, ಜನವರಿ 14 ಮಕರ ಸಂಕ್ರಾಂತಿ ಹಬ್ಬ, ಜನವರಿ 15 ಮತ್ತು 16ರಂದು ಕನುಮ ಹಬ್ಬ ಆಚರಣೆ ಹಿನ್ನಲೆಯಲ್ಲಿ ಶಾಲಾ-ಕಾಲೇಜುಗಳಿಗೆ ಸಾಲು ಸಾಲು ರಜೆ ಘೋಷಿಸಲಾಗಿದೆ.
ಆಂಧ್ರಪ್ರದೇಶದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನವರಿ 10ರಿಂದ ಜನವರಿ 19ರವರೆಗೆ ರಜೆ ಘೋಷಿಸಲಾಗಿದೆ. ಆದಾಗ್ಯೂ, ಕರ್ನಾಟಕದಲ್ಲಿ ಸಂಕ್ರಾಂತಿ ಹಬ್ಬಕ್ಕಾಗಿ ಜನವರಿ 14/ಜನವರಿ 15ರಂದು ಮಾತ್ರ ಶಾಲೆಗಳಿಗೆ ರಜೆ ಇರಲಿದೆ.