ಮಕರ ಸಂಕ್ರಾಂತಿಯಂದು ಈ ಕೆಲಸ ಮಾಡಿದ್ರೆ ಹೆಚ್ಚಿನ ಆರ್ಥಿಕ ಲಾಭ & ಪ್ರತಿಯೊಂದು ಕೆಲಸದಲ್ಲೂ ಯಶಸ್ಸು!

Sun, 14 Jan 2024-1:40 pm,

ಮಕರ ಸಂಕ್ರಾಂತಿಯನ್ನು ಪ್ರತಿವರ್ಷ ಸೂರ್ಯನು ಮಕರ ರಾಶಿಗೆ ಸಂಕ್ರಮಿಸಿದಾಗ ಆಚರಿಸಲಾಗುತ್ತದೆ. ಈ ದಿನವನ್ನು ಗ್ರಹಗಳ ರಾಜನಾದ ಸೂರ್ಯನಿಗೆ ಸಮರ್ಪಿಸಲಾಗಿದೆ. ಈ ದಿನ ಸೂರ್ಯನ ಮಗ ಶನಿದೇವನ ಚಿಹ್ನೆಯಾದ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಈ ದಿನ ಕೈಗೊಂಡ ಕೆಲವು ಕ್ರಮಗಳು ಸೂರ್ಯ ಮತ್ತು ಶನಿಯ ವಿಶೇಷ ಆಶೀರ್ವಾದದಿಂದ ಸಾಕಷ್ಟು ಪ್ರಗತಿ ಮತ್ತು ಆರ್ಥಿಕ ಲಾಭವನ್ನು ತರುತ್ತವೆ.

ಸೂರ್ಯ ದೇವರು ಶಕ್ತಿ, ಆತ್ಮ, ಯಶಸ್ಸು ಮತ್ತು ತಂದೆಯ ಅಂಶವಾಗಿದೆ. ನೀವು ಜಾತಕದಲ್ಲಿ ಸೂರ್ಯನನ್ನು ಬಲಪಡಿಸಲು ಬಯಸಿದರೆ ನಿಮ್ಮ ತಂದೆಯ ಸೇವೆಯನ್ನು ನಿಸ್ವಾರ್ಥವಾಗಿ ಮಾಡಿ. ಹೀಗೆ ಮಾಡುವುದರಿಂದ ಸೂರ್ಯನು ಬಲಶಾಲಿಯಾಗುತ್ತಾನೆ ಮತ್ತು ಶುಭ ಫಲಿತಾಂಶಗಳನ್ನು ನೀಡುತ್ತಾನೆ. ನಿಮ್ಮ ವೃತ್ತಿಯಲ್ಲಿ ನೀವು ಸಾಕಷ್ಟು ಪ್ರಗತಿಯನ್ನು ಪಡೆಯುತ್ತೀರಿ.

ನೀವು ಹಣಕಾಸಿನ ಅಡಚಣೆಗಳಿಂದ ತೊಂದರೆಗೀಡಾಗಿದ್ದರೆ ಅಥವಾ ನಿಮ್ಮ ಕೆಲಸದಲ್ಲಿ ಅಡೆತಡೆಗಳನ್ನು ಎದುರಿಸುತ್ತಿದ್ದರೆ, ಮಕರ ಸಂಕ್ರಾಂತಿಯಂದು ಬೆಳಗ್ಗೆ ನಿಮ್ಮ ಮನೆಗೆ ಸೂರ್ಯ ದೇವರ ವಿಗ್ರಹ ಅಥವಾ ಚಿತ್ರವನ್ನು ತಂದು ಪೂಜೆಯ ನಂತರ ನಿಮ್ಮ ಮನೆಯ ಪೂರ್ವ ದಿಕ್ಕಿನಲ್ಲಿ ಇರಿಸಿ. ನಂತರ ಪ್ರತಿದಿನ ಬೆಳಗ್ಗೆ ಎದ್ದಕೂಡಲೇ ಸ್ನಾನ ಮಾಡಿ ಭಕ್ತಿಯಿಂದ ಪೂಜಿಸಿ. ಇದರಿಂದ ಆರ್ಥಿಕ ನಿಮ್ಮ ಪರಿಸ್ಥಿತಿ ಸುಧಾರಿಸುತ್ತದೆ.

ಪ್ರತಿದಿನ ಬೆಳಗ್ಗೆ ಸ್ನಾನದ ನಂತರ ಸೂರ್ಯದೇವರಿಗೆ ಅರ್ಘ್ಯವನ್ನು ಅರ್ಪಿಸಿ. ಇದಕ್ಕಾಗಿ ತಾಮ್ರದ ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಅದರಲ್ಲಿ ಸ್ವಲ್ಪ ಅಕ್ಷತೆಯನ್ನು ಹಾಕಿ, ನಂತರ ಈ ನೀರಿನಿಂದ ಅರ್ಘ್ಯವನ್ನು ಅರ್ಪಿಸಿ. ಮಕರ ಸಂಕ್ರಾಂತಿಯ ದಿನದಿಂದ ಈ ಪರಿಹಾರಗಳನ್ನು ಪ್ರಾರಂಭಿಸಿ. ಸಾಧ್ಯವಾದರೆ, ಸೂರ್ಯ ದೇವರಿಗೆ ಕೆಂಪು ಹೂವುಗಳನ್ನು ಅರ್ಪಿಸಿ. ನೀವು ಪ್ರತಿ ಕೆಲಸದಲ್ಲಿ ಯಶಸ್ಸನ್ನು ಪಡೆಯಲು ಪ್ರಾರಂಭಿಸುತ್ತೀರಿ.

ಮಕರ ಸಂಕ್ರಾಂತಿಯ ದಿನದಂದು ದಾನ ಮಾಡಿ. ಇದಕ್ಕಾಗಿ ಮೊದಲು ಕಪ್ಪು ಎಳ್ಳು ಸೇರಿಸಿ ಸ್ನಾನ ಮಾಡಿ. ನಂತರ ಕಪ್ಪು ಎಳ್ಳನ್ನು ನೀರಿನಲ್ಲಿ ಬೆರೆಸಿ ಸೂರ್ಯದೇವರಿಗೆ ಅರ್ಘ್ಯವನ್ನು ಅರ್ಪಿಸಿ. ಇದರ ನಂತರ ಕಪ್ಪು ಎಳ್ಳು, ಕೆಂಪು ಬಟ್ಟೆ ಮತ್ತು ಬೆಲ್ಲವನ್ನು ಅಗತ್ಯವಿರುವ ವ್ಯಕ್ತಿಗೆ ದಾನ ಮಾಡಿ. ಈ ಪರಿಹಾರವು ನಿಮ್ಮ ಜೀವನದಲ್ಲಿ ಅನೇಕ ಧನಾತ್ಮಕ ಬದಲಾವಣೆಗಳನ್ನು ತರಬಹುದು.

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link