Makar Sankranti 2024: ಪ್ರತಿ ರಾಜ್ಯದಲ್ಲಿ ವಿಭಿನ್ನವಾಗಿ ಮಕರ ಸಂಕ್ರಾಂತಿ ಆಚರಣೆ

Wed, 10 Jan 2024-2:36 pm,

ಭಾರತ ವಿವಿಧತೆಯಲ್ಲಿ ಏಕತೆಯನ್ನು ಸಾರುವ ರಾಷ್ಟ್ರ. ಭಾರತದ ಪ್ರತಿ ರಾಜ್ಯದಲ್ಲೂ ಅದರದ್ದೇ ಆದ ವಿಭಿನ್ನ ಭಾಷೆ, ಸೊಗಡು ಕಂಡು ಬರುತ್ತದೆ. ದೇವನೊಬ್ಬ ನಾಮ ಹಲವು ಎಂಬಂತೆ ಹಬ್ಬಗಳನ್ನು ಕೂಡ ವಿವಿಧ ರಾಜ್ಯಗಳಲ್ಲಿ ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ. 

ಪ್ರತಿ ವರ್ಷ ಜನವರಿ 14 ಅಥವಾ ಜನವರಿ 15ನೇ ತಾರೀಖಿನಂದು ಗ್ರಹಗಳ ರಾಜ ಸೂರ್ಯ ಮಕರ ರಾಶಿಗೆ ಪ್ರವೇಶಿಸುತ್ತಾನೆ. ಇದನ್ನು ಮಕರ ಸಂಕ್ರಾಂತಿ ಎಂತಲೂ ಕರೆಯಲಾಗುತ್ತದೆ. ಭಾರತದಾದ್ಯಂತ ಇದನ್ನು ರೈತರು ಸುಗ್ಗಿ ಹಬ್ಬವಾಗಿ ಆಚರಿಸುತ್ತಾರೆ.   

ಮೊದಲೇ ತಿಳಿಸಿದಂತೆ ವೈವಿಧ್ಯತೆಗೆ ಹೆಸರುವಾಸಿಯಾಗಿರುವ ಭಾರತ ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶ. ಮಕರ ಸಂಕ್ರಾಂತಿ ಹಬ್ಬವನ್ನು ಸಹ ಪ್ರತಿ ರಾಜ್ಯದಲ್ಲೂ ವಿಭಿನ್ನವಾಗಿ ಆಚರಿಸಲಾಗುತ್ತದೆ. ಹಾಗಿದ್ದರೆ, ಮಕರ ಸಂಕ್ರಾಂತಿ ಹಬ್ಬವನ್ನು ಯಾವ ರಾಜ್ಯದಲ್ಲಿ ಹೇಗೆ ಆಚರಿಸಲಾಗುತ್ತದೆ ಎಂದು ನೋಡುವುದಾದರೆ... 

ಉತ್ತರ ಪ್ರದೇಶ:  ಪ್ರತಿ ವರ್ಷ ಮಕರ ಸಂಕ್ರಾಂತಿಯಲ್ಲಿ ಉತ್ತರ ಪ್ರದೇಶದ ಜನ ಗಂಗಾ ನದಿಯಲ್ಲಿ ಪುಣ್ಯ ಸ್ನಾನ ಮಾಡುತ್ತಾರೆ. ಮಾತ್ರವಲ್ಲ, ಈ ಸಂದರ್ಭದಲ್ಲಿ ಕೆಲವು ಪ್ರದೇಶಗಳಲ್ಲಿ ಜಾತ್ರೆಗಳನ್ನು ಕೂಡ ಆಯೋಜಿಸುತ್ತಾರೆ. 

ಪಶ್ಚಿಮ ಬಂಗಾಳ:  ಪಶ್ಚಿಮ ಬಂಗಾಳದಲ್ಲಿ ಮಕರ ಸಂಕ್ರಾಂತಿಯನ್ನು ಪೌಶ್ ಪರ್ವ್ ಎಂದು ಕರೆಯಲಾಗುತ್ತದೆ. ಈ ದಿನ ಗಂಗಾಸಾಗರದಲ್ಲಿ ಜಾತ್ರೆಗಳನ್ನು ಆಯೋಜಿಸಲಾಗುತ್ತದೆ ಮತ್ತು ಈ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಾರೆ.

ದಕ್ಷಿಣ ಭಾರತ:  ದಕ್ಷಿಣ ಭಾರತದ ಕರ್ನಾಟಕ ಮತ್ತು ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ಈ ಹಬ್ಬವನ್ನು ಮಕರ ಸಂಕ್ರಾಂತಿ ಎಂದು ಆಚರಿಸಲಾಗುತ್ತದೆ. ಇದೇ ವೇಳೆ ತಮಿಳುನಾಡಿನಲ್ಲಿ ಈ ಹಬ್ಬವನ್ನು ಪೊಂಗಲ್ ಎಂದು ಆಚರಿಸಲಾಗುತ್ತದೆ. ತಮಿಳುನಾಡಿನಲ್ಲಿ ಪೊಂಗಲ್ ಅನ್ನು ನಾಲ್ಕು ದಿನಗಳ ಕಾಲ ಆಚರಿಸಲಾಗುತ್ತದೆ. ಮೊದಲ ದಿನವನ್ನು ಭೋಗಿ - ಪೊಂಗಲ್ ಎಂದು, ಎರಡನೇ ದಿನವನ್ನು ಸೂರ್ಯ - ಪೊಂಗಲ್ ಎಂತಲೂ, ಮೂರನೇ ದಿನವನ್ನು ಮಟ್ಟು - ಪೊಂಗಲ್ ಎಂತಲೂ ಆಚರಿಸಿದರೆ, ನಾಲ್ಕನೇ ದಿನವನ್ನು  ಕನ್ಯಾ - ಪೊಂಗಲ್ ಎಂದು ಆಚರಿಸಲಾಗುತ್ತದೆ. 

ಅಸ್ಸಾಂ: ಅಸ್ಸಾಂನಲ್ಲಿ ಮಕರ ಸಂಕ್ರಾಂತಿಯನ್ನು ಮಗ್ ಬಿಹು ಅಥವಾ ಬಿಹು ಎಂದು ಕರೆಯಲಾಗುತ್ತದೆ. ಈ ಸುಗ್ಗಿ ಹಬ್ಬದಲ್ಲಿ ರೈತರು ಬೆಳೆದ ಬೆಳೆಗಳನ್ನು ಬಳಸಿ ನಾನಾ ಬಗೆಯ ಖಾದ್ಯಗಳನ್ನು ತಯಾರಿಸಲಾಗುತ್ತದೆ. 

ಗುಜರಾತ್:  ಗುಜರಾತ್‌ನಲ್ಲಿ ಮಕರ ಸಂಕ್ರಾಂತಿಯನ್ನು ಉತ್ತರಾಯಣ ಎಂದು ಕರೆಯಲಾಗುತ್ತದೆ. ಈ ಹಬ್ಬದಂದು ಇಲ್ಲಿ ಗಾಳಿಪಟ ಉತ್ಸವವನ್ನು ಆಯೋಜಿಸಲಾಗುತ್ತದೆ. ಗುಜರಾತ್ ಹೊರತಾಗಿ ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿಯೂ ಮಕರ ಸಂಕ್ರಾಂತಿ ಹಬ್ಬದಂದು ಗಾಳಿಪಟ ಉತ್ಸವವನ್ನು ಆಯೋಜಿಸಲಾಗುತ್ತದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link